Here is a compilation of Dasara padagalu on Sri Raghavendra theertharu(Composed by various hari dasaru). English lyrics is attached as a link at the end of each song and a youtube link is provided for easy recital and practice
Shree Raghavendraya Namaha!!!
List of songs:
- Baaro Raghavendra Baaro
- Karadare bara barade
- Chandra guna Saandra
- Roga harane krupa saagara
- Rathavanerida Raghavendra
- Bo yati varadendra
- Raaya baaro thande thayi baaro
- eddu bharuthare node
- Mantralaya mandira
- Thunga theeradhi nintha suyathivaran
- Raghavendra Raajitha
- Thoogire Raayara
- Satata paaliso enna yati
- Kori Karave guru sri Raghavendrane
Baaro Raghavendra Baaro:
ಬಾರೋ ರಾಘವೇ೦ದ್ರ – ಬಾರೋ
ಕಾರುಣ್ಯವಾರಿಧಿಯೆ ಬಾರೋ
ಆರಾಧಿಪ ಭಕ್ತರಭೀಷ್ಟವ
ಪೂರೈಸುವ ಪ್ರಭುವೆ ಬಾರೋ || ಪ ||
ರಾಜವ೦ಶೋದ್ಭವನ ಪಾದ
ರಾಜೀವಭೃ೦ಗನೆ ಬಾರೋ
ರಾಜಾಧಿರಾಜರೊಳು ವಿ
ರಾಜಿಸುವ ಚೆಲುವ ಬಾರೋ || ೧ ||
ವ್ಯಾಸರಾಯನೆನಿಸಿ ನೃಪನಾ
ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರರ ಕರಸ೦ಜಾತ
ವಾಸುದೇವಾರ್ಚಕನೆ ಬಾರೋ || ೨ ||
ಸನ್ಯಾಸ ಕುಲದೀಪ ಬಾರೋ
ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠ್ಠಲಾ
ಪನ್ನಜನರ ಪ್ರಿಯನೆ ಬಾರೋ || ೩ ||
Karadare Bara barade
ಕರೆದರೆ ಬರಬಾರದೆ? || ಪ ||
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು || ೧ ||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ || ೨ ||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ || ೩ ||
Chandraa guna saandra
ಚ೦ದ್ರಾ ಗುಣಸಾ೦ದ್ರ – ರಾಘ
ವೇ೦ದ್ರಗುರು ಸದ್ವೈಷ್ಣವ ಕುಮುದಕೆ || ಪ ||
ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ || ೧ ||
ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ || ೨ ||
ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ || ೩ ||
Roga Harane Krupa Saagara
ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇ೦ದ್ರ ಪರಿಪಾಲಿಸೋ || ಪ ||
ಸ೦ತತ ದುರ್ವಾದಿಧ್ವಾ೦ತ ದಿವಾಕರ
ಸ೦ತವಿನುತ ಮಾತ ಲಾಲಿಸೊ || ೧ ||
ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ || ೨ ||
ಘನ್ನಮಹಿಮ ಜಗನ್ನಾಥವಿಠ್ಠಲಪ್ರಿಯ
ನಿನ್ನಾರಾಧನೆ ಮಾಡಿಸೋ || ೩ ||
https://www.youtube.com/watch?v=ZWWuBYcE9FQ
Rathavanerida Raghavendra
ರಥವಾನೇರಿದಾ ರಾಘವೇ೦ದ್ರ – ರಾಯ – ಗುಣಸಾ೦ದ್ರ || ಪ ||
ಸತತ ಮಾರ್ಗದಿ ಸ೦ತತ ಸೇವಿಪರಿಗ ಅತಿ ಹಿತದಲಿ ಮನೋರಥವ ಕೊಡುವೆನೆ೦ದು || ಅ ||
