Category: sripadarajaru
vaadigaja mastakaankusha
ವಾದಿಗಜ ಮಸ್ತಕಾಂಕುಶ ಸುಜನ ಬುಧಗೇಯ |
ಮೇದಿನಿ ಸುರವಂದ್ಯ ಶ್ರೀಪಾದರಾಯ || ಪ ||
ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪ |
ಸಕಲ ಸತ್ಯಸ್ಥಾಪ ಸುಜ್ಞಾನ ದೀಪ |
ಪ್ರಕಟ ಪಾವನರೂಪ ಅರಿಕುಜನ ಮತಲೋಪ |
ನಿಕಟವರ್ಜಿತ ಪಾಪ ಕೀರ್ತಿ ಪ್ರತಾಪ || ೧ ||
ಹರಿಪತಾಂಬುಜ ಭೃಂಗ ಪರಮತಾಹಿವಿಹಂಗ |
ಪರಮ ಸುಗುಣಾಂತರಂಗ | ಭವ ದುರಿತ ಭಂಗ |
ಶರಣ ಕೀರ್ತಿ ತರಂಗ ಶತೃ ತಿಮಿರ ಪತಂಗ |
ಶರಣು ಶುಭ ಚರಿತಾಂಗ ಷಟ್ಛಾತ್ರ ಸಂಗ || ೨ ||
ಸಿರಿಕೃಷ್ಣದಿವ್ಯ ಪಾದಾಬ್ಜ ಚಿಂತಾಲೋಲ |
ವರ ಹೇಮವರ್ಣ ಮುನಿ ಪತಿಯ ಸುಕುಮಾರ |
ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ |
ಶರಣ ಜನ ಸುರಧೇನು ಭಕ್ತ ಮಂದಾರ || ೩ ||
Vaadigaja mastakaankusha sujana budhageya |
medini suravandya shreepaadaraaya || pa ||
Sakalashaastra kalaapa sanyaasa kuladeepa |
sakala satyasthaapa suj~jaana deepa |
prakata paavanaroopa arikujana matalopa |
nikatavarjita paapa keerti prataapa || 1 ||
Haripataambuja bhrunga paramataahivihanga |
parama sugunaantaranga | bhava durita bhanga |
sharana keerti taranga shatru timira patanga |
sharanu shubha caritaanga shatchaatra sanga || 2 ||
Sirikrushnadivya paadaabja chintaalola |
vara hemavarna muni patiya sukumaara |
gurukula tilaka shreepaadaraaya amitoddhaara |
sharana jana suradhenu bhakta mandaara || 3 ||
shreepadaraja sandarshanadhi
ಶ್ರೀಪಾದರಾಜ ಸಂದರ್ಶನದಿ ಸಕಲ |ಸಂತಾಪಗಳು ಕಳೆದವಿಂದು || ಪ ||
ತಾಪಸೋತ್ತಮರಿವರು ಇಹ ಪರಗಳಲ್ಲಮ್ಮ |ಕಾಪಾಡುತಿರುವರೆಂದು || ಅ.ಪ. ||
ಸ್ವರ್ಣವರ್ಣರ ಕುವರ ಜ್ಞಾನ ಭಕ್ತಿಗಳಿಂದ |ಪೂರ್ಣರಿದ್ದರು ಲೋಕದಿ |
ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ |ನಿರ್ಣಯಗಳಿತ್ತರಿವರು || ೧ ||1
ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ |ಪಾಂಗ ಪಾತ್ರರು ಪೂಜ್ಯರು |
ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು |ಹಿಂಗಿತೆಮ್ಮಯ ಕೊರತೆಯು || ೨ ||
ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ |ಮಾನಸ ಪ್ರಸನ್ನರಿವರು |
ಮೌನಿವರ ವ್ಯಾಸತೀರ್ಥರಲಿ ಪರಮಾದರದಿ |ಜ್ಞಾನ ಧಾರೆಯ ಕರೆದರು || ೩ ||
Shreepaadaraaja sandarshanadi sakala | santaapagalu kaledavindu || pa ||
Taapasottamarivaru iha paragalallamma | kaapaadutiruvarendu || a.pa. ||
Swarnavarnara kuvara j~jaana bhaktigalinda | poornariddaru lokadi |
swarnaaksharagalinda bareyuvantaha shaastra | nirnayagalittarivaru || 1 ||
Mangalaatmaka namma rangavithala krupaa | paanga paatraru poojyaru |
kangalige habbavidu mangalake saadhanavu | hingitemmaya korateyu || 2 ||
J~jaana bhandaaravanu lokakeeyalu shuddha | maanasa prasannarivaru |
mounivara vyaasateertharali paramaadaradi | j~jaana dhaareya karedaru || 3 ||
shreepaadaraja guruve
ಶ್ರೀಪಾದರಾಜ ಗುರುವೆ | ನತಸುರ ತರುವೆ ||pa||
ಶ್ರೀಪಾದರಾಜ ನಿನ್ನ ನಾ ಪೊಂದೊದೆನು ತ್ರಯ
