ಜಯ ಜಯ ಜಯ ಶ್ರೀನಿವಾಸ
ಜಯಾ ಶಾಂತಿ ಕೃತಿ ಮಾಯಾ ಶ್ರೀಶ
ಭಯಬಂಧಮೋಚಕ ಜೀಯ ಆಹ
ಸುಂದರ ಚಿನ್ಮಯಾನಂದ ಜÁ್ಞನಾತ್ಮನೆ
ಮಂದಜಭವ ಸುರವೃಂದ ಸಂಸೇವ್ಯ ಜಯ ||ಪ||
ಸುರಸರಿತ ತೀರದಿಂದ
ಸುರಮುನಿ ಭೃಗು ಬಂದು ನಿನ್ನ
ಪರಸಮರಹಿತನೆಂದರಿತ ಆಹ
ಸಿರಿಯು ನಿನ ಭಾವವನುಸರಿಸಿ ಬೇಗ
ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ ||1||
ಮೇರುಸುತನೆ ಹಾಟಕಾದ್ರಿ
ವೀರ ಭಕುತ ವೃಷಭಾದ್ರಿ
ಕೀರುತಿ ಇತ್ತಿ ತಂಜನೆಗೆ ಆಹ
ಸರೀಸೃಪಾವರಿಸಿದ ಸೌರಭ್ಯಗಿರಿಯಿದು
ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ ||2||
ನೀನಿದ್ದ ಸ್ಥಳವೇ ವೈಕುಂಠ
ನಿನಗಾರು ಸಮರುಂಟೆ ಶ್ರೀಶ
ದೀನ ಸುಜನರಿಗೆ ನಂಟ ಆಹ
ಧೇನು ಪಾಲ್ಗರೆಯಲು ಪಾಲಕ ಹೊಡೆಯಲು
ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ ||3||
ಏಳು 2ತಾಳದ ಉದ್ದ ರಕ್ತ
ತಾಳಲಾರದೆ ಬಿದ್ದ ಗೋಪ
ಚೋಳರಾಯಗೆ ಕೊಟ್ಟೆ ಶಾಪ ಆಹ
ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ
ಶೀಲ ಸುರರ ಗುರು ಚಿಕಿತ್ಸೆಯನೈದಿದೆ ||4||
ಸ್ವಗತ ಭೇದವಿಲ್ಲದಂಥ
ಸ್ವಚ್ಛ ಚಿತ್ಸುಖಮಯನಂತ
ಸ್ವಾನಿರ್ವಾಹಕ ವಿಶೇಷ ಆಹ
ಶ್ವೇತವರಾಹನ ಸಂವಾದದಿಂದಲಿ
ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು ||5||
ಸರಸ್ವತೀ ಸ್ವಾಮಿ ಪುಷ್ಕರಣಿ
ಸುರಮುನಿನರರಿಗೆ ಸ್ನಾನ
ಪರಸುಖಮಾರ್ಗ ಸೋಪಾನ ಆಹ
ಸುರತಟಿನ್ಯಾದಿ ಸುತೀರ್ಥಗಳೆಲ್ಲವು
ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ ||6||
ಆದಿಕಾರಣ ನಿನ್ನ 3ಲೀಲಾ
ಮೋದಸಂಭ್ರಮವನ್ನು ನೋಡೆ
ಕಾದುಕೊಂಡಿಹರು ಕೋವಿದರು ಆಹ
ಸಾಧು ಸಂಭಾವಿತ ಬಕುಳಾದೇವಿಯುಗೈದ
ಸ್ವಾದ ಭೋಜ್ಯವನುಂಬ ನಿತ್ಯ ಸಂತೃಪ್ತ|| 7||
ಮಂಗಳ ಚಿನ್ಮಯ ರಂಗಾ –
ನಂಗನಯ್ಯನೆ ಮೋಹನಾಂಗ
ತುಂಗ ಮಹಿಮನೆ ಶುಭಾಂಗ ಆಹ
ಬಂಗಾರ ಕುದುರೆ ಮೇಲಂಗನೇರಲಿ ಬಂದ
ಶೃಂಗಾರವೇನೆಂಬೆ ಎಂದಿಗೂ ಸ್ವರಮಣ||8||
ತೋಂಡಮಾನ ರಾಯನಣ್ಣ
ಚಂಡಭೂಪನು ಆಕಾಶ
ಕಂಡನು ಕಮಲದೊಳ್ ಶಿಶುವ ಆಹ
ಅಂಡ ಅಖಿಳ ಕೋಟಿ ಅಸಮ ಈ ಶಿಶುವನ್ನು
ಹೆಂಡತಿ ಧರಣಿಯು ಕೊಂಡಳು ಮಗಳಾಗಿ ||9||
ಮೂಲೇಶ ನಿನ್ನಯ ರಾಣಿ
ಮೂಲಪ್ರಕೃತಿ ಗುಣಮಾನಿ
ಕೀಲಾಲಭವ ಭವ ತಾಯಿ ಆಹ
ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು
5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ ||10||
ಮಹಿದೇವಿ ಕಮಲವಾಸಿನಿಯು
ಬಹಿನೋಟಕ್ಕೆ ರಾಜಸುತೆಯು
ಬಹು ಚಿತ್ರ ಪುಷ್ಪವ ಕೊಯ್ಯೆ ಆಹ
ಮಹತಿಪಾಣಿಯು ಬಹು ವಯೋರೂಪದಲಿ ಬಂದು
ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ ||11||
ಹಾಟಕಗಿರಿಯಿಂದ ನೀನು
ಬೇಟೆಯಾಡುವ ರೂಪ ತಾಳಿ
ಘೋಟಕವೇರಿ ಸಂಭ್ರಮದಿ ಆಹ
ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ
ನಾಟಕವಾಡಿದ್ದು ಪಾಡಲರಿಯೆನೊ ||12||
ನಿತ್ಯನಿರ್ಮಲ ಅವಿಕಾರ
ಮತ್ರ್ಯರವೋಲು ನೀ 1ನಟಿಸೋ
ಕೃತ್ಯಗಳರಿವರು ಯಾರೋ ಆಹ
ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ
ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ ||13||
ಪೊಂದಿದೆ ಫುಲ್ಕಸೀ ರೂಪ
ಮಂಧಜಭವ ಶಿಶುವಾಗೆ
ನಂದಿನಿಧರ ಯಷ್ಟಿಯಾದ ಆಹ
ಮಂದಜಭವಾಂಡ ಗುಣಗುಲ್ಮ ಮಾಡಿ ನೀ
ಕಂಧರದಲಿ ಗುಂಜ ಕಂಬುಸರವ ತೊಟ್ಟೆ ||14||
ನಾರಾಯಣಪುರಿಯಲ್ಲಿ
ಮಾರನಯ್ಯನೆ ನಿನ್ನ ಸುಗುಣ
ವಾರಿಧಿ ಪೊಕ್ಕಳು ಪದುಮೆ ಆಹ
ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು
ಪರಿಪರಿ ಪರಿಹಾರ ಪರದು ನೋಡಿದರಾಗ ||15||
ಶುದ್ಧ ಸುಂದರ ಸುಖಕಾಯ
ವೃದ್ಧ ಫುಲ್ಕಸೀ ವೇಷಧಾರಿ
ಬದ್ಧ ಶೋಕರ ಬಳಿ ಪೋದೆ ಆಹ
ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ
ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ ||16||
ವಹಿಸಿ ನಿನ ಶಾಸನ ಬಕುಳ
ಮಹದೇವನಾಲಯದಿಂದ
ಮಹಿಳೆಯರ ಸಹ ಕೂಡಿ ಆಹ
ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ
ಬಹು ಶುಭವಾರ್ತೆಯ ತಂದು ಪೇಳಿದಳೊ ||17||
ಶುಕಮುನಿ ಕರಪ್ರದವಾದ
ಆಕಾಶ ನೃಪ ಲಗ್ನಪತ್ರ
ಸ್ವೀಕರಿಸಿದೆ ಬಹು ಹಿತದಿ ಆಹ
ವಾಗೀಶ ಶಶಿಧರ ನಾಗೇಶ ಸೌಪರ್ಣ
ನಾಕೀಶ ಮೊದಲಾದ ಸುರರನು ಕರೆದೆ ||18||
ಶಿಷ್ಟ ಸನ್ಮುನಿಜನ ಕೂಟ
ತುಷ್ಟ ಸುಮನಸ ಸಮೂಹ
ಶ್ರೇಷ್ಠಸುಗಂಧಿ ಆಗಮನ ಆಹ
ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ
ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ ||19||
ಮಾಯ ಜಯೇಶ ಶ್ರೀವತ್ಸ
ಛಾಯೇಶಗುಪಾಯ ಪೇಳಿ
ತೋಯಜೆಯನು ಕರೆತಂದೆ ಆಹ
ಮಾಯಾ ಜಯಾ ಸಿರಿ ಕೃತಿ ಕಾಂತಿ ನಿನ್ನಿಂದ
ವಿಯೋಗರಹಿತರು ಎಂದೂ ಎಲ್ಲೆಲ್ಲೂ ||20||
ಬೃಹದಣುವಿಗೆ ಸತ್ತಾಪ್ರದನೆ
ಸುಹೃದ ಸಂತೃಪ್ತ ಮುಖಾಬ್ಧೇ
ದೃಢವ್ರತ ಶುಕಮುನಿಗೊಲಿದೆ ಆಹ
ಬೃಹತೀ ಫಲಾನ್ನವನುಂಡು ಫೂತ್ಕಾರದಿ
ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ ||21||
ಸುಜನರಿಗಾನಂದ ದಾತ
ದ್ವಿಜರೂಢ ಜಗದೀಶ ನೀನು
ಅಜಸುರರೊಡಗೂಡಿ ಬರೆ ಆಹ
ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ
ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ ||22||
ಅಜರ ಮಂದಿರ ಪೋಲ್ವ ಮನೆಯು
ಪ್ರಜುವಲಿಸುವ ದಿವ್ಯ ಸಭೆಯು
ನಿಜಭಕ್ತ ಪುರುಜನ ಗುಂಪು ಆಹ
ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ
ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ ||23||
ಸುರಮುನಿಜನ ಮೂರು ವಿಧಕೆ
ತರತಮ ಯೋಗ್ಯತೆ ಆರಿತು
ಪರಿಪರಿ ಸಾಧನವಿತ್ತೆ ಆಹ
ನೀರರುಹಜಾಂಡವು ನಿನ್ನಾಧೀನವು
ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ ||24||
ನೀ ನಿಂತು ನುಡಿಸಿದೀ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ಚನ್ನಮಾರುತ ಮನೋಗತನೆ ಆಹ
ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25||
jaya jaya jaya SrInivAsa
jayA SAMti kRuti mAyA SrISa