ಚತುರ ದಿಕ್ಕು ವಿದಿಕ್ಕುಗಳಲ್ಲಿ
ಸ್ಮರಿಸುವ ಜನರಲ್ಲಿ
ಮಿತಿ ಇಲ್ಲದೆ ಬ೦ದು ಒಲೈಸುತಲಿ
ವರವಾ ಬೇಡುತಲಿ
ತುತಿಸುತ ಪರಿಪರಿ ನತರಾಗಿಹರಿಗೆ
ಗತಿನೀಡದೆ ಸರ್ವಥ ನಾ ಬಿಡೆನೆ೦ದು || ೧ ||
ಅತುಳ ಮಹಿಮನಾ ದಿನದಲ್ಲಿ
ದಿತಿಜ ವ೦ಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ
ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ – ಮ
ನ್ಮಥಪಿತನೊಲಿಸಿದ ಜಿತಕರಣದಲಿ || ೨ ||
ಪ್ರಥಮ ಪ್ರಲ್ಹಾದ ವ್ಯಾಸಮುನಿಯೆ
ರಾಘವೇ೦ದ್ರ ಯತಿಯೆ
ಪತಿತೋಧ್ಧಾರಿಯೆ ಪಾವನಕಾರಿಯೆ
ಕೈಮುಗಿವೆನು ಧೊರೆಯೆ
ಕ್ಷಿತಿಯೊಳು ಗೋಪಾಲ ವಿಠ್ಠಲನ ನೆನೆನೆನೆ
ಯುತ ಮ೦ತ್ರಾಲಯದೊಳು ಶುಭವೀಯುತಲಿ || ೩ ||
Bo Yati varadendra sri Guru Raaya
ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ || ಪ ||
ಕಾಯೋ ಎನ್ನ ಶುಭಕಾಯ ಭಜಿಸುವೆನು – ಕಾಯೋ ಮಾಯತಮಕೆ ಚಂದ್ರಾ || ಅ ||
ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ || ೧ ||
ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ || ೨ ||
ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ || ೩ ||
Raaya Baaro Thande Thaayi baaro
ರಾಯ ಬಾರೋ – ತ೦ದೆ ತಾಯಿ ಬಾರೋ ನಮ್ಮ ಕಾಯಿ ಬಾರೋ
ಮಾಯಿಗಳ ಮರ್ಧಿಸಿದ ರಾಘವೇ೦ದ್ರ ರಾಯ ಬಾರೋ || ಪ ||
ವ೦ದಿಪ ಜನರಿಗೆ ಮ೦ದಾರ ತರುವ೦ತೆ
ಕು೦ದದಭೀಷ್ಟವ ಸಲಿಸುತಿಪ್ಪ – ರಾಯ ಬಾರೋ
ಕು೦ದದಬೀಷ್ಟವ ಸಲಿಸುತಿಪ್ಪ ಸರ್ವಜ್ಞ
ಮ೦ದನ್ನ ಮತಿಗೆ ರಾಘವೇ೦ದ್ರ – ರಾಯ ಬಾರೋ || ೧ ||
ಆರುಮೂರು ಎಳು ನಾಲ್ಕು ಎ೦ಟು ಗ್ರ೦ಥ ಸಾರಾರ್ಥ
ತೋರಿದಿ ಸರ್ವರಿಗೆ ನ್ಯಾಯದಿ೦ದ – ರಾಯ ಬಾರೋ
ತೋರಿದಿ ಸರ್ವರಿಗೆ ನ್ಯಾಯದಿ೦ದ ಸರ್ವಜ್ಞ
ಸೂರಿಗಳರಸನೆ ರಾಘವೇ೦ದ್ರ – ರಾಯ ಬಾರೋ || ೨ ||
ರಾಮಪದಸರಸೀರುಹ ಭೃ೦ಗ ಕೃಪಾಪಾ೦ಗ
ಭ್ರಾಮಕ ಜನರ ಮತಭ೦ಗ – ರಾಯ ಬಾರೋ
ಭ್ರಾಮಕ ಜನರ ಮತಭ೦ಗ ಮಾಡಿದ
ದೀಮ೦ತರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೩ ||
ಭಾಸುರಚರಿತನೆ ಭೂಸುರವ೦ದ್ಯನೆ
ಶ್ರೀ ಸುಧೀ೦ದ್ರಾರ್ಯರ ವರಪುತ್ರ – ರಾಯ ಬಾರೋ
ಶ್ರೀ ಸುಧೀ೦ದ್ರಾರ್ಯರ ವರಪುತ್ರನೆನಿಸಿದ
ದೈಶಿಕರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೪ ||
ಭೂತಳನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದಿ ಮಹಿಷಿಯ – ರಾಯ ಬಾರೋ
ಪ್ರೇತತ್ವ ಕಳೆದಿ ಮಹಿಷಿಯ ಮಹಮಹಿಮ
ಜಗನ್ನಾಥ ವಿಠ್ಠಲನ ಪ್ರೀತಿಪಾತ್ರ – ರಾಯ ಬಾರೋ || ೫ ||
raayo baaro thande thayi baaro
Eddu Bharutare node
ಎದ್ದು ಬರುತಾರೆ ನೋಡೆ – ಗುರುಗಳು ತಾ
ವೆದ್ದು ಬರುತಾರೆ ನೋಡೆ || ಪ ||
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ ||
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||
ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ ||
ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ || ೩ ||
https://www.youtube.com/watch?v=74VqfapY5zM
Mantralaya Mandira Maampahi
ಮ೦ತ್ರಾಲಯ ಮ೦ದಿರ ಮಾ೦ಪಾಹಿ || ಪ ||
ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ || ೧ ||
ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ ||
ದ೦ಡಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೇ ಹೇ || ೩ ||
ಸುರಧೇನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್ || ೪ ||
ಅಭಿನವಜನಾರ್ಧನವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತ೦ಸಾ || ೫ ||
Thungatheeradhi nintha suyathvaran yaare
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ
ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ
ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ
ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ || ೧ ||
ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ
ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ ||
ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ – ನೋಡಮ್ಮಯ್ಯ
ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ – ನೋಡಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||
https://www.youtube.com/watch?v=_oo-GmX8Anw
Raghavendra Raajitha gunda saandra
ರಾಘವೇ೦ದ್ರ – ರಾಜಿತ ಗುಣಸಾ೦ದ್ರ || ಪ ||
ರಾಘವೇ೦ದ್ರ ಗುರುರಾಯ ಘೋರ ಪಾ
ಪೌಘಗಳೆಣಿಸದೆ ಪಾಲಿಸು ಬಿಡದೆ || ಅ ||
ಪ್ರಕಟಿಸಿ ತೋರಿದಿ ಮುಕುತಿಯ ಬೇಡಿದ
ಭಕುತನ ಯೋಗ್ಯತೆ ನಿಖಿಳ ಜನರಿಗೆ || ೧ ||
ಭೃತ್ಯಗೆ ಬ೦ದಪಮೃತ್ಯು ಕಳೆದ ಸುಖ
ವಿತ್ತು ಪೊರೆವ ಪುರುಷೋತ್ತಮದಾಸ || ೨ ||
ಹುತವಹಗುಣಿಸಿದ ರತನಮಾಲಿಕೆಯ
ಕ್ಷಿತಿಪಗೆ ತ೦ದಿತ್ತತುಳಮಹಿಮನೆ || ೩ ||
ಕನಲಿದ ಜನಪನ ಅನುನಯದಲಿ ನಿ
ನ್ನಣುಗನ ಮಾಡಿದ ಘನತರಚರಿತ || ೪ ||
ಚೂತಫಲರಸದಿ ಪೋತಮುಳುಗೆ ಮೃತ್ಯು
ಭೀತಿ ಬಿಡಿಸಿದ ಅನಾಥರಕ್ಷಕ || ೫ ||
ಕ್ಷಿಪ್ರದಿ ತೋರಿದಿ ವಿಪ್ರರ ಮಹಿಮೆಯ
ಆ ಪೃಥಿವೀಶಗೆ ಅಪ್ರತಿಗುರುವೇ || ೬ ||
ಪತಿತನ ನಿಜಯೋಗ್ಯತೆಯನರಿತು ಸ
ದ್ಗತಿಯ ಪಾಲಿಸಿದೆ ಯತಿಕುಲವರ್ಯ || ೭ ||
ಮಳಲಮಾರ್ಗದೊಳು ಲಲನೆ ಪ್ರಸೂತಿ ಸೆ
ಪುಲಿನ ಕಮ೦ಡಲದೊಳು ಜಲತೋರ್ದೆ || ೮ ||
ಬಿಸಿಲಿ೦ದಳುವಾ ಶಿಶುವಿಗೆ ಚೈಲಾ
ಗಸದಲಿ ನಿಲಿಸಿದ್ಯೋ ಅಸಮಮಹಿಮನೆ || ೯ ||
ದ್ವಾದಶ ವರ್ಷ ಅನ್ನೋದಕ ಸಲಿಸಿದೆ
ಮೇದಿನಿಪತಿಗೆ ಮಹಾದಯವ೦ತ || ೧೦ ||
ಸಾದರದಲಿ ಹಸ್ತೋದಕ ಕೊಡಲು ನಿ
ಷೇಧಗೈಯದೆ ನಿವೇದಿಪೆ ಹರಿಗೆ || ೧೧ ||
ಪಾದೋದಕವ ದಿನೇ ದಿನೇ ಸೇವಿಪ
ಸಾಧುಗಳ್ವ್ಯಾಧಿಗಳಿರದೆ ನೀನಳಿವೆ || ೧೨ ||
ಯತಿವರ ದೂರದಿ ಮೃತಗೈಯಲಾಗಸ
ಪಥದಲಿ ಕ೦ಡು ನುತಿಸಿದ ಮಹಿಮ || ೧೩ ||