ತಾಪಗಳೋಡಿಸಿ | ನೀ ಪಾಲಿಸು ಅನುದಿನ ||a.pa||
ಪಂಡಿತಾಗ್ರಣಿ ಕರ್ಣ | ಕುಂಢಲ ಮುಕುಟಾಭರಣ
ಮಂಡಿತವಾಗಿ ಮಾರ್ತಂಡನಂತೆ ಪೊಳೆವ ||1||
ಪವನ ದೇವನೆ ಶಾಸ್ತ್ರ | ಸುವಿಛಾರ ಭರಿತ ವಾಕ್
ಪವಿಯಾಖ್ಯ ಗ್ರಂಧ ಕೃತ | ಕವಿಕುಲೋತ್ತಂಸ ಹಂಸ ||2||
ಮೃಷ್ಟಾನ್ನ ನಾನಾವಿಧ ಷಷ್ಟಿ ಶಾಕಂಗಳ
ನಿಷ್ಟೀಲಿ ಸದಾ ರಂಗವಿಠಲಗರ್ಪಿಸಿದ ||3||
ಇಳೆಯ ಸುರಗೆ ಹತ್ಯ | ಸತಿ ಕರುಣದಿ ಕಂಡು
ಜಲವ ಪ್ರೋಕ್ಷಿಸಿ ಕಳೆದು | ಸಲಹಿದ ಸನ್ಮಹಿಮ ||4||
ತಂದೆ ಜರಿಯೆ ವನದಿ | ನಿಂತು ಭಜಿಸಿ ಶಾಮ
ಸುಂದರನೊಲಿಸಿ ಸ್ಥಿರಾನಂದ ಪದವಿ ಪಡೆದ ||5||
Shreepaadaraaja guruve natasura taruve || pa ||
Shreepaadaraaja ninna naa pondidenu trayataapagalodisi | neepaalisanudina || a.pa.||
Panditaagrani karna kundala mukutaabharana |
manditanaagi maartaandanante poleva || 1 ||
Pavana devana shaastra suvicaara bharita vaak |
paviyaakhya grantha kruta kavi kulottamsa hamsa || 2 ||
Mrushtaanna naanaavidha shashthi shaakangala |
nishthili sadaa rangaviththalagarpisida || 3 ||
Iliya surage hatya sale karunadi shamkha jala |
prokshisi kaledu salahida sanmahima || 4 ||
Tande jariye vanadi nimdu bhajisi |
shyaamasundaranolisi sthiraananda padavi padeda || 5 ||
smarisi badukiro shreepadaraajara
ಸ್ಮರಿಸಿ ಬದುಕಿರೋ ಶ್ರೀಪಾದರಾಜರಾ |
ಕಷ್ಟ ಕಳೆದು ಇಷ್ಟವ ಕೊಡುವ ದಿವ್ಯ ಪಾದರಾ || ಪ ||
ದಾಸಕೂಟದಿ ಅಗ್ರಗಣ್ಯರೆನಿಪರ |
ದಿಟದಿಂದಲಿ ಭವಸಾಗರ ದಾಟಿಸುವರಾ || ೧ ||
ಜ್ಞಾನದಾಯಕರ ಭವ್ಯ ಭೋಜನ ಭೋಕ್ತರ |
ಕೀರ್ತಿವಂತರ ಅನೇಕ ಮಹಿಮದಾಂತರ || ೨ ||
ಅಲವಭೋದರ ಮತದಿ ಸುಲಭ ಚಂದಿರ |
ಭಜಿಪ ಭಕ್ತರ ಭಯವ ಪರಿಹರಿಸುವರ || ೩ ||
ಮುಖ್ಯದ್ವಾರದಿ ಇದ್ದ ರಂಗ ವಿಠ್ಠಲನ |
ಅಂತರಂಗದಿ ಮಹಾ ಮಂಗಳಾಂಗನಾ || ೪ ||
ಲೆಖ್ಖವಿಲ್ಲದೇ ಪೃಥ್ವಿ ತಿರುಗಿಬಂದರೂ |
ವ್ಯರ್ಥವಲ್ಲದೇ ಗುರು ಭಕ್ತಿ ದೊರೆಯದು || ೫ ||
ದಾಸರಾದರೆ ಮಾತ್ರ ಸೂಸಿ ಕಾಯುವ |
ಲಕ್ಷ್ಮೀಶ ವಿಠ್ಠಲನ ತಂದು ಅಂದೆ ತೋರುವ || ೬ ||
Smarisi badukiro shreepaadaraajaraa |
kashta kaledu ishtava koduva divya paadaraa || pa ||
Daasakootadi agraganyarenipara |
ditadindali bhavasaagara daatisuvaraa || 1 ||
J~jaanadaayakara bhavya bhojana bhoktara |
keertivantara aneka mahimadaantara || 2 ||
Alavabhodara matadi sulabha chandira |
bhajipa bhaktara bhayava pariharisuvara || 3 ||
Mukhyadwaaradi idda ranga viththalana |
antaramgadi mahaa mangalaanganaa || 4 ||
Lekkhavillade pruthwi tirugibandaroo |
vyarthavallade guru bhakti doreyadu || 5 ||
Daasaraadare maatra soosi kaayuva |
lakshmeesha viththalana tandu ande toruva || 6 ||
Raajarendare shreepaadaraajarayya
ರಾಜರೆಂದರೆ ಶ್ರೀಪಾದರಾಜರಯ್ಯ |
ರಾಜೀವ ಲೋಚನ ರಂಗವಿಠ್ಠಲ ಭಜಕ || ಪ ||
ಸ್ಮರಣೆ ಮಾತ್ರದಿ ಅನ್ನ ವಸನಗಳನೀಯುತಲಿ |
ಹರಿಭಕ್ತಿ ಹರಿಜ್ಞಾನ ಭಕ್ತಿಯನು ಕರುಣಿಸುವರು |
ಭರದಿ ದಾರಿದ್ರ್ಯವನು ಪರಿಹಾರ ಮಾಡುತಲಿ |
ನಿರುತ ಧರ್ಮದಿ ನಡೆವ ಮನವಿತ್ತು ಸಲಹುವ || ೧ ||
ವರ ವಾದಿರಾಜ ವ್ಯಾಸ ವಿಜಯೀಂದ್ರರಿಗೆ |
ಪರವಿದ್ಯೆ ವೈರಾಗ್ಯ ಭೋಧಿಸುತಲಿ ||
ಧರಣಿಯೊಳು ಹರಿದಾಸ ಮಾರ್ಗದಲಿ ನಡೆಸಿದ |
