ಆರಂಭದಲಿ ನಮಿಪೆ ಬಾಗಿ ಶಿರವ
ಹೇರಂಬ ನೀನೊಲಿದು ನೀಡೆನಗೆ – ವರವ ||pa||
ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆ
ಹರುಷದಲಿ ಕರಜಿಹ್ವೆ ಎರಡರಿಂದ
ಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದ
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||1||
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ ||
ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿ
ಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ||2||
ಸೋಮಶಾಪದ ವಿಜಿತ | ಕಾಮ ಕಾಮಿತ ದಾತ
ವಾಮ ದೇವನ ತನಯ ನೇಮದಿಂದ
ಶ್ರೀಮನೋಹರನಾಥ ಶಾಮಸುಂದರ ಸ್ವಾಮಿ ನಾಮ
ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||3||
Aarambhadali namipe baagi shiravaa |
( herambha neenolidu) needenage varavaa || pa ||
Dwirada vadanane niruta | dwirada vadanana mahime
Harushadali karajihwe eradarimdaa
Baredu paaduvudakke baruva vignava taridu |
Karunadimdali enna kara pididu salahemdu || 1 ||
Kumbhinije patiraama | jambhaari dharmajaru
Ambaraadhipa raktaambharane ninna
Sambhramadi poojisidaremba vaaruti keli
Hambalava salisemdu nambi ninnadigalige || 2 ||
Soma shaapada vijita | kaama kaamita daata
Vaama devana tanayaa nemadimdaa
Shreemanoharanaada shyaamasumdaraswaami naama
Neneyuva bhaagya premadali kodu emdu || 3 ||
it would be really very very helpful if you could add which raag each composition is composed in,
LikeLike