ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ||pa||
ಬಾ ಬಾ ಎನ್ನಂತರಂಗ ಮಲ್ಲರಗಜ ಸಿಂಗ ದುರಿತ ಭವಭಂಗ||a.pa||
ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯಿದ ಉಲ್ಲಾಸ
ಇಭವರದನೆ ಶ್ರೀನಿವಾಸ||1||
ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನ ಕಾವ||2||
ಚಂದ್ರ ಪುಷ್ಕರಿಣಿಯ ತೀರವಿಹಾರ
ಇಂದ್ರಾದಿ ಸುರ ಪರಿವಾರ
ಚಂದ್ರಶೇಖರ ನುತನಾದ ಸುಖ-
ಸಾಂದ್ರ ಸುಗುಣ ಗಂಭೀರ||3||
ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿ-
ಭೀಷಿಣಗೊಲಿದ ಸುಪ್ರಾಣ||4||
ಶಂಬರಾರಿಯ ಪಿತ ಡಂಬರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರು ನಾರದಕೃತ ಸ್ತೋತ್ರ||5||
Ba ba ranga bujangasayana komalanga krupapanga||pa||
Ba ba ennantaranga mallaragaja singa durita bavabanga||a.pa||
Ubaya kaveriya madhyanivasa
Abayadayaka mandahasa
Sabeyolu satiyala kayida ullasa
Ibavaradane srinivasa||1||
Elu prakarada malige maneyolage
Galiya devara deva
Solasasira gopiyaralida I-
Relu lokada jana kava||2||
Camdra pushkariniya tiravihara
Indradi sura parivara
Candrasekara nutanada suka-
Sandra suguna gambira||3||
Ishanatrayagala dushita nirata a-
Sesha vibava janapala
Bushita nana vastrabarana vi-
Bishinagolida suprana||4||
Sambarariya pita dambarahita mana
Ambujadalanibanetra
Kambucakradhara purandaravithala
Tumburu naradakruta stotra||5||
One thought on “Ba ba ranga bujangasayana”