ಹರಿಯಧಿಕ ಹರನಧಿಕ ಎಂದು ಹೋರಾಡದಿರಿ
ಹರಿ–ಹರರ ಭಕ್ತರೇ ಸಾಕ್ಷಿ ಲೋಕದೊಳು ||ಪ||
ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ
ಹರನೆಂದು ಅವನ ಪಿತ ತಾನೆ ಅಳಿದ
ಹರಿಯೆಂದು ವಿಭೀಷಣನು ಸ್ಥಿರ–ಪಟ್ಟವೈದಿದ
ಹರನೆಂದು ರಾವಣನು ಹತನಾದನಯ್ಯ ||೧||
ಹರಿಯೆಂದು ಭೀಮ ಪರಿಪೂರ್ಣಕಾಮನು ಆದ
ಹರನೆಂದ ಆ ಜರಾಸಂಧ ಹತನಾದ
ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ
ಹರನ ಬಾಗಿಲ ಕಾಯ್ದ ಬಾಣನಳಿದ ||೨||
ಹರನ ವರವನು ಪಡೆದ ಭಸ್ಮಾಸುರನು ಅವನ
ಶಿರದಲ್ಲಿ ತನ್ನ ಕರವಿಡಲು ಬರಲು
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು
ವರದ ಪುರಂದರ ವಿಠಲ ಕಾಯ್ದ–ದರಿಯ ||೩||
Hariyadhika haranadhika endu horadadiri
Hari-harara baktare sakshi lokadolu ||pa||
Hariyendu prahlada banda duritava gelida
Haranendu avana pita tane alida
Hariyendu vibishananu sthira-pattavaidida
Haranendu ravananu hatanadanayya ||1||
Hariyendu bima paripurnakamanu Ada
Haranenda A jarasandha hatanada
Hariya bagila kayda bali bagyavantanada
Harana bagila kayda bananalida ||2||
Harana varavanu padeda basmasuranu avana
Siradalli tanna karavidalu baralu
Hari nine gatiyendu tripurari moreyidalu
Varada purandara vithala kayda-dariya ||3||
One thought on “Hariyadhika haranadhika endu”