ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ
ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||pa||
ತಾಪತ್ರಯಗಳುದ್ದೀಪನವಾಗಿವೆನೀ ಪರಿ ಪಾಲಿಪದೀ ಪರಿ ಥರವೆ ||1||
ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ ||2||
ದೂರ ನೀ ನೋಡಲು ಆರು ಯಿಲ್ಲವೊ ಗತಿಕಾರುಣ್ಯದಲಿ ನಿವಾರಿಸು ದುರಿತ ||3||
ಸ್ವೀಕರ ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ ||4||
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ ||5||
ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ ||6||
ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ ||7||
kAyo kAyo guru vijayarAyakAyo kAyo varavIyo
vijaya gururAya nInallade upAyave yilla ||pa||
tApatrayagaLuddIpanavAgivenI pari pAlipadI pari tharave ||1||
pApagaLeNisade pAvana mALpaduSrIpati paDeda surApagadaMte ||2||
dUra nI nODalu Aru yillavo gatikAruNyadali nivArisu durita ||3||
svIkara mALpadu nI karisade baluvyAkulanAgihe nI karuNadali ||4||
pariharisali salla karaviDi byAganeguruve nimmaya caraNa sEvakana ||5||
nInALuvaroLu I naramUrKanu^^Enu ariye balu dInavAgihano ||6||
Alasa tALadu pAlisu vENu gO- pAla viThalana ALu kRupALo ||7||
One thought on “kayo Kayo Guru Vijaya raaya”