dasara padagalu · MADHWA · purandara dasaru

Hari hararu hege samaru

ಹರಿ ಹರರು ಹೇಗೆ ಸಮರು
ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ||

ಹರಿಯ ಮಂದಿರ ವೈಕುಂಠಸ್ಥಾನ
ಹರನ ಮಂದಿರ ಶ್ಮಶಾನ
ಹರಿಯ ಪಟ್ಟದ ರಾಣಿ ಸಿರಿದೇವಿ ಎಂಬರು
ಹರನ ಪಟ್ಟದ ರಾಣಿ ಗಿರಿಜೆ ಎಂಬರು ||

ಹರಿಯು ಉಡುವೋದು ಪೀತಾಂಬರ
ಹರನುಡುವೋದು ಚರ್ಮಾಂಬರ
ಹರಿಯು ಪೂಸುವುದು ಶ್ರೀಗಂಧ ಕಸ್ತೂರಿ
ಹರನು ಪೂಸುವುದು ಶ್ಮಶಾನದ ಬೂದಿ ||

ಹರಿಯ ಕೊರಳೊಳು ಕೌಸ್ತುಭರನ್ನ
ಹರನ ಕೊರಳೊಳು ಗರಳದ ಚಿಹ್ನ
ಹರಿಯ ಆಯುಧವು ವರಶಂಖಚಕ್ರ
ಹರನ ಆಯುಧವು ತ್ರಿಶೂಲ ಡಮರು ||

ಹರಿಯ ಪರಿವಾರ ಬ್ರಹ್ಮಾದಿ ಸುರರು
ಹರನ ಪರಿವಾರ ಹೆಣನ ತಿಂಬುವರು
ಹರಿಹರಿ ಎಂಬೋರು ಸಿರಿವಂತರಾಗುವರು
ಹರಹರ ಎಂಬೋರು ಹತರಾಗುವರು ||

ಹರಿಗೆ ವಾಹನನಾದ ಖಗರಾಜನು
ಹರಗೆ ವಾಹನ ಗೋರಾಜನು
ಪುರಂದರವಿಠಲಗೆ ಸರಸಿಜಾಸನ ಪುತ್ರ
ಹರ ಆಗಮೋಕ್ತ ಆದನು ಪೌತ್ರ ||

Hari hararu hege samaru
Harihara Baktare idake sakshi ||pa||

Hariya mandira vaikunthasthana
Harana mandira smasana
Hariya pattada rani siridevi embaru
Harana pattada rani girije embaru ||

Hariyu uduvodu pitambara
Haranuduvodu carmambara
Hariyu pusuvudu srigandha kasturi
Haranu pusuvudu smasanada budi ||

Hariya koralolu kaustubaranna
Harana koralolu garalada cihna
Hariya Ayudhavu varasankacakra
Harana Ayudhavu trisula Damaru ||

Hariya parivara brahmadi suraru
Harana parivara henana timbuvaru
Harihari emboru sirivamtaraguvaru
Harahara emboru hataraguvaru ||

Harige vahananada kagarajanu
Harage vahana gorajanu
Purandaravithalage sarasijasana putra
Hara agamokta Adanu pautra ||

bharathi devi · dasara padagalu · MADHWA · purandara dasaru

Saranu bharatidevige

ಶರಣು ಭಾರತಿದೇವಿಗೆ
ಶರಣು ವಾಯುರಮಣಿಗೆ ||ಪ||

ಶರಣು ಶರಣರ ಪೊರೆವ ಕರುಣಿಗೆ
ಶರಣು ಸುರವರ ದೇವಿಗೆ ||ಅ.ಪ||

ಸುರರು ಮೊದಲಾದವರಿಗೆಲ್ಲ
ಪರಮ ಮಂಗಳವೀವಳೆ
ಚರಣಕಮಲಕೆ ಮೊರೆಯ ಹೊಕ್ಕೆನು
ಕರುಣಿಸೆನಗೆ ಸುಮಂಗಳ

ಪಿಂಗಳರೂಪಳೆ ಮಂಗಳಮಹಿಮಳೆ
ಹಿಂಗದೆ ಕೊಡು ಹರಿಭಕುತಿಯ
ರಂಗನಾ ಪದಾಬ್ಜ ಭೃಂಗಳೆ
ಸಂಗೀತಕ್ಕೆ ಬಹುಪ್ರಿಯಳೆ

