ಕಾಯಬೇಕು ಶ್ರೀ ತ್ರಿವಿಕ್ರಮÁಯಜನಯ್ಯ ಕಂಜನಯನ ||
ಆರು ನಿನ್ನ ಬಣ್ಣಿಪರು ಅಮರಗುಣನಿಲಯಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ ||1||
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ ||2||
ಪಾವನ್ನ ಗಂಗಾಜಲವು ಪಾದವೆಂಬ ಪದುಮವÀ ತೊ-ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ ||3||
Kāyabēku śrī trivikramaÁyajanayya kan̄janayana ||p||
Āru ninna baṇṇiparu amaraguṇanilayasārida dēvēndranige sakalasampadavitte ||1||
īrēḷu lōkaṅgaḷanu iṣṭaṣṭu ennada munna’īraḍiya māḍide nī mukunda muramardana ||2||
pāvanna gaṅgājalavu pādavemba padumavaÀ to-ḷeva nīrugaḍavinnu tōrom’me hayavadana ||3||
ವಿಕ್ರಮಾ – ಪಾಹಿ – ತ್ರಿವಿಕ್ರಮಾ ||pa||
ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ |
ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆ||a.pa||
ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ |
ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ ||1||
ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ |
ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ||2
||
ಬ್ರಹ್ಮಾಂಡ ಖರ್ಪರ ಹರಿದೂ | ಜಲಬ್ರಹ್ಮನ ಲೋಕಕೆ ಪರಿದೂ | ಬರೆಬೊಮ್ಮತಾ ನಿನ ಪಾದ ತೊಳೆದೂ |
ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ ||3||
ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ |
ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ ||4||
ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ |
ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನ ವ ನೀಡೆನಗೇ ||5||
ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ |
ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ ||6||
ಮರುದಿನದವ ಭೃತ ಸ್ನಾನಾ | ಬಲುನೆರೆದಿಹ ಸಾದು ಸಜ್ಜನಾ | ಧವಳಸುರನದಿಯೊಳು ಗೈದು ನಿನ್ನಾ |
ಮಹಿಮೆಪರಿ ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ||7||
Vikramā – pāhi – trivikramā ||pa||
vikrama namipe nā ninna | nīnucakrava piḍidondu dinna | āhanakranuddarisida |
prakraya nānariturukrama śaraṇembe | vakra manava kaḷe’||a.Pa.||
Puṭṭa rūpavane tāḷuttā | baliya’iṣṭiyoḷavana bēḍuttā | dānakoṭṭenendavanu pēḷuttā |
bareśiṣṭa śukranu bēḍennuttā | āhakaṭṭalu giṇḍīya | diṭṭa śukrana kaṇṇapuṭṭa darbheli cucci meṭṭi ninteyo baliya|| 1||
thōra rūpadoḷu ambarā | habbidhāruṇi aḷeda gambhīra | mattemūranēdake baliya śira |
vattibhāri pātāḷakke dhīrā | āhapaurōcaniyanvatti | dvārava kāyuttatōride karuṇava | bhōri daivara gaṇḍa||2||
brahmāṇḍa kharpara haridū | jalabrahmana lōkake paridū | barebom’matā nina pāda toḷedū |
biḍebrahmāṇḍadoḷu tānu bandū | āhasum’manasara lōka | kram’misutali baruva’am’maha gaṅge pe | ttem’manuddarisidā ||3||
bādarāyaṇa baḷi bhavyā | nāgimōda tīrtharinda sēvyā | nīnuvādirājarigolidu tvaryā |
bandusvādi puradi nindu stavyā | āhamōdadi nelesutta | kādukoṇḍ’̔ihe ninnapādava pogaḷūva | sādu santatiyanna ||4||
hīna mānavanendu ennā | udāsīna māḍuviyēno ghanna | kēḷonīnu traibhuvadi pāvannā |
nendugānadōḷ tava pādavannā | āha’āgamisuta banda | mānavanennanudhīnanendenisāre | jñāna va nīḍenagē ||5||
prati prati vatsaradoḷu | māsahatteraḍu pūrṇimadoḷu | tavarathadotsava kāryagaḷū |
baluhitadi tava dāsarugaḷū | āha’ati vaibhavadinda | vitaraṇeyindalipratiyillavendenne | vistarisuvarayya ||6||
marudinadava bhr̥ta snānā | balunerediha sādu sajjanā | dhavaḷasuranadiyoḷu gaidu ninnā |
mahimepari pari pogaḷuta cennā | āhaguru gōvinda viṭhṭhala | parama puruṣanendānartanagaiyuta | nararēnu dhan’yarō||7||
ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊ
ಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ||pa||
ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನ
ಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ ||
ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನ
ಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ ||
ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನ
ಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ||
ಇಂದುವರ್ಣದ ಕಂಜನೇತ್ರನ ಕಂಬುಕಂಧರ ಮಂಜುಳಗಾತ್ರನ
ವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ ||
ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ
ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ ||
ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು
ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ ||
ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ
ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ ||
ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನ
ಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ ||
Trivikramarāyana nambirobhuvanadoḷ bhāgyava tumbiro
saveyada sukhava mēlumbiro vā-savana mannaṇeya kaikombiro ||pa||
vādirājagolidubandana celvasōdeya puradalli nindana
sādhisi khaḷaranu kondana tannasērdajanara bāḷ bāḷendana ||
kālinda bom’māṇḍa oḍedana puṇya-śīle gaṅgeyanu paḍedana
pālasāgaravannu kaḍedana śruti-jāla gadeyinda hoḍedana ||
indirādēviya gaṇḍana surasandōhadoḷu pracaṇḍana
indrādi girivajradaṇḍana munivr̥ndāravindamārtāṇḍana||
induvarṇada kan̄janētrana kambukandhara man̄juḷagātrana
vr̥ndārakarige nētrana jagakindē supavitrana ||
vaniteyararthiya salisade manemanevārteya hambalisadedina
dina pāpava gaḷisade anta-kana bhaṭarindem’ma kolisade ||
haribhakutaroḷendendāḍiro nara-hariya nāmagaḷanu pāḍirohariyarcaneyanu
māḍiro śrī-hariya mūrutiya nōḍiro ||
dūrakke dūranu dāvana ha-ttira banda bhakutara kāvana
ārādhisalu phalavīvana ha-ttira sēruva bhāva dāvana ||
jayisi kansanemba māvana bhayavittu bhakuta san̄jīvana
hayavadananāgi pāvana śru-tiya tanda dēvaradēvana ||
ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ
ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ
ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ
ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ||pa||
ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ
ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ
ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ
ರಿದಕೆ ಕೋಪಿಸಿ ಬಂದರು
ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ
ಮದನಪಿತ ತಾಳದೆ ಇಳೆಗೆ ನಡೆತಂದ
ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು
ಇದು ತಾಳೆವೆನುತ ಬಾಗಿಲೊಳು ಬಂದೈದಾರೆ ||1||
ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ
ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ
ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ
ಮಧ್ವಸದ್ಭಾಷ್ಯಕಾರ
ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ-
ಬುದ್ಧಜನೆನುತ ಬಂದ ವೇದಾಂತದೇವಿಯರು
ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ-
ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು ||2||
ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ-
ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ
ಅಪ್ರಬುದ್ಧರ ಮುಂದೆ ಆಡುವಾಟಗಳು ಈ
ಸುಪ್ರಬುದ್ಧರ ಸಭೆಯಲಿ
ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ
ಸುಪ್ರಭಾತವು ಬಂತು ಹಯವದನ ದಿನದಿನದಿ
ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ
ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ ||3||
Uppavaḍisayya trivikrama ninna puradoḷage
ippa mukutarige salladu nidre ninagilla
kalpāntadali nityavāda vēdava neneva
suprabhāvanigēke hīnamanujara sāmya ||pa||
Harinālku manvantragaḷanu hagalanu māḷpa
vidhi ninna kuvarane nidregoppade banda
idu sarvasopana animiṣaremba birudinava
ridake kōpisi bandaru
vidhi tanna hagala naḍesuta ninage ī terana
madanapita tāḷade iḷege naḍetanda
sadubudharu tam’ma viṣayava neneva jantugaḷu
idu tāḷevenuta bāgiloḷu bandaidāre ||1||
nidregaivara hr̥dayadalli bhūbhūyemba
eddu baha śvāsadabhimāni mukhyaprāṇa
kṣudragati tannāḷdagidu pusiyenuta banda
madhvasadbhāṣyakāra
hoddi karagaḷa mugidu jīvarigu ninagu pra-
bud’dhajanenuta banda vēdāntadēviyaru
nirdōṣa nīnetta nidreyettenuta pāda-
padmagaḷa piḍidu pāḍuva sāmagaḷa savidu ||2||
aprākr̥tane ninage ī prakr̥tiguṇagaḷiṁ-
dippa yuktigaḷa suptigaḷu sallavu dēva
aprabud’dhara munde āḍuvāṭagaḷu ī
suprabud’dhara sabheyali
sarpataÀlpane tōridayya sākainaṭane
suprabhātavu bantu hayavadana dinadinadi
tappade māḍuvaghryadi satkarmagaḷa
oppugoḷu apratimamahima trivikramarāya ||3||