ಪಾದವನು ಕ೦ಡು ಪಾವನನಾದೆನೊ
ವೇದಾರ್ಥ ತಿಳಿದ ಗುರುರಾಘವೇಂದ್ರರ || ಪ ||
ಮನೋಭಾವವನು ಕೊಡುವ ಘನಭಕುತರಿಗೆ ಇಂದು
ದನುಜದಲ್ಲಣನಂಘ್ರಿ ಮನದಿ ಭಜಿಸಿ
ಕನಸಿನಲಿ ಕನಕರಿಸೆ ವನಜನಾಭನಪದವ
ವಿನಯದಿಂದಲಿ ತೋರಿ ಮನ ಮೋದಪಡಿಸುವರ || ೧ ||
ಸೀತಾರಾಮರ ಪೂಜೆ ಆತುರದಲಿ ಮಾಡಿ
ನೀತ ಮಾರ್ಗದಿ ಜಾತರಹಿತನಾದ
ಆತುರವ ಪರಿಹರಿಸಿ ಶಾತಕುಂಭನಂತೆ
ಆತುಮನ ಮಾಡುವ ಅನಿಮಿತ್ತ ಬಂಧುವಿನ || ೨ ||
ಗುರುಸುಧೀಂದ್ರರ ವರಕುಮಾರರಿವರು
ಪರಲೋಕ ಸುಖ ಕೊಡುವ ಪರಮ ಕರುಣಿ
ಧರೆಯೊಳಗೆ ಸರಿಗಾಣೆ ಜನಾರ್ಧನ ವಿಠ್ಠಲನ್ನ
ಸ್ಥಿರವಾಗಿ ಭಜಿಸುವ ಗುರುಶಿಖಾಮಣಿ ಪಾದದ್ವಯವ || ೩ ||
Padavanu kandu pavananadeno |
Vedartha tilida gururagavendraru metta || pallavi ||
Manobavavanu koduva Gana Bakutarige indu |
Dhanuja dhallannangri manadi Bajisi |
Kanasinali kanikarise vanajanabana padava |
Vinayadimdali tori mana moda badisuvara || 1 ||
Sitaramana puje Aturadalli madi |
Nita margadi jata rahitanada |
Atura pariharisi syata kumbadante |
Atumava maduva animitya bandhuvina || 2 ||
Guru sudhindrara vara kumararada |
Paraloka suka koduva parama karuni |
Dhareyolage sarigane janardhanavithalanna |
Sthiravagi Bajisuva guru sikamaniyadvaya || 3||
One thought on “padavanu kandu”