ದೇವಿ ನರ್ಮದೆ ಪಾಲಿಸಮ್ಮಾ ||pa||
ಕಾವನಯ್ಯನ ಚರಣ ತೋರಿಕಾವುದೆಮ್ಮ ಪಾವನಾತ್ಮಕೆ ||a.pa||
ದಣಿದು ಬಂದೆ ನಿನ್ನ ಅಡಿಗೆ | ಘನಗಿರಿ ಸಂಜಾತೆ –
ದೇವಿಮಣಿದು ನಿನ್ನ ತೀರ್ಥ ಸೇವನ | ಜನರ ಕಲುಷ ಹರಣವಮ್ಮ ||1||
ವರ ವಿಸ್ತಾರ ಪಾತ್ರವಮ್ಮ | ನರರಾಯಾಸ ಶಾಂತವಮ್ಮಅರುಣ
ಉದಯದಿಂದ ನಿನ್ನ | ಸುರನರಾದಿ ಸೇವಿಸುವರು ||2||
ವರ ಸುಜಪದಮಾಲೆ ಕರದಿ |ದರವು ಪದುಮ ಗ್ರಂಥಪಾಣಿಗುರು
ಗೋವಿಂದ ವಿಠಲ ಚರಣ |ನಿರತ ಧ್ಯಾನಾನಂದ ಮಗ್ನೆ||3||
dEvi narmade pAlisammA ||pa||
kAvanayyana caraNa tOrikAvudemma pAvanAtmake ||a.pa||
daNidu bande ninna aDige | Ganagiri sanjAte –
dEvimaNidu ninna tIrtha sEvana | janara kaluSha haraNavamma ||1||
vara vistAra pAtravamma | nararAyAsa SAntavamma^^aruNa
udayadinda ninna | suranarAdi sEvisuvaru ||2||
vara sujapadamAle karadi |daravu paduma granthapANiguru
gOvinda viThala caraNa |nirata dhyAnAnanda magne||3||
One thought on “dasara pada on Narmada”