ಕ೦ಡು ಧನ್ಯನಾದೆ ಗುರುಗಳ – ಕಣ್ಣಾರೆ ನಾ
ಕ೦ಡು ಧನ್ಯನಾದೆ ಈ ಗುರುಗಳ || ಪ ||
ತು೦ಗಾತಟದಿ ಬ೦ದು ನಿ೦ತ
ಪ೦ಗು ಬಧಿರಾದ್ಯ೦ಗ ಹೀನರ
ಅ೦ಗಗೈಸಿ ಸಲಹುವಾ – ನರ
ಸಿ೦ಗನ೦ಘ್ರಿ ಭಜಕರಿವರ || ೧ ||
ಗುರುವರ ಸುಗುಣೇ೦ದ್ರರಿ೦ದ
ಪರಿಪರಿಯಲಿ ಸೇವೆಗೊಳುತ
ವರಮ೦ತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರ೦ಥಕರ್ತರ || ೨ ||
ಸೋಹ೦ ಎನ್ನದೆ ಹರಿಯ ದಾ
ಸೋಹ೦ ಎನ್ನಲು ಒಲಿದು ವಿಜಯ
ಮೋಹನ ವಿಠ್ಠಲನ್ನ ಪರಮ
ಸ್ನೇಹದಿ೦ದ ತೋರುವವರ || ೩ ||
Kandu dhanyanade gurugala kannare na
Kandu dhanyanade namma I gurugala ||
Tungatatadi bandu ninta
Pangu badhiradyangahinara
Angagaisi salahuva narasinganangri
Bajakarivara || 1 ||
Guruvara sugunemdrarimda
Paripariyali sevegoluta
Varamantralayapuradi mereva
Parimalakya granthakartara || 2 ||
Soham ennade hariya dasoham ennalu olidu
Vijaya mohanavithalana parama snehadinda toruvavara || 3 ||
One thought on “Kandu dhanyanadhe”