BayabaMdhamOcaka jIya Aha
suMdara cinmayAnaMda jaÁ#0CCD;~janAtmane
maMdajaBava suravRuMda saMsEvya jaya ||pa||
surasarita tIradiMda
suramuni BRugu baMdu ninna
parasamarahitaneMdarita Aha
siriyu nina BAvavanusarisi bEga
karavIra pura pOge giriputta pokkeyo ||1||
mErusutane hATakAdri
vIra Bakuta vRuShaBAdri
kIruti itti taMjanege Aha
sarIsRupAvarisida sauraByagiriyidu
paravEMkaTAdriyu haritu viprana pApa ||2||
nInidda sthaLavE vaikuMTha
ninagAru samaruMTe SrISa
dIna sujanarige naMTa Aha
dhEnu pAlgareyalu pAlaka hoDeyalu
dInarakShaka nInu Sirasittu poredeyo ||3||
ELu 2tALada udda rakta
tALalArade bidda gOpa
cOLarAyage koTTe SApa Aha
pELaballene ninna atiSaya lIleya
SIla surara guru cikitseyanaidide ||4||
svagata BEdavilladaMtha
svacCa citsuKamayanaMta
svAnirvAhaka viSESha Aha
SvEtavarAhana saMvAdadiMdali
svIkarisidI sthaLa modalu pUjeya koTTu ||5||
sarasvatI svAmi puShkaraNi
suramuninararige snAna
parasuKamArga sOpAna Aha
surataTinyAdi sutIrthagaLellavu
saritavAgirutave I svAmi tIrthadi ||6||
AdikAraNa ninna 3lIlA
mOdasaMBramavannu nODe
kAdukoMDiharu kOvidaru Aha
sAdhu saMBAvita bakuLAdEviyugaida
svAda BOjyavanuMba nitya saMtRupta|| 7||
maMgaLa cinmaya raMgA –
naMganayyane mOhanAMga
tuMga mahimane SuBAMga Aha
baMgAra kudure mElaMganErali baMda
SRuMgAravEneMbe eMdigU svaramaNa||8||
tOMDamAna rAyanaNNa
caMDaBUpanu AkASa
kaMDanu kamaladoL SiSuva Aha
aMDa aKiLa kOTi asama I SiSuvannu
heMDati dharaNiyu koMDaLu magaLAgi ||9||
mUlESa ninnaya rANi
mUlaprakRuti guNamAni
kIlAlaBava Bava tAyi Aha
SIla BUpAlana sute padmAvatiyeMdu
5 bAlEra saha puShpavanake baMdihaLo ||10||
mahidEvi kamalavAsiniyu
bahinOTakke rAjasuteyu
bahu citra puShpava koyye Aha
mahatipANiyu bahu vayOrUpadali baMdu
ahitalpa SrISane patiyeMdu nuDida ||11||
hATakagiriyiMda nInu
bETeyADuva rUpa tALi
GOTakavEri saMBramadi Aha
ATavADuva bAle baLiyalli baMdu nI
nATakavADiddu pADalariyeno ||12||
nityanirmala avikAra
matryaravOlu nI 1naTisO
kRutyagaLarivaru yArO Aha
BRutyavatsala nInu bakuLeya baLi pELi