ಪರಮ ಕಾರುಣ್ಯ ಗುರು ನರಹರಿ ಪ್ರೀಯರು || ೨ ||
ಚತುಃಷಷ್ಠಿ ಶಾಖಗಳನ್ನು ನಿಷ್ಠೆಯಿಂದಲಿ ತಾವೇ |
ಪರಮೇಷ್ಠಿ ಪಿತನಿಗೆ ಅರ್ಪಿಸುತಲಿ |
ಕಷ್ಟಕಾರ್ಪಣ್ಯಗಳ ಏನೊಂದು ಭರಿಸದಲೆ |
ಸೃಷ್ಠೀಶನಂಘ್ರಿಯನು ನಿತ್ಯ ಭಜಿಸುತ ಮೆರೆವ || ೩ ||
ಇವರ ಮಹಿಮೆಗಳನ್ನು ಪೊಗಳಲೆನ್ನಳವಲ್ಲ |
ಕವಿತೆ ಸಾಹಿತ್ಯದಲಿ ಕುಲಗುರುಗಳು |
ಧ್ರುವನ ಅವತಾರಿಗಳು ಸಂದೇಹ ಇನಿತಿಲ್ಲ |
ಪವಮಾನ ಜನಕ ಗುರು ಶ್ಯಾಮಸುಂದರಪ್ರೀಯರು || ೪ ||
Raajarendare shreepaadaraajarayya |
raajeeva locana rangaviththala bhajaka || pa ||
Smarane maatradi anna vasanagalaneeyutali |
haribhakti harij~jaana bhaktiyanu karunisuvaru |
bharadi daaridryavanu parihaara maadutali |
niruta dharmadi nadeva manavittu salahuva || 1 ||
Vara vaadiraaja vyaasa vijayeendrarige | pa
ravidye vairaagya bhodhisutali ||
dharaniyolu haridaasa maargadali nadesida |
parama kaarunya guru narahari preeyaru || 2 ||
Chatuhshashthi shaakhagalannu nishtheyindali taave |
parameshthi pitanige arpisutali |
kashtakaarpanyagala enonmdu bharisadale |
srushthishananghriyanu nitya bhajisuta mereva || 3 ||
Ivara mahimegalannu pogalalennalavalla |
kavite saahityadali kulagurugalu |
dhruvana avataarigalu sandeha initilla |
pavamaana janaka guru shyaamasundarapreeyaru || 4 ||
nenedu badukiro
ನೆನೆದು ಬದುಕಿರೋ ಸತತ ನೆನೆದು ಬದುಕಿರೋ ||pa||
ನೆನೆದು ಬದುಕಿ ಸುಜನರೆಲ್ಲಘನಗುಣಾಂಬುಧಿ ಶ್ರೀಪಾದರಾಯರ ||a.pa||
ಇತರ ಧ್ಯಾನವೆಲ್ಲವನುಳಿದುಅತಿಶಯದ ವಿರಕ್ತಿ ಬಲಿದು
ಮತಿ ವಿಶೇಷವೆನಿಪ ಮಧ್ವಮತಾಂಬುನಿಧಿಗೆ ಪೂರ್ಣಚಂದ್ರನ ||1||
ಅಮಿತ ಪುಣ್ಯ ಅಗ್ರಗಣ್ಯನವಿಮತ ಹರನ ವಿನಯ ಪರನ
ದ್ಯುಮಣಿತೇಜನ ದುರಿತ ದೂರನಶಮದಮಾದಿ ಗುಣಸಮುದ್ರನ||2||
ಹೀನ ಕುಮತ ಮಾನಭಂಗನಸೂನ ಶರನ ಗೆಲಿದ ಘನ್ನನ
ದಾನ ಕರ್ಣನ ದಯಾರ್ಣವನ ಸುಜ್ಞಾನ ಪೂರಿತ ಶುಭ ಚರಿತನ ||3||
ವಾದಿಕುಂಜರ ಪಂಚಮುಖನಸಾಧು ಸಜ್ಜನ ಕಲ್ಪವೃಕ್ಷನ
ವೇದ ಶಾಸ್ತ್ರ ಪುರಾಣದಲಿಆದಿಶೇಷನ ಪೋಲ್ವ ಮುನಿಯ ||4||
ವನಜನೇತ್ರ ಕೃಷ್ಣನ ಪ್ರಿಯನಕನಕವರ್ಣ ತೀರ್ಥರ ಸುತನ
ಜನಸಮೂಹ ಸನ್ನುತ ಪರಮವನಧಿ ಗಂಭೀರ ಶ್ರೀಪಾದರಾಯರ ||5||
Nenedu badukiro satata nenedu badukiro || pa ||
Nenedu baduki sujanarella ghana gunaambudhi shreepaadaraayara || a. Pa ||
Itara dhyaanavellavalidu | atishayadi virakti balidu |
mata visheshavenipa madhwa | mataambunidhige poornachandrana || 1 ||
Amita punya agraganyana | vimata harana vinaya parana |
dyumani tejana durita doorana | shamadamaadi guna samudrana || 2 ||
Heena kumata maana bhangana | soona sharana gelida ghannana |
daana karnana dayaarnavana | j~jaanapoorita shubha caritana || 3 ||
Vaadi kumjara pancha mukhana | saadhu sajjana kalpavrukshana |
vedashaastra puraanadalli | aadisheshana polva muniya || 4 ||
Vanaja netrana shreekrushnana priyana | kanakavarnateerthara sutana |
jana samooha sannuta parama | vanadhi gambheera shreepaadaraayara || 5 ||
