ತಂಗಿ ನೀ ಕೇಳಿದ್ಯಾ ರಾಘವೇಂದ್ರಾ-
ಘಂಗಳ ಕಳೆದು ಸುಖಂಗಳ ಕೊಡುವುದು
ತಂಗಿ ನೀ ಕೇಳಿದ್ಯಾ || ಪ ||
ಶ್ರೀಪೂರ್ಣಭೋಧರ ಮತಪಯೋಬ್ಧಿಗೆ ಚಂದ್ರ
ತಾಪಸೋತ್ತಮರ ದಿವ್ಯಾಪಾರ ಮಹಿಮೆಯ || ೧ ||
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು
ಸಂಗೀತಮುಖದಿ ಜನಂಗಳು ಪಾಡುವುದು || ೨ ||
ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು
ಸುವಿವೇಕ ಮನದಿಂದ ಕವಿಜನ ಪಾಡುವುದು || ೩ ||
ಮಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ
ಸಂದೇಹವಿಲ್ಲ ಬಹುಮಂದಿಮಕ್ಕಳ ಕೊಟ್ಟ || ೪ ||
ಗುರುಪ್ರಾಣೇಶವಿಠ್ಠಲ ಸರ್ವಕಾಮಿತಾರ್ಥವ
ಗುರುರಾಘವೇಂದ್ರರಲ್ಲಿ ನಿಂತು ನಿರುತದಿ ಕೊಡಿಸುವ || ೫ ||
tangi ni kelidya raghavendra-
gangala kaledu sukamgala koduvudu
tangi ni kelidya || pa ||
sripurnabodhara matapayobdhige chandra
tapasottamara divyapara mahimeya || 1 ||
angahinarige divyanga kottarendu
sangitamukadi janangalu paduvudu || 2 ||
kiviyilladavarige tavakadi kottarendu
suviveka manadinda kavijana paduvudu || 3 ||
madhyastriyaru bandu nindu aradhise
sandehavilla bahumandimakkala kotta || 4 ||
gurupranesaviththala sarvakamitarthava
gururaghavendraralli nintu nirutadi kodisuva || 5 ||
One thought on “Tangi ne kelidya”