ಯಾಕೆ ನಿರ್ದಯನಾದೆ ಎಲೊ ದೇವನೆ
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ||ಪ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||೧||
ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಎರಗಿ ಗಮನವಾಗದೆ
ಭರದಿಂದ ನೀ ಬಂದು ಆತನ ಸಲಹಿದೆ
ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ ||೨||
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||
Yake nirdayanade elo devane
Srikanta enna mele ellashtu dayavilla ||pa||
Kangettu kambadali odedu balali bandu
Hingade prahladana appikonde
Mangalapadavittu manniside ava ninage
Bangaraveshtu kottanu pelo hariye ||1||
Siri devige helade seragu samvarisade
Garudana mele eragi gamanavagade
Baradinda ni bamdu Atana salahide
Kariraja eshtu kanakava kottano hariye ||2||
Ajamilanu annane vibishananu tammane
Nijadi rukmangadanu ninna mommagane
Bajanege avare hitare na ninage anyane
Trijagapati salahenna purandaravithala ||3||
One thought on “yake nirdayanade”