dasara padagalu · MADHWA · narahari thirtharu

Dasara padagalu composed by Sri Narahari thirtharu

ಎಂತು ಮರುಳಾದೆ ನಾನೆಂತು ಮರುಳಾದೆ ||ಪ||

ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ ||ಅ.ಪ||

ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ ||೧||

ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ ||೨||

ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ ||೩||

ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ ||೪||

ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ ||೫||

ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ ||೬||

ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ ||೭||

entu maruLAde nAneMntu maruLAde ||pa||

entu maruLAde BavadoLu baLalide
santata pore raGukulatilaka ||a.pa||

mAtinalli haridAsana
nItiyalli praBudAsatana
prIti dhanAdi viShayadalli ni
rBIti daiva guru drOhadali ||1||

EkAntadalli dhanada gOShThi
lOkAntadi vairAgyada gOShThi
SrIkAntana sEvege anumAna
BUkAntana sEvege summAna ||2||

dharmakke oMdu kAsu A
dharmakke sAvirAru honnu
dharma mADalu bEsarike A
dharmamADalu caccarike ||3||

DoMbanante bayalige harahi
DaMBatanake karmava mADi
aMbujanABage dUrAgi
kuMBIpAtakake guriyAde ||4||

satiyara baidare nA baiyve
SrIpatiya baidare
kELuta naguve
matigeTTu viShayalaMpaTanAgi ||5||

yArigAgi dhAvati paDuve i
nnArige oDaveya bacciDuve
nAri putra mitrAdigaLu
yArU bAraro sangaDadi ||6||

Bajisu brahmAdi vaMdita hariya
tyajisu kAmAdi durviShaya
sujanavanditanAda narahariya
Bajisu SrISa SrI raGupatiya ||7||


ಹರಿಯೇ ಇದು ಸರಿಯೇ
ಚರಣಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ||

ಪತಿತನೆಂದು ಶ್ರೀಪತಿ ರಕ್ಷಿಸದಿರೆ
ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ? ||೧||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತವತ್ಸಲ ನಾಮ ವ್ಯರ್ಥವಾಗದೆ? ||೨||

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು? ||೩||

ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ
ಕೀಯನೆ ನಾ ಪರಕೀಯನೆ ನಿನಗೆ? ||೪||

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು
ನಂಟನೆ ನಿನಗೆ ಬಂಟ ನಾನಲ್ಲವೆ? ||೫||

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ? ||೬||

ದೊರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು
ಮೊರೆಹೊಕ್ಕೆನು ನಾ ನರಹರಿಪೂರ್ಣನೆ ||೭||

hariyE idu sariyE
caraNasEvakanalli karuNe bAradyAke ||pa||

patitaneMdu SrIpati rakShisadire
vitatavAhude ninna patitapAvana kIrti? ||1||

Sakta nInAgiddu BaktanupEkShise
Baktavatsala nAma vyarthavAgade? ||2||

digilillade odda BRuguva pAliside
nagadhara enna biDuva bage Enidu? ||3||

hEya ajAmiLana kAyalille sva
kIyane nA parakIyane ninage? ||4||

unTu hiraNyakana kanTaka biDisiddu
nanTane ninage banTa nAnallave? ||5||

keTTa ahalyeya diTTa pAliside
koTTaLu avaLEna biTTaddu nAnEna? ||6||

dore ninna manasige saribandante mADu
morehokkenu nA naraharipUrNane ||7||

dasara padagalu · MADHWA · narahari thirtharu · purandara dasaru

Dasara pada on Sri Narahari thirtharu(Narahari thirthara mahime)

ನರಹರಿ ತೀರ್ಥರ ಮಹಿಮೆ ಕೇಳಿರೊ |
ನರದೇಹವನ್ನು ಸಾರ್ಥಕ ಮಾಡಿರೊ || ಪ ||

ಕಾರ್ಯಸ್ಥ ಬ್ರಹ್ಮ ಮಾಡಿಸಿ ಪೂಜಿಸಿ ಕೊಡಲು |
ಆರ್ಯ ಜಾಬಾಲ ಮುನಿಗೆ ಪ್ರಸನ್ನನಾಗಿ |
ಭಾರ್ಯಸಹಿತ ಶರ್ವ ಪೂಜಿಸಿ, ಸೌರಭರಿಗೆ ಕೊಡಲು |
ಸೂರ್ಯವಂಶಕ ರಾಮ ಸೀತೆ ಬರಲು ||೧||

ಜಾಂಬುವಂತನು ಪೂಜಿಸಿ, ವೇದಗರ್ಭಗೆ ಕೊಡಲು |
ಕುಂಭೇಶ್ವರನ ಕೋಶದಲ್ಲಿಯಿರಲು |
ಅಂಬುಜೋದ್ಭವನಲ್ಲಿ ನಿತ್ಯ ಪೂಜಿಸುತಿರಲು |
ಜಂಭಾರಿಪುರವ ಯೈದಿದನು ಆ ಜನಿಪ ||೨||

