dasara padagalu · MADHWA · purandara dasaru

Nambi kettavarillavo rangayyana

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ ||pa||

ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ ||apa||

ಪಿತನ ತೊಡೆಯ ಮೇಲೆ ಧ್ರುವರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ ||1||

ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ ||2||

ಕರಿರಾಜನ ಸಲಹಿ ಅಂಜದಿರೆಂದು ಅ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ||3||
Nambi kettavarillavo rangayyana
Nambade kettare kedali ||pa||

Ambujanabana akila lokesana
Aprameyanada adipurushana ||apa||

Pitana todeya mele dhruvaraya
Hitadinda kulitiralu
Matihinalada surucidevi nukalu
Hitadi dhruvage patta kotta murariya ||1||

Vara prahladana pitanu badhisutire
Hari nine gatiyenalu
Parama pritiyinda taralana palisi
Durula hiranyakasyapana silida dhoreya ||2||

Karirajana salahi anjadirendu a-
Darisidavaru yaro
Garudagamana sri purandaravithalana
Caranakamalavannu drudhadinda nambiro||3||

2 thoughts on “Nambi kettavarillavo rangayyana

Leave a comment