dasara padagalu · MADHWA · Sri Sathyapramoda thirtharu

Dasara pada on Sri Sathya pramoda theertharu

ಸತ್ಯಪ್ರಮೋದ ತೀರ್ಥರ ಪಾದ
ಪದುಮವ ನಿತ್ಯದಿ | ಭಜಿಸುವರ
ಸತ್ಯಲೋಕೇಶನ ಪೆತ್ತ ಪರಮಾತ್ಮನು |
ನಿತ್ಯದಿ ಕರಪಿಡಿವ ತಿಳಿ ಮಾನವಾ ||pa||

ರವಿಸನ್ನಿಭಾಂಗರು | ಭುವಿ ದಿವಿಜೇಂದ್ರರು |
ಕವಿಗಣ ಸನ್ನುತರು | ಭವದೂರರು |
ಭುವನದೋಳ್ ಧೃಡಚಿತ್ತದವರಾಗಿ | ತಪದಲ್ಲಿ
ಧ್ರುವನಂತೆ ತೋರುವರು ಮಹಾತ್ಮರು||1||

ಭುಜಗಾಧಿಪನಯಂತೆ ಯೋಗ ಸುಸಾಧಕರು
ಭುಜಗಾರಿಯಂದದಿ ದ್ವಿಜನಾಥರು |
ಭುಜಗ ಭೂಷಣನಂತೆ ನಿಜವೈಷ್ಣವೋತ್ತಮರು
ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು ||2||

ಸೋಮನಂದದಿ ಸುಸಾಧಕರೆನಿಸುತ |
ನೇಮಪೂರ್ವಕವಾಗಿ | ನಿತ್ಯದಲ್ಲಿ
ಶಾಮಸುಂದರ ಸೀತಾ ರಾಮನರ್ಚಿಸುತಲಿ |
ಭೂಮಿಯೋಳು ಮೆರೆದಿಹರು ಸುಧೀರರು ||3||

satyapramOda tIrthara pAda
padumava nityadi | Bajisuvara
satyalOkESana petta paramAtmanu |
nityadi karapiDiva tiLi mAnavA ||pa||

ravisanniBAngaru | Buvi divijEndraru |
kavigaNa sannutaru | BavadUraru |
BuvanadOL dhRuDacittadavarAgi | tapadalli
dhruvanante tOruvaru mahAtmaru||1||

BujagAdhipanayante yOga susAdhakaru
BujagAriyandadi dvijanAtharu |
Bujaga BUShaNanante nijavaiShNavOttamaru
vijayAnaMdadi | digvijaya SAligaLivaru ||2||

sOmanandadi susAdhakarenisuta |
nEmapUrvakavAgi | nityadalli
SAmasundara sItA rAmanarcisutali |
BUmiyOLu merediharu sudhIraru ||3||


ಸತ್ಯಾಭಿಜ್ಞ ಕರಜ ಶ್ರೀ | ಸತ್ಯಪ್ರಮೋದಾ |ತೀರ್ಥ ನಿಮ್ಮಯ ಚರಣ ದ್ವಂದ್ವಕಾ ನಮಿಪೆ ||pa||

ವೈರಾಗ್ಯ ಸದ್ಭಾಗ್ಯ | ಪರಮ ನಿಧಿಯೆನಿಸುತಲಿಶ್ರೀರಾಮ ಪದತುಂಗ | ಸರಸಿರುಹ ಭೃಂಗಾ |
ಊರೂರು ಚರಿಸುತಲಿ | ಆ ರಾಮ ಪದದ್ವಂದ್ವಆರಾಧಕರಿಗ್ವೊರೆದ | ಪರಮ ತತ್ವಗಳಾ ||1||

ವಾದಿಗಳ ಹೃದಯ ನಿ | ರ್ಭೇದ ಗೈಸುವ ನಿಮ್ಮವಾದಗಳ ಗಡಣೆಗಳ | ವಾದಿಗಳು ಕೇಳೀ |
ಪಾದವನು ಕ್ರಮಿಸುತ್ತ | ಗೈದರು ಪಲಾಯನವಮೋದ ಪ್ರಮೋದ ಹರಿ | ಕಾರುಣ್ಯ ಪಾತ್ರಾ ||2||

ಕಲ್ಯಾಣ ಪುರಿಯೊಳಗೆ | ಎಲ್ಲ ವೈಷ್ಣವರ್ನೆರೆದುಪುಲ್ಲನಾಭನು ಶ್ರೀ ವೇದವ್ಯಾಸರನೂ |
ಚೆಲ್ವಗಜ ವಾಹನದಿ | ಕುಳ್ಳಿರಿಸಿ ಐತರಲುಎಲ್ಲ ಭಕ್ತರು ಮೊರೆಯೆ | ಅಂಬರವು ಬಿರಿಯೇ ||3||

