dasara padagalu · MADHWA · purandara dasaru

Ba ba ranga bujangasayana

ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ||pa||

ಬಾ ಬಾ ಎನ್ನಂತರಂಗ ಮಲ್ಲರಗಜ ಸಿಂಗ ದುರಿತ ಭವಭಂಗ||a.pa||

ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯಿದ ಉಲ್ಲಾಸ
ಇಭವರದನೆ ಶ್ರೀನಿವಾಸ||1||

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನ ಕಾವ||2||

ಚಂದ್ರ ಪುಷ್ಕರಿಣಿಯ ತೀರವಿಹಾರ
ಇಂದ್ರಾದಿ ಸುರ ಪರಿವಾರ
ಚಂದ್ರಶೇಖರ ನುತನಾದ ಸುಖ-
ಸಾಂದ್ರ ಸುಗುಣ ಗಂಭೀರ||3||

ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿ-
ಭೀಷಿಣಗೊಲಿದ ಸುಪ್ರಾಣ||4||

ಶಂಬರಾರಿಯ ಪಿತ ಡಂಬರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರು ನಾರದಕೃತ ಸ್ತೋತ್ರ||5||

Ba ba ranga bujangasayana komalanga krupapanga||pa||

Ba ba ennantaranga mallaragaja singa durita bavabanga||a.pa||

Ubaya kaveriya madhyanivasa
Abayadayaka mandahasa
Sabeyolu satiyala kayida ullasa
Ibavaradane srinivasa||1||

Elu prakarada malige maneyolage
Galiya devara deva
Solasasira gopiyaralida I-
Relu lokada jana kava||2||

Camdra pushkariniya tiravihara
Indradi sura parivara
Candrasekara nutanada suka-
Sandra suguna gambira||3||

Ishanatrayagala dushita nirata a-
Sesha vibava janapala
Bushita nana vastrabarana vi-
Bishinagolida suprana||4||

Sambarariya pita dambarahita mana
Ambujadalanibanetra
Kambucakradhara purandaravithala
Tumburu naradakruta stotra||5||

dasara padagalu · MADHWA · purandara dasaru

Nimma bagya doddado namma bagya

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ||pa||

ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ||a.pa||

ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ||1||

ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಳಸಿಮಾಲೆಗಿನ್ನು ಅರ ಅಂಜಿಕಿಲ್ಲವಯ್ಯ||2||

ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ||3||

ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ||4||

ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು||5||

 Nimma bagya doddado namma bagya doddado||pa||

Sammatinda navu nivu sati madi noduva||a.pa||

Hema honnu hanagalige herala bayagaluntu
Ramanama dravyakinnu yara Bayavillavayya||1||

Kadaga kanthamalegalige kallara anjikeyuntu
Adavi tulasimaleginnu ara anjikillavayya||2||

Vyapara udyogakinnu vyakulada bayavuntu
Gopalada vruttiginnu godave yaradillavayya||3||

Saraku bella tuppa dhanya saveditemba cinteyuntu
Harinamamrutake innu yava cinteyillavayya||4||

Nimma bagya lakshmidevi namma bagya narayananu
Namma nimma bagyadodeya purandaravithalanu||5||

dasara padagalu · MADHWA · purandara dasaru

Nine anathabandhu

ನೀನೆ ಅನಾಥಬಂಧು ಕಾರುಣ್ಯಸಿಂಧು||pa||

ಮದಗಜವೆಲ್ಲ ಕೂಡಿದರೇನು ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ||1||

ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ||2||

ಶಿಲೆಯ ರಕ್ಷಿಸಿ ಕುಲಕೆ ತಂದೆ ಬಲಿಗೆ ಒಲಿದು ಪದವಿಯಿತ್ತೆ
ಸುಲಭದಿ ಭಕ್ತರ ಸಲುಹುವ ನಮ್ಮ
ಚೆಲುವ ಪುರಂದರವಿಟ್ಠಲರಾಯ||3||

Nine anathabandhu karunyasimdhu||pa||

Madagajavella kudidarenu adara vyalyake odagalilla
Madananayya madhusudana ennalu
Mudadindali bamdodagide krushna||1||

Patigalaivariddarenu satiya Banga bidisalilla
Gati nine mukunda ennalu
Ativegadi akshayavitte krushna||2||

Sileya rakshisi kulake tamde balige olidu padaviyitte
Sulabadi Baktara saluhuva namma
Celuva purandaravitthalaraya||3||

dasara padagalu · MADHWA · purandara dasaru

Paraku madade parambarisi

ಪರಾಕು ಮಾಡದೆ ಪರಾಂಬರಿಸಿ ಎನ್ನ ಅ-
ಪರಾಧಂಗಳ ಕ್ಷಮಿಸೋ||pa||

ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ||a.pa||

ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರಿಯೆ ಶ್ರೀ ಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು||1||

ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿ ಆ ಪಾಪಗಳನೆಲ್ಲ
ಅಪಹೃತವ ಮಾಡೊ ಅಪಾರ ಮಹಿಮನೆ||2||

ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ
ಸಿರಿಯರಸ ನಿನ್ನ ಸರಿ ಯಾರ ಕಾಣೆ
ಪುರಾರಿನುತ ಸಿರಿ ಪುರಂದರವಿಠಲ||3||

Paraku madade parambarisi enna a-
Paradhangala kshamiso||pa||

Dhararamana panidharamararcita
Suradhipati vidhi haradi vandita||a.pa||

Nararolage pamaranu naniha
Parake sadhanavariye sri hariye
Saranu hokke ninna carana kamalake
Karunadinda ninna smarane enagittu||1||

Japavanariyenu tapavanariyenu
Upavasa vratagalanariye sri hariye
Krupavalokanadi A papagalanella
Apahrutava mado apara mahimane||2||

Karirajanuddharisi draupadiya
More lalisi taralanigolidu ni porede
Siriyarasa ninna sari yara kane
Purarinuta siri purandaravithala||3||

dasara padagalu · MADHWA · purandara dasaru

Dayamado ranga dayamado

ದಯಮಾಡೊ ರಂಗ ದಯಮಾಡೊ||pa||

ದಯಮಾಡೊ ನಿನ್ನ ದಾಸನು ನಾನೆಂದು||a.pa||

ಹಲವು ಕಾಲದಿ ನಿನ್ನ ಹಂಬಲು ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ||1||

ಇಹಪರಗತಿ ನೀನೆ ಇಂದಿರಾರಮಣ
ಭಯವೇಕೊ ನೀನಿರಲು ಭಕ್ತರಭಿಮಾನಿ||2||

ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲನೆ ಹರಿಸಾರ್ವಭೌಮ||3||

Dayamado ranga dayamado||pa||

Dayamado ninna dasanu nanendu||a.pa||

Halavu kaladi ninna hambalu enage
Olidu palisabeku varijanaba||1||

Ihaparagati nine indiraramana
Bayaveko niniralu baktarabimani||2||

Karirajavaradane kamita Palada
Purandaravithalane harisarvabauma||3||

dasara padagalu · MADHWA · purandara dasaru

Dari yavudayya vaikunthake dari torisayya

ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ||pa||

ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ-
ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ||a.pa||

ಬಲು ಭವದನುಭವದಿ ಕತ್ತಲೆಯೊಳು
ಬಲು ಅಂಜುತೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೊ ನಾರಾಯಣ||1||

ಪಾಪ ಪೂರ್ವದಲ್ಲಿ ಮಾಡಿದುದಕೆ
ಲೇಪವಾಗಿದೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪನಾರಾಯಣ||2||

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ
ನಿನ್ನ ದಾಸನಾದೆನೊ
ಪನ್ನಗಶಯನ ಶ್ರೀ ಪುರಂದರವಿಠಲ
ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ||3||
Dari yavudayya vaikunthake dari torisayya||pa||

Dari yavudayya dari torisayya A-
Dhara muruti ninna pada seruvudakke||a.pa||

Balu bavadanubavadi kattaleyolu
Balu anjute nadugi
Balalutta tirugide hadiya kanade
Holevantha dariya toro narayana||1||

Papa purvadalli madidudake
Lepavagide karma
I pariyindali ninna nenesikombe
Sripati salahenna bupanarayana||2||

Innu na janisalare bumiya mele
Ninna dasanadeno
Pannagasayana sri purandaravithala
Innu puttisadiro enna narayana||3||

dasara padagalu · MADHWA · purandara dasaru

Govinda ninnananda sakala

ಗೋವಿಂದಾ ನಿನ್ನಾನಂದ ಸಕಲ ಸಾಧನವೋ||pa||

ಅಣುರೇಣು ತೃಣಕಾಷ್ಠ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೆ ಆನಂದ||1||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯೋದೆ ಆನಂದ||2||

ಮಂಗಳಮಹಿಮ ಪುರಂದರವಿಟ್ಠಲ
ಹಿಂಗದೆ ದಾಸರ ಸಲಹೋದೆ ಆನಂದ||3||
Govinda ninnananda sakala sadhanavo||pa||

