MADHWA · mundige

Mundigegalu

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು                                            ।।ಪ॥

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ       ।।ಅ.ಪ॥

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ           ।।೧।।

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಛೇದಿಸಿದ ದೇವ ಕಾಣಿರೋ                             ।।೨।।

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೋ                            ।।೩।।

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ
ವೀರನರನತ್ತ ಬಪ್ಪುದನ್ನು ಈಕ್ಷಿಸಿ
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೋ                           ।।೪।।

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ
ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೋ                         ।।೫।।

Ītanīga vāsudēvanu lōkadoḍeya
ītanīga vāsudēvanu ।।pa॥

ītanīga vāsudēva ī samasta lōkadoḍeya
dāsagolidu tēranēri tēji piḍidu naḍesidāta ।।a.Pa॥

dhanujeyāḷdanaṇṇanayyana pitana muode kauravēndra
nanujeyāḷidavana śirava kattarisuta tanna
anujeyāḷidavana beṅki muṭṭadaote kāyda rukma
nanujeyāḷidavana mūrtiyannu nōḍirō ।।1।।

narana sutanaraṇyadali giriyoḷnintu tanna rōṣadi
śaragaḷannu tīḍutippana yōcisi
bharadalavana karedu kuruhu tōri patravannu hārisidavana
śiravannu chēdisida dēva kāṇirō ।।2।।

sr̥ṣṭikartage maganādavanigiṣṭa bhūṣaṇa aśanavādana
jyēṣṭhaputrage vairi toḍeya chēdisendu bōdhisi
kaṣṭavannu kaḷedu bhaktariṣṭavanu kāda u
tkr̥ṣṭa mahimanāda dēva kāṇirō ।।3।।

krūravāda phaṇipabāṇavannu taraṇijaneccāga
vīranaranatta bappudannu īkṣisi
dhāriṇiya padadoḷauki caraṇabhajaka narana kāyda
bhārakartanāda dēvanīta kāṇirō ।।4।।

vyōmakēśanippa deseya sarva jagake tōruta
sāmajavanēri baruva śaktiyanīkṣisi
prēmadinda uravanoḍḍi ḍiogarigana kāydā sārva
bhauma bāḍadādikēśavanna nōḍirō ।।5।।


ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||pa||

ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ||a||

ಕದರು ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ ||1||

ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||2||

ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ ||3||

ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ|
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||4||

ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||5||

ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ \|6||

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ||7||

ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ ||8||

ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ
ತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ ||9||

ombattu hūvige ondē nāḷavu candamāma ||pa||

tumbi nāḷatudi tumbi bhānu prabhe candamāma||a||

kadaru gātra kamba tekkegātara hūvu candamāma
ānegātara kāyi oṇṭegātara haṇṇu candamāma ||1||

kālilladātanu hattidanu maravanu candamāma
kaiyilladātanu koydanā haṇṇanu candamāma ||2||

nettilladātanu hottanu haṇṇa candamāma
taḷavilladā gūḍeyaliḷisidanā haṇṇa candamāma ||3||

mārga tappi mārga hiḍidu naḍedaru candamāma|
saddilladā santēliḷisidarā haṇṇa candamāma ||4||

rokkavilladāta koṇḍanā haṇṇa candamāma
mūgilladāta mūsidanā haṇṇa candamāma ||5||

kaṇṇilladātanu kempāne haṇṇenda candamāma
aṅguḷilladāta nuṅgidanā haṇṇa candamāma\|6||

bāyilladāta tindu basiralimbiṭṭa candamāma
sulabha padavidu naḷinajāṇḍadoḷu candamāma ||7||

guruvina mahime guruve tā ballanu candamāma
mūḍhanādavanēnu ballanu ī mātu candamāma ||8||

kanakanāḍida guṭṭu ādikēśava balla candamāma
tiḷidavaru pēḷirī haḷegannaḍava candamāma ||9||


ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||

ēne manavitte lalitāṅgi
asa-māna gōvaḷa kulavilladavanoḷu ||pa||

magage maidunanāda magaḷige patiyāda
magaḷigaḷiyanāda aḷiyagaḷiyanāda ||1||

magaḷa magage maidunanāgi māvana
jagavariyalu konda kulagēḍi gōvaḷa ||2||

attege vallabhanāda bhr̥tyarigāḷāda
citta olidu cenna ādikēśavanoḷu||3||


ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ
ಕುರುಹ ಪೇಳಿ ಕುಳಿತಿರುವ ಜನರು ||ಪ||

ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು ||೧||

ನಡುವೆ ಕಲಿಯುಂಬುವುದುನಡುನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡುವುದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು ||೨||

