damodara · dasara padagalu · gopala dasaru · MADHWA

Daya virali dayavirali Damodara

ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ
ಸಾಗುವವನಲ್ಲನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ            ।।೧।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ             ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                    ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು
ಪಾಡಿದೆನೆ ಆರಾರು ಪಾಡದೊಂದು
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು            ।।೪।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು           ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ
ಎನ್ನ ಹೊಂದಿ ನಡೆವ ವೈಷ್ಣವರನ
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ             ।।೬।।

ರಾಜರಾಜೇಶ್ವರ ರಾಜೀವದಳನಯನ
ಮೂಜಗದೊಡೆಯ ಮುಕುಂದಾನಂದ
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ              ।।೭।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣಿ ಮಧ್ವಮುನಿ ಮನಮಂದಿರನಿವಾಸ             ।।೮।।

Dayavirali dayavirali damodara ||pa||

Sayavagi bidadenna sakuva srikrashna ||a.pa||

Hogi baruvenayya hoda hangella
Saguvavanallana ninna bittu
Tugi tottilu konege sthaladalle nilluvudu
Hyage ni nadedante hage na nadakombe ||1||

Iddalle ennanuddharipa Sakti a-
Sadhya ninagendu na bandavanalla
Nadyadi kshetramurtigalallli nija j~jana
Vruddha janara huduki ninna tiliyalu bande ||2||

Satata iddalle enna salaho avarolagagi
Atisayavu untu vibutiyalli
Gatiyu sadhanake abivyakta sandarsanadi
Smrutige visesha marutiramana ninna ||3||

Nodidene na ninna nodade endendu
Padidene araru padadondu
Madidene archaneya misaladudu ondu
Mudhamatiyali munde ninde kaimugidu ||4||

Bandeno nanilli bahujanmada sukruta-
Dinda ninna balige indiresa
Ondu matravu ittu sakalavu arpiside
Bandhana badiva Bakutiyu j~jana niduvudu ||5||

Binnapava kelu svami ennanobbanne alla
Enna hondi nadeva vaishnavarana
Innavarige baho dushkarmagala kedisi
Ganagatigaidisuva Bakuti kodu karunadi ||6||

Rajarajesvara rajivadalanayana
Mujagadodeya mukundananda
I jivaki deha bandaddakku enagati ni
Rvyajadi suragange snanavanu madiso ||7||

Enage Avudu olle ellelli podaru
Kshana bidade ninna nolpa j~janava kodo
Cinumaya muruti gopalavithala
Ganakaruni madhvamuni manamandiranivasa ||8||

damodara · Karthika maasa · MADHWA · tulasi vivaha

Damodara sthothram

ಮತ್ಸ್ಯಾಕೃತಿಧರ ಜಯದೇವೇಶ ವೇದವಿಭೋದಕ ಕೂರ್ಮಸ್ವರೂಪ |
ಮಂದರಗಿರಿಧರ ಸೂಕರರೂಪ ಭೂಮಿವಿಧಾರಕ ಜಯ ದೇವೇಶ || ೧ ||

ಕಾಂಚನಲೋಚನ ನರಹರಿರೂಪ ದುಷ್ಟಹಿರಣ್ಯಕ ಭಂಜನ ಜಯ ಭೋ |
ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ ಭಾರ್ಗವರೂಪ || ೨ ||

ಜಯವಿಶ್ರವಸ: ಸುತವಿಧ್ವಂಸಿನ್ ಜಯ ಕಂಸಾರೇ ಯದುಕುಲತಿಲಕ |
ಜಯವೃಂದಾವನಚರ ದೇವೇಶ ದೇವಕಿನಂದನ ನಂದಕುಮಾರ || ೩ ||

ಜಯಗೋವರ್ಧನಧರ ವತ್ಸಾರೇ ಧೇನುಕಭಂಜನ ಜಯ ಕಂಸಾರೇ |
ರುಕ್ಮಿಣಿನಾಯಕ ಜಯ ಗೋವಿಂದ ಸತ್ಯಾವಲ್ಲಭ ಪಾಂಡವ ಬಂಧೋ || ೪ ||

ಖಗವರವಾಹನ ಜಯಪೀಠಾರೇ ಜಯ ಮುರಭಂಜನ ಪಾರ್ಥಸಖೇತ್ವಮ್ |
ಭೌಮವಿನಾಶಕ ದುರ್ಜನಹಾರಿನ್ ಸಜ್ಜನಪಾಲಕ ಜಯದೇವೇಶ || ೫ ||

ಶುಭಗುಣಗಣಪೂರಿತ ವಿಶ್ವೇಶ ಜಯ ಪುರುಷೋತ್ತಮ ನಿತ್ಯವಿಬೋಧ |
ಭೂಮಿಭರಾಂತಕ ಕಾರಣರೂಪ ಜಯ ಖರಭಂಜನ ದೇವವರೇಣ್ಯ || ೬ ||

ವಿಧಿಭವಮುಖಸುರ ಸತತಸುವಂದಿತ ಸಚ್ಚರಣಾಂಬುಜ ಕಂಜಸುನೇತ್ರ |
ಸಕಲಸುರಾಸುರನಿಗ್ರಹಕಾರಿನ್ ಪೂತನಿಮಾರಣ ಜಯದೇವೇಶ || ೭ ||