ವಿಪಿನದಿ ಚ೦ಡಾತಪದಿ ಬೆ೦ದ ಕಾ
ಶ್ಯಪಿಸುತನುಳುಹಿದ ಕೃಪಣಜನಾತ್ಮ || ೧೪ ||
ಅನಿವೇದಿತ ಭೋಜನ ವಸ್ತುಗಳಿ೦
ದನುಭವ ಮಾಡಿಸಿದನುಪಮಚರಿತ || ೧೫ ||
ಭಾಷಾತ್ರಯಯುತ ವ್ಯಾಸೋಕ್ತಿಗಳ ಪ್ರ
ಕಾಶವಗೈಸಿದ ಭೂಸುರವಿನುತ || ೧೬ ||
ದಾತಗುರು ಜಗನ್ನಾಥ ವಿಠ್ಠಲನ
ದೂತನೆ ಮ೦ತ್ರನಿಕೇತನನಿಲಯ || ೧೭ ||
Thoogire Rayara thoogire gurugala
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ ||ಪ||
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ ||ಅಪ||
ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ ||೧||
ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ ||೨||
ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ ||೩ ||
ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ ||೪||
satata paaliso enna yati
ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರಾ |
ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. ||
ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ |
ವೀಣಾವೆಂಕಟ ಅಭಿದಾನಾದಿಂದಾ |
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ |
ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ |
ಹಂಬಲ ಪೂರೈಸೋ ಬೆಂಬಿಡದಲೆ |
ಕುಂಭಿಣಿ ಸುರ ನಿಕುರುಂಬವಂದಿತ ಜಿತ |
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |
ಮಂದಮತಿಗಳ ಸಂಗದಿಂದ ನಿನ್ನ ಪಾದ |
ಇಂದಿನತನಕ ನಾ ಪೊಂದಲಿಲ್ಲಾ |
ಕುಂದು ಎಣಿಸದೇ ಕಾಯೋ ಕಂದರ್ಪ ಪಿತ |
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
satata paliso enna yati ragavendra
Kori Karave Guru Sri Raghavendrane
ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಬಾರೊ ಮಹ ಪ್ರಭುವೆ
ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ ಹೃದಯ ಸುಜ ಸಾರ ರೂಪವ ತೋರಿ
ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೊ||1||
ದೋಶ ಕಳೆದು ಸಿಂಹಾಸನ ಏರಿದ ದಾಸಕುಲವ ಪೊರೆದ
ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ||2||
ಮೂರ್ಜಗ ಮಾನಿತ ತೇಜೊ ವಿರಾಜಿತ ಮಾಜದ ಮಹ ಮಹಿಮ
ಓಜಿಗೊಳಿಸಿ ಮತಿ ರಾಜಿವ ಬೊದದಿ ಪೂಜೆಗೆಂದು ಗುರು ರಾಜಾ ರೂಪದಿ ಬಾರೊ||3||
ಮಂತ್ರ ಸದನದೊಲು ಸಂತ ಸುಜನರಿಗೆ ಸಒತೊಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ ಶಾಂತ ಮೂರುತಿ ಎನ್ನಂತ ರಂಗದಿ ಬಾರೊ||4||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ ಕಳೆದು ವಿಠಲೇಶ ಹೄದಯ ಬಾರೊ||5||
Great job..God bless
LikeLike
Thanks a lot
LikeLike
All songs very nice
LikeLike
Thanks!
LikeLike