ಎನಗೂ ಆಣೆ ರಂಗ ನಿನಗೂ ಆಣೆ ||ಪ||
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ||ಅ.ಪ||
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ ||೧||
ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ||೨||
ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ||೩||
ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ||೪||
ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ||೫||
Enagu ane ranga ninagu ane ||pa||
Enagu ninagu ibbarigu baktarane ||a.pa||
Ninna bittu anyara Bajisidarenage ane ranga
Enna ni kai bittu podare ninage ane ||1||
Tanumanadhanadali vanchakanadare ninage ane ranga
Manasu ninnali nilisadiddare ninage ane ||2||
Kaku manujara sangava madadiddare enage ane ranga
Laukikava bidisadiddare ninage ane ||3||
Sishtara sanga madadiddare enage ane ranga
Dushtara sangava bidisadiddare ninage ane ||4||
Hari ninnasraya madadiddare enage ane ranga
Purandaravithala ninoliyadiddare ninage ane ||5||
2 thoughts on “enagu ane ranga”