ಪಕ್ಷಿವಾಹನ ಲಕ್ಷ್ಮಿರಮಣನ
ದಕ್ಷ ಪುರಂದರವಿಠಲನ
ಅಕ್ಷಯದಿಂದಲಿ ಭಜಿಸುವಲೆ
ರಕ್ಷಿಸೆನ್ನನು ಅನುದಿನ

Saranu bharatidevige
Saranu vayuramanige ||pa||

Saranu saranara poreva karunige
Saranu suravara devige ||a.pa||

Suraru modaladavarigella
Parama mangalavivale
Caranakamalake moreya hokkenu
Karunisenage sumangala

Pingalarupale mangalamahimale
Hingade kodu haribakutiya
Rangana padabja brungale
Sangitakke bahupriyale

Pakshivahana lakshmiramanana
Daksha purandaravithalana
Akshayadindali Bajisuvale
Rakshisennanu anudina

bharathi devi · dasara padagalu · MADHWA · purandara dasaru

Bharatidevi taye ni kaye

ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ||
ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ||

ಪನ್ನಗೇಶ ಸುಪರ್ಣ ಪನ್ನಗ ಭೂಷಣ
ಚಿನ್ನುಮಯ ಸುರರಿಂ ಸೇವಿತೆ
ಘನ್ನ ಮಹಿಮಳೆ ಇನ್ನೇನ ಬಣ್ಣಿಪೆ
ನಿನ್ನ ಪತಿಗೆ ಬಿನ್ನವಿಸೆನ್ನನುದ್ಧರಿಸಮ್ಮ

ಮುಕ್ತಾಮುಕ್ತರೊಡೆಯಳೆ ತತ್ವಾಭಿಮಾನಿ
ರಕ್ತಶುಕ್ಲ ಸಂಬಂಧತನು ದೂರಳೆ
ಉತ್ತಮ ಗುಣನಿಧಿ ಶ್ರೀಶನ ಭಜಿಪಳೆ
ಚಿತ್ತ ಬಂದಂತೆನ್ನ ಭೃತ್ಯನೆಂದೆಣಿಸಮ್ಮ

ಮತ್ತೊಂದು ಅನ್ಯಾಶ್ರಯವು ನೋಡಿದರಿಲ್ಲ
ಇತ್ತ ಬಾರೆಂತೆಂದು ಕರೆವರಿಲ್ಲ
ಚಿತ್ತಜನಯ್ಯ ಶ್ರೀ ಪುರಂದರವಿಠಲನ
ಭೃತ್ಯರ ಭೃತ್ಯರ ಭೃತ್ಯನಂದೆಣಿಸಮ್ಮ

Bharatidevi taye ni kaye marutana raniye ||pa||
Seride ninna pada sevakanenisamma ||pa||

Pannagesa suparna pannaga bushana
Cinnumaya surarim sevite
Ganna mahimale innena bannipe
Ninna patige binnavisennanuddharisamma

Muktamuktarodeyale tatvabimani
Raktasukla sambandhatanu durale
Uttama gunanidhi srisana bajipale
Citta bandantenna brutyanendenisamma

Mattondu anyasrayavu nodidarilla
Itta barentendu karevarilla
Cittajanayya sri purandaravithalana
Brutyara brutyara brutyanandenisamma

dasara padagalu · MADHWA · purandara dasaru

Gali banda kaiyalli

ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ||ಪ||

ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ|| ಅ. ಪ||

ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿಲ್ಲ|
ವ್ಯರ್ಥವಾಗಿ ಕೆಡದೆ ಪುರು | ಷೋತ್ತಮನ ನೆನೆಯಿರೊ||೧||

