ಕಂಡು ಎಂದಿಗೆ ಧನ್ಯಳಾಗುವೆ ನಾನು
ಪಂಡರೀಶನ ಪಾದ ಪುಂಡರೀಕವನೂ||pa||
.
ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯ ಬಂಧು ನೆಲಸಿದಂಥಾ
ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು
ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ ||1||
ಕೋಮಲದ ಚರಣಕಭಿನಮಿಸಿ ಕರಯುಗದಿಂದ
ಶ್ಯಾಮವರ್ಣನ ಪಾದಕಮಲ ಮುಟ್ಟೆ
ಆ ಮಹಾ ಆನಂದ ಅನುಭವಿಪ ಭಾಗ್ಯವನು
ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ ||2||
ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ
ಆಪಾದ ಮೌಳಿ ಈಕ್ಷಿಸುತ ಹೃದಯದಲಿ
ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ
ಗೋಪಾಲಕೃಷ್ಣವಿಠಲನ ಎಂದು ಕಾಂಬೆ ||3||
Kandu endige dhanyalaguve nanu
Pada pundarikavanu ||pa||
Pundarikanigolidu ondu ittige mele
Pandavara priya bandhu nelasidantha
Pandari kshetradali chandrabagadi mindu
Mande baguta harige hindagava kaledu ||1||
Komalada charanakabinamisi karayugadinda
Syamavarnana padakamala mutte
A maha Ananda anubavipa bagyavanu
Sri mahalakumipati endu kambuveno ||2||
Aparabaktarige valida vithalana murti
Apada mauli ikshisuta hrudayadali
Irpamurtiya tandu gurubimba sahitadali
Gopalakrushnavithalana endu kambe ||3||
One thought on “Kandu endhige”