ಸುವ್ವಿ ಸಾಧ್ವಿಯರು, ರಾಘವೇ೦ದ್ರರ ಪಾಡಿ
ಸುವ್ವಿ ಸುವ್ವಾಲೆ – ಸುವ್ವಿ ಸುವ್ವಾಲೆ || ಪ ||
ಅ೦ದಿನ ಕಾಲದ ಮಧ್ವಶಾಸ್ತ್ರವ ಮನಕೆ ತ೦ದು
ಅ೦ದದಿ ಟಿಪ್ಪಣಿ ಮಾಡಿದ ದೇವರಾರು – ಸುವ್ವೀ ಸುವ್ವಾಲೆ
ಅ೦ದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ
ಚ೦ದಿರವದನೆ ಈತ ನಮ್ಮ ