dasara padagalu · MADHWA · purandara dasaru

Na madida karma balavantavadare

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವುದೇನೊ ದೇವ ||ಪ||
ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಫಣೆಯಲ್ಲಿ ಬರೆದುದಕೆ ||ಅ.ಪ||

ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ, ಪರ-
ಸತಿಯರ ಸಂಗಗಳ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿಯಾವುದಿನ್ನು ಗರುಡ ಗಮನ ಕೃಷ್ಣ ||

ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಜಪ ಸಂಧ್ಯಾನ ತಪವ ನೀಗಿ
ದಾನವಾಂತಕ ನಿನ್ನ ಧ್ಯಾನವ ಮಾಡದೆ
ಶ್ವಾನದಂತೆ ಮನೆ ಮನೆ ತಿರುಗತಲಿದ್ದೆ ||

ಇನ್ನಾದರು ನಿನ್ನ ದಾಸರ ಸಂಗವಿತ್ತು
ಮನ್ನಿಸಿ ಸಲಹಯ್ಯ ಮನ್ಮಥ ಜನಕ
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ
ಪನ್ನಗ ಶಯನ ಶ್ರೀ ಪುರಂದರ ವಿಠಲ ||
Na madida karma balavantavadare
Ni maduvudeno deva ||pa||

Samanyavallavidu brahma bareda baraha
Nemadindali enna paneyalli baredudake ||a.pa||

Atithigalige anna kottavanalla, para-
Satiyara sangagala bittavanalla
Matihina nanagi marulagiddeno deva
Gatiyavudinnu garuda gamana krushna ||

Annapanangalige agraganyanagi
Snana japa sandhyana tapava nigi
Danavantaka ninna dhyanava madade
Svanadamte mane mane tirugatalidde ||

Innadaru ninna dasara sangavittu
Mannisi salahayya manmatha janaka
Anyarobbara kane Adarisuvarilla
Pannaga Sayana sri purandara vithala ||

2 thoughts on “Na madida karma balavantavadare

Leave a comment