dasara padagalu · MADHWA · mahipathi dasaru

Artariyadd hange irabeku

ಅರ್ತರಿಯದ್ಹಾಂಗೆ ಇರಬೇಕು ಮತ್ರ್ಯದೊಳಗೆ ಧ್ರುವ

ಬಲ್ಲೆನೆಂಬ ಬಡಿವಾರ ಸಲ್ಲದು ತಾ ಅಹಂಕಾರ
ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ ||1||

ತರ್ಕತೆ ದೋರಲು ಖೂನ ಅತ್ರ್ಯುಳ್ಳವರ ನಿಧಾನ
ಸರ್ಕನೆ ತಿಳಿವದು ಖೂನ ತಾರ್ಕಣ್ಯದ ಧನ ||2||

ಹಲವು ಮಾತಾಡಿದಂತೆ ಬಲುವಾ ಭಾವದೋರಿತು
ನೆಲೆಯು ಗೊಳಬೇಕು ತಿಳುವಂತೆ ಎಲಿಮರಿಕಾಯಂತೆ ||3||

ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ
ಅಲ್ಲಹುದೇನು ತಾ ವಿಚಾರ ಬಲು ತುಂಬ್ಯಾದ ಸ್ಥಿರ ||4||

ಅರ್ತು ಅರಿಯದ್ಹಾಂಗಿದ್ದು ಗುರ್ತುಹೇಳದೆ ನೀ ಸದ್ದು
ಬೆರ್ತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು ||5||

Artariyadd~hange irabeku martyadolaga ||pa||

Ballenemba badivara salladu ta ahankara
Balusukshma guruparavara tiliyalu vicara ||1||

Tarkakedoralu kuna artyullavara nidhana
Sarkane tilivadu kuna tarkanya dhana ||2||

Halavu matadidante oluvabavadoritu
Neleyugolabeku tiluvante elimarikayamte ||3||

Ballatanake dura sulaba suj~jana sara
Allahudenu ta vicara balu tumbyada sthira ||4||

Artu ariyad~hangiddu gurtuhelade ni saddu
Beratu mahipati nijahondu arthi ninagondu ||5||

dasara padagalu · MADHWA · mahipathi dasaru

Krishna enikyakaiyya

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ
ತುಟ್ಟಿ ಮಿಸುಕಬಾರದು ನೋಡಬ್ಯಾಡ
ಗುಟ್ಟು ಒಡೆದ ಮ್ಯಾಲುಳಿಯದು ಗೂಢ
ಇಷ್ಟರಮೇಲೆ ತಿಳಿಯದ ನಾ ಮೂಢ ||1||

ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ
ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ ||2||

ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ
ನಿಜಪದಕ ಯೋಗ್ಯಳ ಮಾಡಲಿಲ್ಲಿ
ಅಜಮಿಳನೆಷ್ಟೆಂದು ಅರಿಯಲಿಲ್ಲಿ
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ ||3||

ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು
ನಿಮ್ಮ ಮಾತು ಒಡಿಯದು ಉದ್ದಂಡು
ಇಮ್ಮನಾಗದಲ್ಲಿಂದ ಮನಗಂಡು
ಬ್ರಹ್ಮಾನಂದ ಕೊಂಡಾಡುವೆ ಘನನುಂಡು ||4||

ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ
ಇಂದು ನಾ ಕೊಡುವದೇನು ಹೇಳಯ್ಯ
ಕಂದ ಮಹಿಪತಿ ನಾ ನಿಮ್ಮ ನಿಶ್ಚಯ
ಎಂದು ಬಿಡದೆ ಸಲಹೊ ನೀ ನಮ್ಮಯ್ಯ ||5||

Krushna enikyakaiyya namma kuda
Tuti misukabaradu nodabyada
Guttu odeda myaluliyadu gudha
Ishtara mele tiliyada na mudha ||1||

Andu enagittaiyya nimma buddhi
Bandu gollarodane kodyakiddi
Sandhisyavaruccishtavemdu ni meddi
Indu byare nodalikke marada suddi ||2||

Kubaja kudikombaga nodalille
Nijapadaka yogyala madalille
Ajamilaneshtendu ariyalille
Sojigellanu nimmadu na balle ||3||

Summanirabekenna ni kudikondu
Nimma matu odiyadu uddandu
Immanagadalhimda managandu
Brahmananda komdaduve gananundu ||4||