ಕಂಜವದನೆಯರ ಕರದಲ್ಲಿ ನಲಿದಾಡುವುದು
ಎಂಜಲುಣಿಸುವುದು ಮೂಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪ
ಸಂಜೀವ ಪಿತ ಆದಿ ಕೇಶವನೇ ಬಲ್ಲ. ||೩||

marava nuṅguva pakṣi maneyoḷage bandide – idara
kuruha pēḷi kuḷitiruva janaru ||pa||

oṇṭi kombina pakṣi oḍaloḷage karuḷilla
gaṇṭalu mūruṇṭu mūgu illa
kuṇṭu manujana teradi kuḷitihudu maneyoḷage
eṇṭu hattara bhakṣya bhakṣisuvudu ||1||

naḍuve kaliyumbuvudunaḍunettiyali bāyi
kaḍu svaragaḷinda gāna māḍuvudu
aḍaviyali huṭṭuvudu aṅgaveraḍāguvudu
baḍatana bandare bahaḷa rakṣipudu ||2||

kan̄javadaneyara karadalli nalidāḍuvudu
en̄jaluṇisuvudu mūjagake
ran̄jipa śikhāmaṇi sinhāsanada mēlirpa
san̄jīva pita ādi kēśavanē balla. ||3||


ರಂಗ ಬಾರೋ ರಂಗಯ್ಯ ಬಾರೋ – ನೀ ||ಪ||

ಬಾರದಿದ್ದರೆ ಎನ್ನ ಪ್ರಾಣ ಉಳಿಯದು ||ಅ||

ಅತ್ತಿಗೆ ಮೈದುನ ಬಾರೋ ಅತ್ತೆಯ ಮಗಳ ಗಂಡ |
ಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ ||೧||

ಮಾವನ ಅಳಿಯನೆ ಬಾರೋ ಮಾವನ ಬೀಗನ ತನುಜ |
ಮಾವನ ಮಡದಿಯ ಮಗಳ ತಂಗಿಯ ಗಂದ ||೨||

ಅಂಬುಧಿ ಶಯನನೆ ಬಾರೋ ಆದಿ ವಸ್ತುವೆ ರಂಗ |
ಕಂಬದೊಳು ನೆಲೆಸಿದ ಆದಿಕೇಶವರಾಯ ||೩||

Raṅga bārō raṅgayya bārō – nī ||pa||

bāradiddare enna prāṇa uḷiyadu ||a||

attige maiduna bārō atteya magaḷa gaṇḍa |
attige mēlattige nādini soseya gaṇḍa ||1||

māvana aḷiyane bārō māvana bīgana tanuja |
māvana maḍadiya magaḷa taṅgiya ganda ||2||

ambudhi śayanane bārō ādi vastuve raṅga |
kambadoḷu nelesida ādikēśavarāya ||3||


ಹಲವು ಜೀವನವ ಒಂದೆಲೆ ನುಂಗಿತು ||
ಕಾಗಿ ನೆಲೆಯಾದಿಕೇಶವನು ಬಲ್ಲನೀ ಬೆಡಗ|| ಪ ||

ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣಶಿವನ ಒಂದೆಲೆ ನುಂಗಿತೋ ದೇವ ಹರಿಯ ಬಳಗವ ಒಂದೆಲೆ ನುಂಗಿತು|| 1 ||

ಎಂಟುಗಜವನು ನುಂಗಿ ಕಂಟಕರೈವರ ನುಂಗಿ  ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ ಎಂಟಾರು ಲೋಕ ಒಂದೆಲೆ ನುಂಗಿತು|| 2 ||

ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು ಗಿಡದ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ ನೊಡೆಯಾದಿಕೇಶವನ ಬಲ್ಲನೀ ಬೆಡಗ|| 3 ||

halavu jīvanava ondele nuṅgitu ||
kāgi neleyādikēśavanu ballanī beḍaga|| pa ||

hariya nuṅgitu hara brahmara nuṅgitu surariguṇṭāda dēvara nuṅgitu
urigaṇṇaśivana ondele nuṅgitō dēva hariya baḷagava ondele nuṅgitu|| 1 ||

eṇṭugajavanu nuṅgi kaṇṭakaraivara nuṅgi uṇṭāda giriya taleya nuṅgitu
kaṇṭava piḍida brahmana nuṅgitelo dēva eṇṭāru lōka ondele nuṅgitu|| 2 ||

giḍava nuṅgitu giḍadoḍatoṭṭa nuṅgitu giḍada tāyi tandeya nuṅgitu
beḍaga ballare pēḷi bāḍa kanakadāsa noḍeyādikēśavana ballanī beḍaga|| 3 ||


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ                  ।।ಪ॥

ನೀ ದೇಹದೊಳಗೊ ನಿನ್ನೊಳು ದೇಹವೊ                          ।।ಅ.ಪ॥

ಬಯಲುಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ                     ।।೧।।

