ವಂದಿಸು ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು ||pa||
ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ ||1||
ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರ ಕಂಡು ||2||
ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿ ನಿರಂತರ
ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ ||3||
vandisu guru satyasandha muniyA
vRundAvanake haruShadinda endendu ||pa||
gangA prayAga gayA SrISailahObala Bu
jangAdri modalAda kShEtragaLanu
ingitaj~jara sahita saMbandha gaisi varamahiSha
tungAtaTadi vAsavAgippa yativarage ||1||
BUdEvanuta satyabOdha munivara kara
vEdikadoLudBavisida kalpavRukSha
sAdhujanarige bEDidiShTArthagaLa
mOdadi koDuva mahimara kanDu ||2||
SrI manOramana ativimalatara SAstra
nAmAvaLige suvyAKyAna racisi
dhImanta janarigupadESisi nirantara
dhAma jagannAtha viThalana olume paDedavarige ||3||