ಕದ್ದು ಪುಸಿಯನಾಡಿ ಅವರ | ಬುದ್ಧಿಯಿಂದ ಕೆಡಲು ಬೇಡಿ|
ಬುದ್ಧಿವಂತರಾಗಿ ಅನಿ | ರುದ್ಧನನ್ನು ನೆನೆಯಿರೊ||೨||

ಭಕ್ತಿ ಕೊಡುವ ಮುಕ್ತಿ ಕೊಡುವ | ಮತ್ತೆ ಸಾಯುಜ್ಯವ ಕೊಡುವ|
ಕರ್ತೃ ನಮ್ಮ ಪುರಂದರ | ವಿಠಲನ್ನ ನೆನೆಯಿರೊ||೩||

Gali banda kaiyalli turikolliro||pa||

Baya mucca bedi narayanana neneyiro|| a. Pa||

Nityavilla nemavilla | matte dana dharmavilla|
Vyarthavagi kedade puru | shottamana neneyiro||1||

Kaddu pusiyanadi avara | buddhiyinda kedalu bedi|
Buddhivantaragi ani | ruddhanannu neneyiro||2||

Bakti koduva mukti koduva | matte sayujyava koduva|
Kartru namma purandara | vithalanna neneyiro||3||

dasara padagalu · hanuma · MADHWA · purandara dasaru

Sevakatanada ruci yenaridyo

ಸೇವಕತನದ ರುಚಿಯೇನರಿದ್ಯೋ |
ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ||

ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ
ಮದುವೆಯ ಮಾಡೆನ್ನಬಾರದಿತ್ತೇ
ಪದದಿ ಪಾಷಾಣವ ಪೆಣ್ಣ ಮಾಡಿದವಗೆ
ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೧||

ಕ್ಷಣದಲಿ ಸಂಜೀವನ ಗಿರಿ ತಂದಾಗ
ಹಣ ಹೊನ್ನು ಬೇಡಲು ಕೊಡದಿದ್ದನೇ ರಾಮ
ವಿನಯಿ ವಿಭೀಷಣನಿಗೆ ರಾಜ್ಯವಿತ್ತವನಿಗೆ
ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೨||

ಸಾರ್ವಭೌಮನು ಮೆಚ್ಚಿದಾಗಲೆ ನೀ ಪೋಗಿ
ಉರ್ವಿಯ ಬೇಡಲು ಕೊಡದಿದ್ದನೇ ರಾಮ
ಸರ್ವವ ತೊರೆದು ಶ್ರೀ ಪುರಂದರ ವಿಠಲನ
ನಿರ್ವ್ಯಾಜ ಸೇವೆಯ ಬೇಡಿದೆಯೋ ಹನುಮ ||೩||

Sevakatanada ruciyenaridyo |
Deva hanumaraya | vairagya bedide ||pallavi||

Udadhiya dati siteya kshema tandaga
Maduveya madennabaraditte
Padadi pashanava penna madidavage
Idu enasadhyavo hanuma ninollade ||1||

Kshanadali sanjivana giri tandaga
Hana honnu bedalu kodadiddane rama
Vinayi vibishananige rajyavittavanige
Idu enasadhyavo hanuma ninollade ||2||

Sarvabaumanu meccidagale ni pogi
Urviya bedalu kodadiddane rama
Sarvava toredu sri purandara vithalana
Nirvyaja seveya bedideyo hanuma ||3||

dasara padagalu · MADHWA · purandara dasaru

Madhukara vrutti ennadu adu balu

ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||

ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||

ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ ||

ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃಂಗಾರ ನೋಡುತ್ತಾ ಕಂಗಳಾನಂದವೆಂಬ || ೨ ||

ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿಂದಾನಂದವ ಪಡುವಂಥ || ೩ ||

Madhukara vrutti ennadu adu balu cennadu || pallavi ||

Padumanabana padapaduma madhupavemba || anu pallavi ||

Kalige gejje katti nila varnana guna
Alapisutta balu olaga maduvantha || 1 ||

Ranganathana guna himgade padutta
Srungara nodutta kamgalanamdavemba || 2 ||

Indirapati purandaravithalanalli
Cemdada baktiyindanandava paduvantha || 3 ||

dasara padagalu · MADHWA · purandara dasaru

Nanenu madideno venkataraya

ನಾನೇನು ಮಾಡಿದೆನೋ ವೆಂಕಟರಾಯ
ನೀನೆನ್ನ ಕಾಯಬೇಕೋ || ಪಲ್ಲವಿ ||

ಮಾನಾಪಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ ||

ರಕ್ಕಸನಲ್ಲವೇನೋ ಪ್ರಹ್ಲಾದನು
ಚಿಕ್ಕವ ಧ್ರುವನಲ್ಲವೆ
ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ಅಕ್ಕನ ಮಗನೇನೋ ವೆಂಕಟರಾಯ || ೧ ||

ಕರಿರಾಯ ಕರೆಸಿದನೆ ದ್ರೌಪದಾದೇವಿ
ಬರೆದೋಲೆ ಕಳುಹಿದಳೆ
ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು
ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ ||

ಒಪ್ಪಿಡಿಯವಲಕ್ಕಿಯ ತಂದವನಿಗೆ
ಒಪ್ಪಿ ಕೊಟ್ಟೆಯೊ ಭಾಗ್ಯವ
ಸರ್ಪಶಯನ ಶ್ರೀ ಪುರಂದರವಿಠಲ
ಅಪ್ರಮೇಯನೆ ಸಲಹೋ ವೆಂಕಟರಾಯ || ೩ ||

Nanenu madideno venkataraya
Ninenna kayabeko || pallavi ||

Manapamanavu ninnadu enagenu
Dinarakshaka tirupatiya venkataraya || anu pallavi ||

Rakkasanallaveno prahladanu
Cikkava dhruvanallave
Ukki baruva karma madidajamila nimma
Akkana maganeno venkataraya || 1 ||

Kariraya karesidane draupadadevi
Baredole kaluhidale
Vara^^rushi patni kallagi striyadaddu
Dhareyella ariyadeno venkataraya || 2 ||

Oppidiyavalakkiya tandavanige
Oppi kotteyo bagyava
Sarpasayana sri purandaravithala
Aprameyane salaho venkataraya || 3 ||

dasara padagalu · MADHWA · purandara dasaru

Samanyavalla sri hariya seve

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ||pa||

ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ||a.pa||

ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು

ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ
ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು

ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು

Samanyavalla sri hariya seve pamara janarige samanyavalla||pa||

Samaja varadana premadi nenevudu tamasa buddhiya ta taggisade||a.pa||

Antara malinavaliyabeku santata sravanadi srikantana carita kelalu beku
Santatavirabeku santa janara guna nirantaradali ta cintisabeku

J~jana karmendriya nigrahisi j~janava sangrahisi hina vruddhigaleradake ta sahisi
Dinateyanu vahisi manapamana samanavemdaritu nidhanadi hari guna dhyanava malpudu

Sarvantaryami sri hariyendu sarvesvaranendu svaramananendu
Sarvanugrahanendu sarva muruti purandara vitthalana sarvada dhyanisi garvavaliyabeku

dasara padagalu · MADHWA · purandara dasaru

Enu helali tangi timmayyana padavanu

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೇನೆ || ೫ ||
Kanasukandene manadalli kalavalagondene
Enu helali tangi timmayyana padavanu kande || pallavi ||

Ponnada kadaganittu timmayya ta
Polva namava ittu anduge Galugennuta
Ena munde bandu nintiddanalle || 1 ||