Hinde baktarenu tam kottarayya
Indu na koduvadenu helayya
Kanda mahipati na nimma nischaya
Endu bidade salaho ni nammayya ||5||

dasara padagalu · MADHWA · mahipathi dasaru · saraswathy

Nine parama pavani niranjani

ನೀನೇ ಪರಮಪಾವನೀ ನಿರಂಜಿನೀ
ನೀನೇ ಪರಮಪಾವನೀ ||ಪ||

ಆ‌ದಿ ನಾರಾಯಣೀ ಸಾಧುಜನ ವಂದಿನೀ
ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧||

ಲಕ್ಷುಮಿ ರೂಪಿಣೀ ಸಾಕ್ಷಾತ್ಕಾರಿಣೀ
ರಕ್ಷ ರಕ್ಷಾತ್ಮಿಣೀ ಅಕ್ಷಯ ಪದದಾಯಿನೀ ||೨||

ಅನಾಥರಕ್ಷಿಣೀ ದೀನೋದ್ಧಾರಿಣೀ
ಅನಂತಾನಂತ ಗುಣೀ ಮುನಿಜನಭೂಷಿಣೀ ||೩||

ದಾರಿದ್ರ್ಯಭಂಜನೀ ದುರಿತವಿಧ್ವಂಸಿನೀ
ಪರಮ ಸಂಜೀವಿನೀ ಸುರಮುನಿರಂಜನೀ ||೪||

ಸ್ವಾಮಿ ಶ್ರೀಗುರುವಿಣೀ ಬ್ರಹ್ಮಾನಂದರೂಪಿಣೀ
ಮಹಿಪತಿ ಕುಲಸ್ವಾಮಿನೀ ನೀನೇ ಪರಮಪಾವನೀ ||೫||

Nine parama pavani niranjani ||pa||

Adi narayani sadhu jana vandini
Sadananda rupini sadgati suka dayini ||a.pa||

Lakshumi rupini sakshatkarini
Raksha rakshatmini akshaya pada dayini ||1||

Anatha rakshini dinoddharini
Anantananta guni munijana bushani ||2||

Daridra Banjani durita vidhvamsini
Parama sanjivini sura muni ranjani ||3||

Svami sri guruvini brahmananda rupini
Mahipati kula svamini parama pavani ||4||

dasara padagalu · MADHWA · sripadarajaru

Indinirulina kanasinali

ಇಂದಿನಿರುಳಿನ ಕನಸಿನಲ್ಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ ||ಪ||

ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿ[ಯು] ಈ ಗೋವಳನಾ ||೧||

ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತುರೂ ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ(?) ಗೋವಳನ ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ ||೫||

Indinirulina kanasinali bandu
Munde ninduda kandene govalana ||pa||

Animuttina pendeyada kalanduge gejje
Jananangajana pitana kaiya venu
Manikyada kankana honnudi gante
Vaniya racane elliyu I govalana ||1||

Molle mallige jolleyada callanada Sira
Dalli gumjiya dandeya celva kangala
Gopiyara mele kadeganna
Cellutoyyane nadeda govalana ||2||

Titti mauri kombu suttida katta tavili
Tutturu turu turenuta
Cittava marulu madidane pongolaludi
Mottada gopiyaranella govalana ||3||

Esalukangala dhala sasi nosala tilaka
Eseva bimbadharada
Posa muttinole mukuti honnudi gante
Eseva nupura haheya govalana ||4||

Ungutadali gangeyangalalavunke
Tungavrukshada lakshumi
Mangala mahima bujangasayana siri
Rangavithala nereda govalana ||5||

dasara padagalu · MADHWA · sripadarajaru

innivanu iga

ಇನ್ನಿವನು ಈಗ ಬರಲಿದಕೆ ಬಗೆಯೇನು
ಚೆನ್ನಾಗಿ ಪೇಳೆ ರಮಣಿ ||ಪ||

ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ
ಅನ್ಯರನು ಕೂಡುವನೆ ಕೆಳದಿ ಕೆಳದಿ ||ಅ.ಪ||

ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ
ಚಿನ್ನದ ಶ್ರೀರೇಖೆ ಸೀರೆ
ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ
ಕರ್ಪೂರ ಕಾಚಿನುಂಡೆ
ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ
ಉನ್ನತವಾದ ದಂಡೆ
ಇನ್ನು ಈ ಪರಿಮಳವು ಬಗೆಬಗೆಯ ಆಭರಣ
ರನ್ನ ಕೆತ್ತಿಸಿದ ಗೋಡೆ
ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ
ನಿನ್ನೆ ಈ ವೇಳೆ ಕೂಡಿದ ದೃಢದೆ ||೧||

