ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದಭಜನೆ ಸುಖವಯ್ಯ||pa||
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು
ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ||1||
ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕು
ಶುದ್ಧನಾಗಿರಬೇಕು ಕರಣತ್ರಯಂಗಳಲಿ||2||
ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕು
ನಿಶಿ ಹಗಲು ಶ್ರೀಹರಿಯ ಭಜಿಸಬೇಕು
ವಸುಧೆಯೊಳು ಪುರಂದರವಿಠಲನ ನಾಮವ
ಹಸನಾಗಿ ನೆನೆನೆನೆದು ಸುಖಿಯಾಗಬೇಕು||3||
Idu bagya idu bagya idu bagyavayya
Padumanabana padabajane sukavayya||pa||
Kallagi irabeku kathina bavatoreyolage
Billagi irabeku ballavarolu
Mellane madhavana manadi meccisabeku
Bellavagirabeku bandhujanarolage||1||
Buddhiyali tanumanava tiddikolutirabeku
Muddagi irabeku muni yogigalige
Madhva matabdhiyali minagi irabeku
Suddhanagirabeku karanatrayangalali||2||
Vishayabogada trunake uriyagi irabeku
Nisi hagalu srihariya bajisabeku
Vasudheyolu purandaravithalana namava
Hasanagi nenenenedu sukiyagabeku||3||
2 thoughts on “Idu bagya idu bagya idu bagyavayya”