saMtyasaMkalpa nina saMdESa kaLuhide ||13||
poMdide PulkasI rUpa
maMdhajaBava SiSuvAge
naMdinidhara yaShTiyAda Aha
maMdajaBavAMDa guNagulma mADi nI
kaMdharadali guMja kaMbusarava toTTe ||14||
nArAyaNapuriyalli
mAranayyane ninna suguNa
vAridhi pokkaLu padume Aha
puripa dharaNIdEvI putrige jvaraveMdu
paripari parihAra paradu nODidarAga ||15||
Suddha suMdara suKakAya
vRuddha PulkasI vEShadhAri
baddha SOkara baLi pOde Aha
idda suddiya abaddhavillade pELi
muddu padmege aniruddhane patiyeMde ||16||
vahisi nina SAsana bakuLa
mahadEvanAlayadiMda
mahiLeyara saha kUDi Aha
mahidEviyali pOgi vihita mAtugaLADi
bahu SuBavArteya taMdu pELidaLo ||17||
Sukamuni karapradavAda
AkASa nRupa lagnapatra
svIkariside bahu hitadi Aha
vAgISa SaSidhara nAgESa sauparNa
nAkISa modalAda suraranu karede ||18||
SiShTa sanmunijana kUTa
tuShTa sumanasa samUha
SrEShThasugaMdhi Agamana Aha
sRuShTyAdikarte nina sumahOtsava nODi
iShTArtha paDevaru eShTeMbe viBuve ||19||
mAya jayESa SrIvatsa
CAyESagupAya pELi
tOyajeyanu karetaMde Aha
mAyA jayA siri kRuti kAMti ninniMda
viyOgarahitaru eMdU ellellU ||20||
bRuhadaNuvige sattApradane
suhRuda saMtRupta muKAbdhE
dRuDhavrata Sukamunigolide Aha
bRuhatI PalAnnavanuMDu PUtkAradi
gRuha bahiradi idda janara tRuptiside ||21||
sujanarigAnaMda dAta
dvijarUDha jagadISa nInu
ajasuraroDagUDi bare Aha
ajita cinmaya ninna AkAra nRupa nODi
nijavAgi kRutakRutya dhanya tAneMda ||22||
ajara maMdira pOlva maneyu
prajuvalisuva divya saBeyu
nijaBakta purujana guMpu Aha
dvijara vEdagAna vAdya GOShisalAga
nijasati padmege mAMgalya dhariside ||23||
suramunijana mUru vidhake
taratama yOgyate Aritu
paripari sAdhanavitte Aha
nIraruhajAMDavu ninnAdhInavu
siriBUdoreyE SrInivAsa dayAnidhe ||24||
nI niMtu nuDisidI nuDiyu
ninnaDigaLige arpaNeyu
cannamAruta manOgatane Aha
vanarujahAsana tAta prasanna SrInivAsa
ninage prItiyAgalo suhRuda saMtRupta 25||
Very nice to read today on this auspicious day. Fondly remembering the haridasas’ also.
LikeLike