ಖರನಾಮ ವತ್ಸರ ಸು | ಮೂರೆರಡನೆ ಮಾಸಆರೆರಡನೇ ದಿನದಿ | ಚಾರು ನಿಮ್ಮಯ ಮಠದಲೀ |
ಧೀರ ನೀ ಸ್ಥಾಪಿಸಿದೆ | ಎರಡು ವೃಂದಾವನವಶ್ರೀ ರಘೋತ್ತಮ ಸಿರಿ | ಸತ್ಯಧ್ಯಾನರ ಭಕ್ತಿಲೀ ||4||

ನವರತ್ನ ಮಂಟಪದಿ | ಶ್ರೀ ವರನ ಕುಳ್ಳಿರಿಸಿವಿವಿಧ ವಿಧಿವತ್ಪೂಜೆ | ಹವಣೆಯಲಿ ಮಾಡೇ |
ಅವನಿ ಸುರರುಗಳಿಂದ | ಸ್ತವನ ವೇದಗಳಿಂದಶ್ರವಣ ಸುಖವಾನಂದ | ಕಳಗು ಭವ ಬಂಧಾ ||5||

ಕೋಪರಹಿತರುಯೆನಿಸಿ | ಶ್ರೀ ಪತಿಯ ಧ್ಯಾನಿಸುತತಾಪಸೀಗಳು ತೀರ್ಥ | ಪ್ರಾಪಿಸುತ್ತಿರೆ ಭಕುತರೂ |ಪಾಪ ಕಳೆದೆವು ಯೆಂಬ ಸ | ಲ್ಲಾಪದೊಳು ತಪನತಾಪ ಮರೆತರು ನೋಡಿ | ಪಾಪ ಹೊರದೂಡೀ||6||

ಹತ್ತಾರು ಸಾಸಿರಕೆ | ಮತ್ತೆ ಭೋಜನಗೈಸಿಕೃತಿವಾಸನ ತಾತ | ಉತ್ತಮೋತ್ತಮನೆನ್ನುತಾ |
ಸತ್ಯವಲ್ಲಭ ಗುರೂ | ಗೋವಿಂದ ವಿಠಲನಪ್ರತ್ಯಹರ್ ಅರ್ಚಿಸುವ | ಸತ್ಯ ಪ್ರಮೋದಾರ್ಯ ||7||

satyABij~ja karaja SrI | satyapramOdA |tIrtha nimmaya caraNa dvandvakA namipe ||pa||

vairAgya sadBAgya | parama nidhiyenisutaliSrIrAma padatunga | sarasiruha BRungA |
UrUru carisutali | A rAma padadvaMdva^^ArAdhakarigvoreda | parama tatvagaLA ||1||

vAdigaLa hRudaya ni | rBEda gaisuva nimmavAdagaLa gaDaNegaLa | vAdigaLu kELI |
pAdavanu kramisutta | gaidaru palAyanavamOda pramOda hari | kAruNya pAtrA ||2||

kalyANa puriyoLage | ella vaiShNavarneredupullanABanu SrI vEdavyAsaranU |
celvagaja vAhanadi | kuLLirisi aitaralu^^ella Baktaru moreye | aMbaravu biriyE ||3||

KaranAma vatsara su | mUreraDane mAsa^^AreraDanE dinadi | cAru nimmaya maThadalI |
dhIra nI sthApiside | eraDu vRundAvanavaSrI raGOttama siri | satyadhyAnara BaktilI ||4||

navaratna maMTapadi | SrI varana kuLLirisivividha vidhivatpUje | havaNeyali mADE |
avani surarugaLiMda | stavana vEdagaLindaSravaNa suKavAnanda | kaLagu Bava baMdhA ||5||

kOparahitaruyenisi | SrI patiya dhyAnisutatApasIgaLu tIrtha | prApisuttire BakutarU |
pApa kaLedevu yeMba sa | llApadoLu tapanatApa maretaru nODi | pApa horadUDI||6||

hattAru sAsirake | matte BOjanagaisikRutivAsana tAta | uttamOttamanennutA |
satyavallaBa gurU | gOvinda viThalanapratyahar arcisuva | satya pramOdArya ||7||

One thought on “Dasara pada on Sri Sathya pramoda theertharu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s