ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ ಪಾವನ್ನ
ಶರಣನೆ೦ದು ನಿನ್ನ ಶರಣುಹೊಕ್ಕೆನಾ ಕರುಣಿ || ಪ ||
ಸದಮಲಕಲಾಗ್ರಣಿ ಸುಧೀ೦ದ್ರಯತಿ ಪಾಣಿ
ಪದುಮದಿ೦ದ ಜನಿಸಿದ ದಿವ್ಯಘನ ಮೌನಿ
ಹೃದಯಾಬ್ಜದಲ್ಲಿ ಹರಿಯ ಪಾದ
ಪದುಮಾದರದಲಿ ಬಲುಪರಿನವ
ವಿಧಭಕುತಿಯಲ್ಲಿ ಪೂಜಿಸುವಾ ಸುಗುಣ
ವೊದಗಿ ನಿನ್ನ ಧ್ಯಾನ ಸ್ನೇಹದ ಬಗೆಬಲ್ಲಿ || ೧ ||
ಜನನಿ ಜನಕರು ತಮ್ಮ ತನುಜಾನು ತಿಳಿಯದೆ
ಅನುಚಿತ ಕಾರ್ಯವಾ ಅನುಸರಿಸಲು ಅವನ
ಕನುಕಾರ ಬಿಟ್ಟು ಅವನ ನಡತೆ
ಮನಸಿನೊಳಿಟ್ಟು ಪೋಷಿಸದಲೆ
ಮುನಿದಿನ್ನು ಸಿಟ್ಟು ಮಾಡುವರೇನೂ
ಅನಘ ತ್ವದ್ದಾಸನ ಘನದಯವಿಟ್ಟೂ || ೨ ||
ಹಲವು ಮಾತೇನು ಶ್ರೀ ನಿಲಯಾನನುಗ್ರಹ
ಬಲದಿ ವ್ಯಾಪಾರವ ಅಭಿನವಜನಾರ್ಧನವಿ
ಠ್ಠಲನ ಭಕ್ತ ಭಕುತಿ ಜ್ಞಾನ ವಿರಕುತಿ ಇತ್ತು
ಸಲಹಬೇಕಯ್ಯ ಕರುಣಿಸಿ ಆರ್ತಜನರನು || ೩ ||
Poreyabekenna raghavendra guruve pavanna
Sarananendu ninna saranuhokkena karuni || pa ||
Sadamalakalagrani sudhindrayati pani
Padumadinda janisida divyagana mauni
Hrudayabjadalli hariya pada
Padumadaradali baluparinava
Vidhabakutiyalli pujisuva suguna
Vodagi ninna dhyana snehada bageballi || 1 ||
Janani janakaru tamma tanujanu tiliyade
Anucita karyava anusarisalu avana
Kanukara bittu avana nadate
Manasinolittu poshisadale
Munidinnu sittu maduvarenu
Anaga tvaddasana ganadayavittu || 2 ||
Halavu matenu sri nilayananugraha
Baladi vyaparava abinavajanardhanavi
Ththalana Bakta Bakuti j~jana virakuti ittu
Salahabekayya karunisi Artajanaranu || 3 ||
One thought on “Poreya bekenna raghavendra”