Anurenu trunakashtha paripurna govinda
Nirmalatmakanagi iruvude Ananda||1||

Srushti sthiti laya karana govinda
I pari mahimeya tiliyode Ananda||2||

Mangalamahima purandaravitthala
Hingade dasara salahode Ananda||3||

dasara padagalu · MADHWA · purandara dasaru

Chinte yatako bayala branti yatako

ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ||pa||

ಏಳುತುದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ?||1||

ಸಡಗರದಲಿ ನಾರಿಜನರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಪಿಡಿದು ರಕ್ಷಣೆ ಮಾಳ್ಪರಾರು||2||

ಹೆತ್ತ ತಾಯಿ ಸತ್ತ ಶಿಶುವು
ಮತ್ತೆ ಕೆಟ್ಟಿತೆಂಬರು ಜನರು
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ-
ನಿತ್ತು ರಕ್ಷಣ ಮಾಡುವರಾರು||3||

ಗಟ್ಟಿ ಮಣ್ಣಿನ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸುವಂಥ
ಕೊಟ್ಟ ದೈವ ಕೊಂಡೊಯ್ದರೆ
ಕುಟ್ಟಿಕೊಂಡು ಅಳುವುದೇಕೆ||4||

ನಂಬಿಗೆಗಿವು ಸಾಲವೆಂದು
ಹಂಬಲಿಪುದು ಲೋಕವೆಲ್ಲ
ನಂಬಿ ಪುರಂದರವಿಠಲ-
ನೆಂಬ ನಾಮ ನುಡಿದ ಮೇಲೆ||5||
Chinte yatako bayala branti yatako
Kantupitana divyanama mantraviralu japisade||pa||

Elutudaya kaladalli
Veleyaritu kuguvantha
Koli tanna marige moleya
Hala kottu salahite?||1||

Sadagaradali narijanaru
Hadeyuvaga sulagitti
Adaviyolage heruva mrugava
Pididu rakshane malpararu||2||

Hetta tayi satta sisuvu
Matte kettitembaru janaru
Huttina havige gubbige moleya-
Nittu rakshana maduvararu||3||

Gatti mannina sisuva madi
Hotteyolage irisuvamtha
Kotta daiva kondoydare
Kuttikondu aluvudeke||4||

Nambigegivu salavendu
Hambalipudu lokavella
Nambi purandaravithala-
Nemba nama nudida mele||5||

dasara padagalu · MADHWA · purandara dasaru

Jayamangalam nitya subamangalam

ಜಯಮಂಗಳಂ ನಿತ್ಯ ಶುಭಮಂಗಳಂ||pa||

ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ||1||

ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ
ಮಾರನನು ಪಡೆದ ಮಂಗಲಮೂರ್ತಿಗೆ
ಚಾರುಚರಣದಿಂದ ಚೆಲುವ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಿಗೆ||2||

ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವನ ಮೂರ್ತಿ ಪುರಂದರವಿಟ್ಠಲಗೆ
ದಾಸರನು ಕಾಯ್ವ ರುಕ್ಮಿಣಿರಮಣಗೆ||3||
Jayamangalam nitya subamangalam||pa||

Indivarakshage ibarajavaradage
Indiraramana govinda harige
Nandana kandage navanita corage
Vrumdarakendra udupiya krushnage||1||

Kshirabdhivasage kshitijana palage
Marananu padeda mangalamurtige
Carucaranadinda celuva gangeya padeda
Karunyamurti kaustubadharige||2||

Vyasavatarage veda uddharage
Vasitanantapada sakalesage
Vasudevana murti purandaravitthalage
Dasaranu kayva rukminiramanage||3||

dasara padagalu · MADHWA · purandara dasaru

Jaliya maradante dhareyolu durjanaru

ಜಾಲಿಯ ಮರದಂತೆ ಧರೆಯೊಳು ದುರ್ಜನರು||pa||

ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ||a.pa||

ಬಿಲಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ||1||

ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತತ್ವಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ||2||

ತನ್ನಿಂದ ಉಪಕಾರ ತೊಟಕಾದರು ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ||3||

Jaliya maradante dhareyolu durjanaru||pa||

Mulagra pariyante mullu kudippante||a.pa||

Bililalli balali bandavarige neralilla
Hasidu bandavarige hannu illa
Kusuma vasaneyilla kudalu sthalavilla
Rasadalli svadavu vishadante irutiha||1||

Ura handige shadrasannavanikkalu
Naruva durgandha bidaballude
Gorapapige tatvaj~janava pelalu
Krura karmava bittu sujananaguvane||2||

Tanninda upakara totakadaru illa
Binnanada matige koneyilla
Annakke serida kunni manavarante
Innivara karyavu purandaravithala||3||