Mahime saalade
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ||pa||
ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ||a.pa||
ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ ||1||
ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆ
ಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ||2||
ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆ
ನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ||3||
Mahime saalade | ishte mahime saalade || pa ||
Ahishayanana olumeyinda mahiyolemma shreepaadaraajara || a.pa. ||
Muttina kavaca mel turaayi navaratna kettida karna kundala |
kastoori tilaka shreegandha lepana vistaaradinda meredu baruva || 1 ||
Viprage brahmahatya dosha baralu kshipra shankhodakadi kaleye |
apra baddharu doshise gerenne kappu vasana hasana maadida || 2 ||
Harige samarpisida naanaa pariya shaakamgalanu bhunjise |
nararu nagalu shree krushnana parama karunadinda husiya maadida || 3 ||
Laali Govinda laali
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ||PA||
ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ||a.pa||
ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು||1||
ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿ
ಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ ||2||
ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ ||3||
ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ||4||
ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲು
ವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ ||5||
ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ||6||
ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದು
ಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ||7||
ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ||8||
ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತ
ರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ ||9||
ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ ||10||
ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದ
ಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ ||11||
ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು ||12||
ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ
ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು ||13||
ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ
ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು||14||
ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತ
ಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು ||15||
ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು||16||
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿ
ಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ||17||
ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡು
ಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ ||18||
ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವ
ಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ ||19||
ನೀಲಘನ ನೀಲ ಜೋ ಜೋ ಕರುಣಾಲವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ ||20||
ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋ
ಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ||21||
ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ ||22||
Lali govinda lali | kausalya bala shrirama lali ||pa||
Lali munivandya lali | janaki ramana shrirama lali ||a.pa ||
Kanakaratnagalalli kalgalane hudi | nalku vedagalannu sarapaniya madi |
aneka bhoomandalava halageya maadi | shreekaantanuyyaaleyanu virachisidaru || 1 ||
Ashcaryajanakavagi nirmisida | pacceya tottilalli |
acyutanantaniralu tugidaru | matsyavatara hariya || 2 ||
Dharmasthapakanu endu | niravadhika nirmala charitanendu |
marma karmagala padi tugidaru | kurmavatara hariya || 3 ||
Sarasijakshiyarellaru | janavashikara divya rupanendu |
parama harushadali padi tugidaru | varahavatara hariya ||4||
Karu kumbhagala poluva | kucadalli hara padakavu holeyalu |
vara varniyaru padi tugidaru | narasimhavatara hariya || 5 ||
Bhamamaniyarellaro | yaduvamsha somanivanendu pogali |
nemadindali padi tugidaru | vamanavatara hariya || 6 ||
Samajavaradanendu | atula bhrugu ramavataranendu |
shrimadananda hariya tugidaru | prematirekadinda || 7 ||
Kamanige kamanendu | surasarva bhauma gunadhamanendu |
vamanetreyaru padi tugidaru | ramavatara hariya || 8 ||
Srushtiya kartanendu | jagadolage shishta santushtanendu |
drushtantarahitanendu tugidaru | krushnavatara hariya || 9 ||
Vruddha nariyarellaru | jagadolage prasiddha nivanendu pogali |
baddhanuragadinda tugidaru | bauddhavatara hariya || 10 ||
Thalathalatkaradinda | ranjisuva malayajalepadinda |
jalajagandhiyaru padi tugidaru | kalkyavatara hariya || 11 ||
Kanakamaya kacitavada | talpadali vanajabhava janakaniralu |
vanajanabhanna padi tugidaru | vanitamaniyarellaru || 12 ||
Padmaragava poluva | haripada padmavanu tamma hrudayaa |
padmadali nillisi padi tugidaru | padmini bhaminiyaru ||13||
Hastabhushana mereyalu | divyatara | hastalagavagalinda |