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ                     ।।೨।।

ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ                   ।।೩।।

nī māyeyoḷago ninnoḷu māyeyo ।।pa॥

nī dēhadoḷago ninnoḷu dēhavo ।।a.Pa॥

bayaluloḷage ālayavo ālayadoḷage bayalo
bayalu ālayaveraḍu nayanadoḷago
nayana bud’dhiya oḷago bud’dhi nayanadoḷago
nayana bud’dhigaḷeraḍu ninnoḷago hariye ।।1।।

saviyu sakkareyoḷago sakkareyu saviyoḷago
saviyu sakkaregaḷeraḍu jihveyoḷago
jihve manasina oḷago manasu jihveya oḷago
jihve manasugaḷeraḍu ninnoḷago hariye ।।2।।

kusumadali gandhavo gandhadali kusumavo
kusumagandhagaḷeraḍu āghrāṇadoḷago
asamabhava kāgineleyādi kēśavarāya
usuralennaḷavalla ella ninnoḷago hariye ।।3।।


ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ತುಂಬಿತು ಒಂದು ತುಂಬಲೇ ಇಲ್ಲ

ತುಂಬಲಿಲ್ಲದ ಕೆರೆಗೆ ಬಂದವರು ಮೂವರು ಒಡ್ಡರು

ಇಬ್ಬರು ಕುಂಟರು – ಒಬ್ಬಗೆ ಕಾಲೇ ಇಲ್ಲ

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು – ಒಂದಕ್ಕೆ ಕರುವೇ ಇಲ್ಲ

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು ಒಂದು ಸಲ್ಲಲೇ ಇಲ್ಲ

ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು
ಇಬ್ಬರು ಕುರುಡರು- ಒಬ್ಬ ಗೆ ಕಣ್ಣೇ ಇಲ್ಲ

ಕಣ್ಣಿಲ್ಲದ ನೋಟಗಾರರಿಗೆ ಕೊಟ್ಟವರು ಮೂರು ಊರುಗಳ
ಎರಡು ಹಾಳು- ಒಂದಕ್ಕೆ ಒಕ್ಕಲೇ ಇಲ್ಲ

ಒಕ್ಕಲಿಲ್ಲದ ಊರಿಗೆ ಬಂದವರು ಮೂವರು ಕುಂಬಾರರು
ಇಬ್ಬರು ಚೊಂಚರು – ಒಬ್ಬಗೆ ಕೈಯೇ ಇಲ್ಲ

ಕೈತಯಿಲ್ಲದ ಕುಂಬಾರನು ಮಾಡಿದ ಮೂರು ಮಡಿಕೆಗಳ
ಎರಡು ಒಡಕು – ಒಂದಕೆ ಬುಡವೇ ಇಲ್ಲ

ಬುಡವಿಲ್ಲದ ಮಡಿಕಿಗೆ ಹಾಕಿದರ್ಮೊರಕ್ಕಿ ಕಾಳು
ಎರಡು ಬೇಯದು – ಒಂದು ಬೇಯಲೇ ಇಲ್ಲ

ಬೇಯಲಿಲ್ಲದ ಅಕ್ಕಿಗೆ ಬಂದವರು ಮೂವರು ನೆಂಟರು
ಇಬ್ಬರು ಉಣ್ಣರು – ಒಬ್ಬಗೆ ಹಸಿವೆ ಇಲ್ಲ

ಹಸಿವಿಲ್ಲದ ನಂಟಗೆ ಕೊಟ್ಟರು ಮೂರು ಟೊಣಪೆಗಳ
ಎರಡು ತಾಕದು- ಒಂದು ಕಾಕಲೇ ಇಲ್ಲ

ತಾಕಲ್ಲಿಲದ ಟೊಣಪೆಯ ತಾಕಿಸಿ ಸದ್ಗತಿಯ
ನೀಯಬೇಕು – ಪುರಂದರ ವಿಠಲ ನೀನು.

muḷḷu koneya mēle mūru kereya kaṭṭi
eraḍu tumbitu ondu tumbalē illa

tumbalillada kerege bandavaru mūvaru oḍḍaru
ibbaru kuṇṭaru – obbage kālē illa

kālillada oḍḍage koṭṭaru mūru em’megaḷa
eraḍu baraḍu – ondakke karuvē illa

karuvillada em’mege koṭṭaru mūru honnugaḷa
eraḍu savakalu ondu sallalē illa

salladidda honnige bandaru mūvaru nōṭagāraru
ibbaru kuruḍaru- obba ge kaṇṇē illa

kaṇṇillada nōṭagārarige koṭṭavaru mūru ūrugaḷa
eraḍu hāḷu- ondakke okkalē illa

okkalillada ūrige bandavaru mūvaru kumbāraru
ibbaru con̄caru – obbage kaiyē illa

kaitayillada kumbāranu māḍida mūru maḍikegaḷa
eraḍu oḍaku – ondake buḍavē illa

buḍavillada maḍikige hākidarmorakki kāḷu
eraḍu bēyadu – ondu bēyalē illa

bēyalillada akkige bandavaru mūvaru neṇṭaru
ibbaru uṇṇaru – obbage hasive illa

hasivillada naṇṭage koṭṭaru mūru ṭoṇapegaḷa
eraḍu tākadu- ondu kākalē illa

tākallilada ṭoṇapeya tākisi sadgatiya
nīyabēku – purandara viṭhala nīnu.