ಗುರು ಅನಂದ ತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ |
ವರಗಗನ ನದಿ ತೀರದಿ ಗುಂಹ್ಯದೊಳಿರಲು |
ಕರಿಬಂದು ಕೂಗುತಿರೆ ಕೇಳಿ ಹೊರಗೆ ಬರಲು |
ಭರದಿ ಪಟ್ಟಾಭಿಷೇಕನಾಗಿ ರಾಷ್ಟ್ರದೊಳೊಪ್ಪಿದ ||೩||

ಆ ದೇಶ ಪದವಿ, ಹನ್ನೆರಡೊರುಷ ಮೂರುಮಾಸ |
ಮೋದದಿಂದನುಭವಿಸಿ ರಾಜಪದವ |
ಸಾದರದಿ ಪಿಂಗಳಾಶ್ವಿಜ ಶುದ್ಧ ಸಪ್ತಮಿ |
ಆ ಧರಿಯ ರಾಜಪುತ್ರಗೆಯಿತ್ತ ಮಹಿಮ ||೪||

ರಾಜಪುತ್ರ ಪತ್ನಿ ನಿಮಗೆ ಬೇಕಾದ ವಸ್ತು ವೈವದೆನಲು |
ಆ ಜನಪನ ಕೋಶದಲ್ಲಿ ಮಂದಾಸನದೊಳು ||
ರಾಜಿಸುತಿಪ್ಪ ಸೀತಾರಾಮ ಮೂರ್ತಿ ಗಳನು ತೆಗೆದು,ಕೊಂಡು |
ವಾಜಿಯನೇರಿಕೂರ್ಮಕ್ಕೆ ಬಂದು, ಪದ್ಮನಾಭರಿಗಿತ್ತರು ||೫||

ಪದುಮನಾಭ ಯತಿ ತಾನು ದಶಮತಿಗೆ ಅರ್ಪಿಸಲು |
ಮುದದಿ ಮೂರುಮಾಸ ಹದಿನಾರು ದಿನವು ||
ಮದನನಯ್ಯನ ಪೂಜಿಸಿ ಕೊಡಲು ತಾಂ ಪೂಜಿಸಿದ |
ಒದಗಿ ಆರುವರುಷ ಇನ್ನೂರು ತೊಂಬತ್ತು ದಿನ ||೬||

ಗುರುಪದ್ಮನಾಭರಾಜ್ಞದಲ್ಲಿಂದ ಒಂಬತ್ತು |
ವರುಷ ಮ್ಯಾಲೈವತ್ತು ಮೂರು ದಿನವು |
ಧರಣಿಜಯ ಮೂಲರಾಮನಂಘ್ರಿಯ ಭಜಿಸಿ |
ಪುರಂದರ ವಿಠ್ಠಲನ ಪ್ರೀತಿ ಪಡೆದ ||೭||

narahari tIrthara mahime kELiro |
naradEhavannu sArthaka mADiro || pa ||

kAryastha brahma mADisi pUjisi koDalu |
Arya jAbAla munige prasannanAgi |
BAryasahita Sarva pUjisi, sauraBarige koDalu |
sUryavaMSaka rAma sIte baralu ||1||

jAMbuvantanu pUjisi, vEdagarBage koDalu |
kuMBESvarana kOSadalliyiralu |
aMbujOdBavanalli nitya pUjisutiralu |
jaMBAripurava yaididanu A janipa ||2||

guru ananda tIrtharinda caturthASrama svIkarisi |
varagagana nadi tIradi guMhyadoLiralu |
karibandu kUgutire kELi horage baralu |
Baradi paTTABiShEkanAgi rAShTradoLoppida ||3||

A dESa padavi, hanneraDoruSha mUrumAsa |
mOdadiMdanuBavisi rAjapadava |
sAdaradi pingaLASvija Suddha saptami |
A dhariya rAjaputrageyitta mahima ||4||

rAjaputra patni nimage bEkAda vastu vaivadenalu |
A janapana kOSadalli mandAsanadoLu ||
rAjisutippa sItArAma mUrti gaLanu tegedu,konDu |
vAjiyanErikUrmakke bandu, padmanABarigittaru ||5||

padumanABa yati tAnu daSamatige arpisalu |
mudadi mUrumAsa hadinAru dinavu ||
madananayyana pUjisi koDalu tAM pUjisida |
odagi AruvaruSha innUru toMbattu dina ||6||

gurupadmanABarAj~jadallinda oMbattu |
varuSha myAlaivattu mUru dinavu |
dharaNijaya mUlarAmananGriya Bajisi |
purandara viThThalana prIti paDeda ||7||