ಈಗಾಗ ಬಾಹನೆಂತಿರುವೆ ತಾನೂರಿದ್ದ
ಉಗುರು ಗುರುತನು ನೋಡುತ
ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು
ಬೇಗ ನಟನೆಯ ಮಾಡುತ
ರಾಗದಿಂದಲಿ ರವಿಕೆನೆರಿಯನು ಬದಲುಟ್ಟು
ಭೋಗಕೆ ಅನುವಾಗುತ
ಹೀಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆ
ಹೇಗೆ ಸೈರಿಪೆ ಕೂಡದೆ ಮುಂದೆ ||೨||

ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆ
ಕಂದರ್ಪ ಕಾಡುತಿಹನೆ
ತಂದು ತೋರಿಸು ತನ್ನ ತಂದೆಯನೆಂದು ಪೂ-
ವಿಂದ ಬಾಣವ ಎಸೆವನೆ
ಇಂದುಬಿಂಬವು ಮಂದಮಾರುತವು ಸುಮದ ಮಳೆ-
ಯಿಂದ ಸೆಕೆಗಾನಾರೆನೆ
ಒಂದು ನಿಮಿಷದಲಿ ಶ್ರೀರಂಗವಿಠಲನನ್ನು
ಹೊಂದಿಸೆನ್ನಗಲದಂತೆ ಕಾಂತೆ ||೩||

Innivanu Iga baralidake bageyenu
Cennagi pele ramani ||pa||

Mannisi mamateyali manava selekondoydu
Anyaranu kuduvane keladi keladi ||a.pa||

Bannada gini bareda sanna kuppasavulla
Cinnada srireke sire
Binnanavulla biliyele adike kenesunna
Karpura kacinunde
Kanniginpada kaducelva mallige mogge
Unnatavada damde
Innu I parimalavu bagebageya abarana
Ranna kettisida gonde
Munna singara madi ede hididu bigiyappi
Ninna I vele kudide drudhade ||1||

Igaga bahanentiruve tanuridda
Uguru gurutanu noduta
Sogegannina kadigeya kalakidanendu
Bega nataneya maduta
Ragadindali ravike neriyanu badaluttu
Bogakke anuvaguta
Hige singarisikondishtu hottanu kalede
Hege sairipe kodade munde ||2||

Indalladire nale bahanendu iddare
Kandarpa kadutihane
Tandu torisu tanna tandeyanendu pu
Vinda banava esevane
Indubimbavu mandamarutavu sumada male
Yinda sekeganarene
Ondu nimishadali srirangavithalanannu
Hondisennagaladante kante ||3||

dasara padagalu · MADHWA · sripadarajaru

Chintayenu madadiru

ಚಿಂತೆಯನು ಮಾಡದಿರು ಚದುರೆ ನಿನಗೆ ನಾನು
ಕಂತುಪಿತನನು ತೋರುವೆ ||ಪ||

ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು
ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ||

ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು
ಮಂದಹಾಸದಲಿ ನಲಿದು
ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ
ನಂದದಿಂದವನ ಮೆಚ್ಚಿ
ಅಂದವಾದ ಕುಸುಮಹಾರವನು ಸುಖನಿಧಿಗೆ
ಕಂಧರದಿ ನೀಡಿ ನೋಡಿ
ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ
ಎಂದೆಂದಿಗಗಲದಿರೆನ್ನೆ ರನ್ನೆ ||೧||

ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-
ಯೂಟಗಳನುಣ್ಣಿಸಿ
ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು
ವಾಸನೆಗಳನೆ ತೊಟ್ಟು
ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು
ಶ್ರೀಶನ್ನ ಮರೆಯ ಹೊಕ್ಕು
ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ
ವಾಸವಾಗು ಬಿಡದೆ ಎನ್ನೆ ರನ್ನೆ ||೨||

ಇಂತು ಈ ಪರಿಯಲಿ ಶ್ರೀಕಾಂತನನು ಕೂಡಿ ಏ-
ಕಾಂತದಲಿ ರತಿಯ ಮಾಡಿ
ಸಂತೋಷವನು ಪಡಿಸಿ ಸಕಲಭೋಗವ ತಿಳಿಸಿ
ಸಂತತ ಸ್ನೇಹ ಬೆಳೆಸಿ
ಅಂತರಂಗಕೆ ಹಚ್ಚಿ ಅವನಾಗಿ ತಾ ಮೆಚ್ಚಿ
ಪ್ರೀತಿಯಿಂದಧರ ಕಚ್ಚಿ
ಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲ
ಇಂತು ನಿನ್ನಗಲ ಕಾಣೆ-ಜಾಣೆ ||೩||

