ಗೋದಾ ಎನ್ನೊಳ್ವಿನೋದದಿಂದ
ಮಾತಾಡಿ ತೋರಿಸೆ ನಿನ್ನ ಪಾದ ||pa||
ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು
ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ ||1||
ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ
ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ ||2||
ದೂರದಿ ಬಂದೆ ನಾ ಗೋದಾವರಿಯೆ ನೀನು
ತೋರೆ ಭೀಮೇಶಕೃಷ್ಣನ್ನೂರು ದಾರಿಗಳ ||3||
gOdA ennoLvinOdadinda
mAtADi tOrise ninna pAda ||pa||
sAdhu sajjanarige snAnadaPala koTTu
bOdhisi haridaya sAdhisi koDisuvi ||1||
akka tangEru kUDi ukkO ullAsade
lakkumISana muddu makkaLa manegoyve ||2||
dUradi bande nA gOdAvariye nInu
tOre BImESakRuShNannUru dArigaLa ||3||
ಗೋದೆ ಅತಿ ಪುಣ್ಯ ಸಾಧೆ
ಮಾಧವನ ಚರಣಾರವಿಂದೆ ಪಾದೆ ||pa||
ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ
ಎದ್ದೋಡಿ ತಿರುಗಿ ನೋಡದೆ ಹೋಹವು
ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ
ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ||1||
ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ
ವಂದನೆಯ ಮಾಡಿ ಸಾಷ್ಟಾಂಗೆರಗಲೂ
ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ
ಒಂದು ಉಳಿಯದಂತೆ ಬೆಂದು ಹೋಹವು ||2||
ಅತಿವೇಗದಿಂದ ಬಂದು ಸ್ನಾನವನು ಮಾಡಲು
ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ
ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ
ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ||3||
gOde ati puNya sAdhe
mAdhavana caraNAravinde pAde ||pa||
iddalli ninna smaraNeyanu mADalu pApa
eddODi tirugi nODade hOhavu
sadbaktiyinda ninnanu nODabEkenuta
udyuktavAge brahmahatya parihAravo ||1||
bandu haruShadali kaNNali kanDu SiravAgi
vandaneya mADi sAShTAngeragalU
hindaNa SatakOTi durita rAsigaLella
ondu uLiyadante bendu hOhavu ||2||
ativEgadinda bandu snAnavanu mADalu
mativantarana mADi durmArga biDisi
ratipati janaka siri vijayaviThThalanna
stutisi gati paDevante dhanyaranu mADuva tAyi||3||
One thought on “Dasara padaglu on Godavari”