hastagala pididukondu tugidaru | hastini bhaminiyaru ||14||
Mattagajagaminiyaru | divyatara | citra vastragalanuttu |
citta santoshadimda tugidaru | cittini bhaminiyaru || 15 ||
Kankana dhvanigalinda | ramjisuva | kimkini svaragalinda |
pankajakshiyaru padi tugidaru | kinkini bhaminiyaru ||16||
Cokka kasturi pankadinda | ranjisuva | makarika patra baredu |
likucastaniyaru padi tugidaru | akalamka carita hariya || 17 ||
Pallavareyarellaroo | I shishuvu | tulyavarjitanenutali |
sallulita ganadinda tugidaru | kalyani ragadinda || 18 ||
Ananda sadanadolage | gopiyaru | Anandasutana kandu |
anandabharitaragi tugidaru | Anandabhairaviyinda || 19 ||
Devadhidevanendoo | I shishuva | bhavanatitanendoo |
devagandharvaru padi tugidaru | devagandharadimda ||20||
Nila ghanalila jo jo | karunala bala | shrikrushna jo jo |
lilavatara jo jo | paramatma | balagopala jo jo || 21 ||
Indudhara mitra jo jo | shrikrushna | indu ravi netra jo jo |
indu kulaputra jo jo | paramatma | indiraramana jo jo || 22 ||
Tunga bhavabhanmga jo jo | paramatma | ranga krupanga jo jo |
mangalapanga jo jo | mohanna | rangaviththalane jo jo || 23 ||
kaaLa beladingalu
ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||
ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ ||೧||
ಪುಂಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ –
ಮಂಡಲನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿದನು ಹೊಲೆಯನಾಳಾಗಿ ||೨||
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು ||೩||
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರು ||೪||
ಏರುವ ದಂಡಿಗೆ ನೂರಾಳು ಮಂದಿಯು
ಮೂರುದಿನದ ಭಾಗ್ಯವು ಝಣಝಣವು
ನೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನೆ ಸರಿಯೆಂಬೊರಯ್ಯ ||೫||
KaaLa beladingalu | ee samsaara kattale beladingalu || pa ||
Satyakke dharmanu lettavanaadalu | artha bhaandaaravellava sotu |
matte viraatana maneyalli | tottaadalu droupadi omdu varusha || 1 ||
Pundarikaaksha purushottama hariyu | bandi bovanaada paarthanige bhoo- |
mandalanaaluva harishchamdra raayanu | kondava kaaydanu holeyanaalaagi || 2 ||
Untaada kaalakke nentaru ishtaru | bantaraagi maneya baagila kaayvaru |
untaada tana tappi badatana bandare | onteyante gona melakettuvaru || 3 ||
Umbaaga uduvaaga kombaaga koduvaaga | bembaladali nalinalivutiharu |
bembalatana tappi badatana bandare | imbu ninagilla nadeyembaru || 4 ||
Eruva dandige nooraaru mandiyu | mooru dinada bhaagya jhana jhanavu |
nooraaru saavira dandava tettare | rangaviththalane sariyemborayyaa || 5 ||