ಯದ್ಭ್ರೂವಿಭ್ರಮ ಮಾತ್ರಾತ್ತದಿದಂ ಆಕಮಲಾಸನ ಶಂಭುವಿಪಾದ್ಯಂ |
ಸೃಷ್ಠಿಸ್ಥಿತಿಲಯಮೃಚ್ಚತಿಸರ್ವಂ ಸ್ಥಿರಚರವಲ್ಲಭಸತ್ತ್ವಂ ಜಯಭೋ || ೮ ||

ಜಯ ಯಮಲಾರ್ಜುನಭಂಜನಮೂರ್ತೇ ಜಯ ಗೋಪೀಕುಚಕುಂಕುಮಾಂಕಿತಾಂಗ |
ಪಾಂಚಾಲೀ ಪರಿಪಾಲನ ಜಯ ಭೋ ಜಯ ಗೋಪೀಜನರಂಜನ ಜಯ ಭೋ ||೯ ||

ಜಯ ರಾಸೋತ್ಸವರತ ಲಕ್ಷ್ಮೀಶ ಸತತ ಸುಖಾರ್ಣವ ಜಯ ಕಂಜಾಕ್ಷ |
ಜಯ ಜನನೀಕರ ಪಾಶಸುಬದ್ಧ ಹರಣಾನ್ನವನೀತಸ್ಯ ಸುರೇಶ || ೧೦ ||

ಬಾಲಕ್ರೀಡನಪರ ಜಯ ಭೋ ತ್ವಂ ಮುನಿವರವಂದಿತಪಾದ ಪದ್ಮೇಶ |
ಕಾಲಿಯಫಣಿಫಣಮರ್ದನ ಜಯ ಭೋ ದ್ವಿಜಪತ್ನ್ಯರ್ಪಿತ ಮತ್ಸಿವಿಭೋನ್ನಂ ||೧೧ ||

ಕ್ಷೀರಾಂಬುಧಿಕೃತನಿಲಯನ ದೇವ ವರದ ಮಹಾಬಲ ಜಯ ಜಯಕಾಂತ |
ದುರ್ಜನ ಮೋಹಕ ಬುದ್ಧಸ್ವರೂಪ ಸಜ್ಜನ ಬೋಧಕ ಕಲ್ಕಿಸ್ವರೂಪ || ೧೨ ||

ಜಯ ಯುಗಕೃತ್ ದುರ್ಜನ ವಿಧ್ವಂಸಿನ್ |
ಜಯ ಜಯ ಜಯ ಭೋ ಜಯ ವಿಶ್ವಾತ್ಮನ್ || ೧೩ ||

ಇತಿ ಮಂತ್ರಂ ಪಠನ್ನೇವ ಕುರ್ಯಾನ್ನೀರಾಜನಂ ಬುಧ: |
ಘಟಿಕಾದ್ವಯಶಿಷ್ಟಾಯಾಂ ಸ್ನಾನಂ ಕುರ್ಯಾದ್ಯಥಾವಿಧಿ | ೧೪ ||

ಅನ್ಯಥಾ ನರಕಂ ಯಾತಿ ಯಾವದಿಂದ್ರಾಶ್ಚತುರ್ದಶ |
ಇತಿ ಶ್ರೀ ಕಾರ್ತೀಕ ದಾಮೋದರ ಸ್ತೋತ್ರಂ ಸಂಪೂರ್ಣಂ||೧೫||

Matsyakrutidhara jaya devesha vedavibodhaka kurmasvarupa |
Mandaragiridhara sukararupa bumividharaka jaya devesha ||1||

Kanchanalocana naraharirupa dushtahiranyakabanjana jaya BO |
Jaya jaya vamana balividhvamsin dushtakulamtaka bargavarupa ||2||

Jaya vishravasahsutavidhvamsin jaya kamsare yadukulatilaka |
Jaya vrundavanachara devesha devakinanda nandakumara ||3||

Jaya govardhanadhara vatsare dhenukabanjana jaya kamsare |
Rukmininayaka jaya govinda satyavallaba pandavabandho ||4||

Kagavaravahana jaya pithare jaya murabamjana parthasaketvam |
Boumavinashaka durjanaharin sajjanapalaka jaya devesha ||5||

Shubhagunaganapurita vishvesha jaya purushottama nityavibodha |
Bumi dharantakakaranarupa jaya karabanjana devavarenya ||6||

Vidhibavamukasura satatasuvandita saccharanambuja kanjasunetra |
Sakala surasurani grahakarin putanivarana jaya devesha ||7||

Yadbruvibramamatrattadidamakamalasanashambuvipadyam |
Srushtisthitilayamruccati sarvam sthiracaravallaba sa tvam jaya BO ||8||

Jayayamalarjunabamjanamurte jaya gopikucakumkumamkitamga |
Pamcaliparipalana jaya BO jaya gopijanaramjana jaya BO ||9||

Jaya rasotsavarata laksmisha satatasukarnava jaya kamjaksha |
Jaya jananikarapashasubaddha haranannavanitasya suresha ||10||

Balakridanapara jaya BO tvam munivaravanditapadapadmesha |
Kaliyapanipanamardana jaya BO dvijapatnyarpitamatsi vibonnam ||11||

Kshirambudhikrutanilayana deva varada mahabala jaya jaya kanta|
Durjanamohaka buddhasvarupa sajjanabodhaka kalkisvupa |
Jaya yugakruddu^r^janavidhvamsin jaya jaya BO jaya vishvatman ||12||

Iti mantram pathanneva kuryannirajanam budhah |
Gatikadvayashishtayam snanam kuryadyathavidhi ||

||iti shripancharatragame hamsabrahmasamvade shridamodarastotram ||