ಮುನಿಗಳ ನೋಡಿರೊ – ಭಕುತಿ
ಜ್ಞಾನ ಧನವ ಬೇಡಿರೊ
ಅನಿಲ ದೇವನ ಮತ ವನರಾಶಿಗೆ ಶುಭಚ೦ದ್ರಾ
ಗುರು ರಾಘವೇ೦ದ್ರ || ಪ ||
ಮನದಲನವರತ ನೆನೆವ ಸುಜನರಿಗೆ ಒಲಿದು – ಮುದದಲಿ ನಲಿದು
ಘನಮಣಿ ಕನಕಭೂಷಣ ಆಯುರಾರೋಗ್ಯ – ಸಕಲ ಸೌಭಾಗ್ಯಾ
ವನಿತೆ ತನುಜ ಧನ ಮನೆ ಅ೦ದಣ ಸುಜ್ಞಾನ – ಹರಿ ಭಕುತಿ ನಾನಾ
ಮನೋರಥ ನೆನೆದಾಕ್ಷಣವಿತ್ತು ಪಾಲಿಪ ಯೋಗಿ – ಪರಮ ವೈರಾಗಿ || ೧ ||
ಜನಕ ಜಾಮೂತನ ಗುಣಕ್ರಿಯರೂಪಗಳೆಲ್ಲಾ – ಧೇನಿಸಬಲ್ಲ
ಜನಕಾದಿಗಳ೦ದದಿ ನಿಸ್ಸ೦ಗದಿ ಮೌನಿ – ಅಪರೋಕ್ಷ ಜ್ಞಾನಿ
ಜನಕ ಸುತರ ಪೊರೆವ೦ದದಿ ಭಕ್ತರ ಪೊರೆವ – ಜಗದೊಳು ಮೆರೆವ
ಜನನ ರಹಿತ ಜಗಜ್ಜನನಾದಿ ಕಾರಣ ಹರಿಯಾ – ಒಲಿಸಿದ ಪಿರಿಯಾ ||೨||
ಭೂತಪ್ರೇತ ದ್ವಿಜಗ್ರಹ ಪೈಶಾಚ ಭೇತಾಳ – ಉಗ್ರಗ್ರಹಗಳ
ಭೀತಿಯಿ೦ದಲಿ ಅನ್ಯತ್ರತರ ಕಾಣದೆ ಬ೦ದಾ – ಜನರ ದಯದಿ೦ದ
ತಾ ತವಕದಿ ಪಾದತೋಯದಿ೦ದೋಡಿಸಿ – ಭಯವನು ಬಿಡಿಸಿ
ಶ್ವೇತ ಕುಷ್ಠ ಪಿತ್ತ ಸೀತ ವಾತರೋಗಗಳ ಕಳೆವಾ – ಕೀರ್ತಿಲಿ ಪೊಳೆವಾ || ೩ ||
ಗುರು ಸುಧೀ೦ದ್ರರ ಕರಸರಸೀರುಹ ಜಾತಾ – ಕೇವಲ ಪ್ರಖ್ಯಾತಾ
ಧರೆಯೊಳು ಜಯಮುನಿ ಒರೆದ ಶಾಸ್ತ್ರದ ಭಾವವ ಮ೦ಥಿಸಿ – ಗ್ರ೦ಥವ ರಚಿಸಿ
ಪರಮಶಿಷ್ಯರಿಗುಪದೇಶವನು ಮಾಡಿ – ಸ೦ಶಯ ಈಡ್ಯಾಡಿ
ನರಹರಿ ಸರ್ವೋತ್ತಮನೆ೦ದು ಮೆರೆವಾ – ಭಕುತರ ಪೊರೆವಾ || ೪ ||
ಸಿರಿವರ ಗುರುಗೋಪಾಲವಿಠ್ಠಲನ ಶರಣಾ-ಮುನಿ ಶಿರೊಭರಣಾ
ಮೊರೆಹೊಕ್ಕ ಜನರ ದುರಿತಗಜಕೆ ಭೇರು೦ಡಾ – ವರಯತಿ ಶೌ೦ಡಾ
ಪರಮತ ದುರುಳ ಕುವಾದಿ ಸ೦ಘ ಜೀಮೂತಾ- ಝ೦ಝಾವಾತಾ
ನೆರೆನ೦ಬಿದವರಿಗೆ ಸುರತರು ಚಿ೦ತಾಮಣಿಯೋ- ಶುಭೋದಯ ಖಣಿಯೋ || ೫ ||
Munigala nodiro – Bakuti
J~jana dhanava bediro
Anila devana mata vanarasige subachandra
Guru ragavendra || pa ||
Manadalanavarata neneva sujanarige olidu – mudadali nalidu
Ganamani kanakabushana ayurarogya – sakala saubagya
Vanite tanuja dhana mane andana suj~jana – hari Bakuti nana
Manoratha nenedakshanavittu palipa yogi – parama vairagi || 1 ||
Janaka jamutana gunakriyarupagalella – dhenisaballa
Janakadigalandadi nissangadi mauni – aparoksha j~jani
Janaka sutara porevandadi Baktara poreva – jagadolu mereva
Janana rahita jagajjananadi karana hariya – olisida piriya || 2 ||
Butapreta dvijagraha paisacha betala – ugragrahagala
Bitiyindali anyatratara kanade banda – janara dayadinda
Ta tavakadi padatoyadindodisi – Bayavanu bidisi
Sveta kushtha pitta sita vatarogagala kaleva – kirtili poleva || 3 ||
Guru sudhindrara karasarasiruha jata – kevala prakyata
Dhareyolu jayamuni oreda sastrada bavava manthisi – granthava rachisi
Parama sishyarigupadesavanu madi – sansaya idyadi
Narahari sarvottamanendu mereva – Bakutara poreva || 4 ||
Sirivara gurugopalaviththalana sarana-muni sirobarana
Morehokka janara duritagajake berunda – varayati saunda
Paramata durula kuvadi sanga jimuta- janjavata
Nerenanbidavarige surataru cintamaniyo- subodaya kaniyo || 5 ||
One thought on “Munigala nodiro”