Chinteyanu madadiru cadure ninage nanu
Kamtupitananu toruve ||pa||

Samtoshadinda sarvabaranavittukondu
Nimtu bagilolu node pade ||a.pa||

Ondu kshana padaravinda toledu kudidu
Mandahasadali nalidu
Onde manadali divyagandhavanu tand~hacci
Nandadindavana mecci
Andavada kusumaharavanu sukanidhige
Kandharadi nidi nodi
Sandeha bittu bigidappi manavondagi
Endendigagaladirenna ranne ||1||

Asanava kottu kamalasanana pitage savi
Yutagalanunnisi
Lesagi tambula tabakadali tandittu
Vasanegalane tottu
Susuva suligurulugala tiddutali nakku
Srisanna mareya hokku
A samayadali ninage dasi ennaya manadi
Vasavagu bidade enna ranne ||2||

Intu I pariyalli srekamtananu kudi E
Kantadalli ratiya madi
Santoshavanu padisi sakala bogava tilisi
Santata sneha belesi
Antarangakke hacci avanagi ta mecci
Pritiyindadhara kacci
Kantukeliyolu kadu celva rangavithala
Intu ninnagala kane jane ||3||

dasara padagalu · MADHWA · sripadarajaru

vanajanayyana manava

ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ||pa||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು ||1||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ||2||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ ||3||

ಇವನ ವಚನದ ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು ||4||

ಪತಿಸುತರ ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ||5||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ||6||
ತುಂಗಗುಣನಿಲಯ ಅಂಗಜನ ಪಿತನೆಂದುರಂಗನಿಗೆ ಮನಸೋತು ಮರುಳಾದೆವೋ
ಹಿಂಗಿ ಬದುಕುವುದೆಂತೋ ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ ||7||

Vanajanayanana manava madhupa nambuvare
Manadegeda madanapita vithalareya ||pa||

Ariyada balerige tanna pariyanaruhisi munna
Neredu ratipatiya suka neredorida
Toredu badukuvevento ratipatiya pitanagali
Virahaduri tanalavadari sudutihudu ||1||

Nade nageya tudinota baleyanemmolu bisi
Bidadeyemmanu tanna vasamadida
Padiyilladanubavada sukada saviyane tori
Madadi tadedalo madhureyali nallana ||2||

Endendu nimma vasadallihenendabayavittu
Indumuki nariyara nere nambisi
Nandanandana namma kananadolidyadi
Indu madhureya nariyara neccida ||3||

Ivana vacanada kapata tiliyalariyade navu
Nava hariniyante marulagi keli
Vivaravariyade navu kadu nondevelo madhupa
Ivana gunavariyade kadu karuni embuvaru baride ||4||

Patisutara bavabandhanagalella idyadi
Gati namage avanendu manasotevo
Krutakavariyade namma vanadolu nillisi poda
Patiyodane sandhanavento elo madhupa ||5||

Marulugalu navu sripatiya kutava bayasi
Irulu hagalu jari jaridalaluvevu
Siriyavana umgutada uguru guna kanalelo
Hari namma neredudachariyallave jagadi ||6||

Tungaguna nilaya angajana pitanendu
Ranganige manasotu maruladevo
Hingu badukuvudento grunga madhurege pogi
Rangavithalana tandemmanuluhuvudo ||7||

dasara padagalu · MADHWA · sripadarajaru

Duritagaja panchanana

ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ||pa||

ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ ||1||

ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ ||2||

ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||3||

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ||4||

ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ||5||

ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ||6||

ಮಾನಾಭಿಮಾನದೊಡೆಯ ರಂಗವಿಠಲe್ಞÁನಿಗಳರಸನೆ ಕಾಯೋ ಗೋವಿಂದ ||7||

Duritagaja panchanana nara-
Hariye devara deva kayo govinda ||pa||

Hesarulla nadigalanolagomba samudranu
Bisuduvane kaluholegalanu govinda ||1||

Ondu molake Aru huli bandu kavidive
Bandhana bidisenna tande govinda ||2||

Hetta makkalu maruladare taytande
Ettade nelake bisuduvare govinda ||3||

Munna madida karma bennatti bandare
Ninnannu olaisalyake govinda ||4||

Apattu tapatraya benna bidadiddare
Sripati saranennalyake govinda ||5||

Arasu muttalu dasi rambeyadalu deva
Parusha muttalu loha honnu govinda ||6||

Manabimanadodeya rangavithala
J~janigalarasane kayo govinda ||7||