ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ || ಪ ||
ರಾಕ್ಷಸ ಕುಲದಲಿ ಜನಿಸಿತು ಕೂಸು
ರಾಧಾಕೃಷ್ಣನ ಭಜಿಸಿತು ಕೂಸು
ರಾಗದ್ವೇಷಗಳ ಬಿಟ್ಟಿತು ಕೂಸು
ರಾಮನ ಪಾದವ ನೆನೆಯುವ ಕೂಸು || ೧ ||
ಘನಹರಿ ಕಂಭದಿ ತೋರಿತು ಕೂಸು
ಗಳಿಸಿತು ಕೃಷ್ಣನ ಪ್ರೇಮವ ಕೂಸು
ಘನಮಂತ್ರಾಲಯದಿ ವಾಸಿಪ ಕೂಸು
ವೇಣುಗೋಪಾಲನ ಪ್ರೀತಿಯ ಕೂಸು || ೨ ||
ಪ್ರಸಿಧ್ಧ ವ್ಯಾಸರಾಯರೆಂಬೊ ಕೂಸು
ಪ್ರವೀಣ ವಿದ್ಯೆಯೊಳೆನಿಸಿದ ಕೂಸು
ಪ್ರಹ್ಲಾದನೆಂಬೊ ಆಹ್ಲಾದ ಕೂಸು
ಪ್ರಸನ್ನ ಮಧ್ವೇಶವಿಠ್ಠಲನ ಕೂಸು || ೩ ||
Kusina kandira – suprahladana kandira || pa ||
Rakshasa kuladali janisitu kusu
Radhakrushnana Bajisitu kusu
Ragadveshagala bittitu kusu
Ramana padava neneyuva kusu || 1 ||
Ganahari kambadi toritu kusu
Galisitu krushnana premava kusu
Ganamantralayadi vasipa kusu
Venugopalana pritiya kusu || 2 ||
Prasidhdha vyasarayarembo kusu
Pravina vidyeyolenisida kusu
Prahladanembo ahlada kusu
Prasanna madhvesaviththalana kusu || 3 ||
Audio plz…
LikeLike