Makarakundalavanittu timmayya ta
Kasturi tilakavanittu gejje Galugenuta
Svami ta bandu nintiddanalle || 2 ||

Muttina pallakki yatigalu
Hottu nintiddaralle Catra camaradinda
Rangayyana utsava murutiya || 3 ||

Tamara kamaladali krushnayya ta
Bandu nintiddanalle vayu bommadigalu
Rangayyana seveya maduvare || 4 ||

Navaratna kettisida svami enna
Hrudayamantapadalli sarvabaranadinda
Purandaravithalana kudidene || 5 ||

dasara padagalu · MADHWA · purandara dasaru

Huccu hidiyitu enage

ಹುಚ್ಚು ಹಿಡಿಯಿತು ಎನಗೆ, ಹುಚ್ಚು ಹಿಡಿಯಿತು ||ಪ||

ಅಚ್ಯುತನ ಧ್ಯಾನವೆಂಬೊ ಅಚ್ಚುಮೆಚ್ಚು ತಲೆಗೆ ಏರಿ ||ಅ ||

ವಾಸುದೇವನೆಂಬ ನಾಮ ವದನದಲ್ಲಿ ಒದರುವೆ, ಮಾಯಾ
ಪಾಶವೆಂಬೊ ಅಂಗಿಯನ್ನು ಹರಿದು ಹರಿದು ಹಾಕುವೆ
ಕೇಶವನ ಹುವ್ವ ಮುಡಿದು ಕುಣಿದು ಕುಣಿದು ಆಡುವೆ, ಕೆಟ್ಟ
ದೋಷವೆಂಬೊ ಗೊಡೆಯನ್ನು ಕೆದರಿ ಕೆದರಿ ಹಾಕುವಂಥ ||

ಕೃಷ್ಣನಂಘ್ರಿಕಮಲದಲ್ಲಿ ಸೊರಗಿ ಬೀಳುವೆ, ಭವ
ಕಷ್ಟವೆಂಬೊ ಕುಂಭವನ್ನು ಒಡೆದು ಒಡೆದು ಹಾಕುವೆ
ನಿಷ್ಟರನ್ನು ಕಂಡು ಅವರ ಹಿಂದೆ ಹಿಂದೆ ತಿರುಗುವೆ, ಕಡು
ದುಷ್ಟರನ್ನು ಕಂಡು ನಾನು ಕಲ್ಲು ಕಲ್ಲು ಬೀರುವಂಥ ||

ಮಂದಮತಿಗಳನ್ನು ಕಂಡು ಮೂಕನಾಗಿ ಇರುವೆ, ಹರಿಯ
ನಿಂದೆ ಮಾಡಿದವನ ಮೇಲೆ ಮಣ್ಣು ಮಣ್ಣು ಚೆಲ್ಲುವೆ
ಬಂಧು ಬಳಗದವರೊಳುದಾಸೀನನಾಗಿ ಬಾಳುವೆ, ಎನ್ನ
ತಂದೆ ಪುರಂದರವಿಠಲನ್ನ ನೆನೆದು ಕುಣಿದು ಆಡುವೆ ||

Huccu hidiyitu enage, huccu hidiyitu ||pa||

Acyutana dhyanavembo accumeccu talege Eri ||a ||

Vasudevanemba nama vadanadalli odaruve, maya
Pasavembo angiyannu haridu haridu hakuve
Kesavana huvva mudidu kunidu kunidu aduve, ketta
Doshavembo godeyannu kedari kedari hakuvantha ||

Krushnanangrikamaladalli soragi biluve, Bava
Kashtavembo kumbavannu odedu odedu hakuve
Nishtarannu kandu avara hinde hinde tiruguve, kadu
Dushtarannu kandu nanu kallu kallu biruvantha ||

Mandamatigalannu kandu mukanagi iruve, hariya
Ninde madidavana mele mannu mannu celluve
Bandhu balagadavaroludasinanagi baluve, enna
Tande purandaravithalanna nenedu kunidu aduve ||