ಸ್ಮರಿಸೊ ಸರ್ವದ ಹರಿಯ ||ಪ||
ಸುರವರ ದೊರೆಯ ಕರುಣಾನಿಧಿಯ ||ಅ.ಪ||
ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||೧||
ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ ||೨||
ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ ||೩||
Smariso sarvada hariya ||pa||
Suravara doreya karunanidhiya ||a.pa||
Munijana vandyana manasijanayyana
Manadali anudina neneyo hariya ||1||
Varagunapurnana sarasijanetrana
Paravasudevana pranada priyana ||2||
Venkataramanana sankataharanana
Lakshmiramanana purandaravithalana ||3||
2 thoughts on “smariso sarvada hariya”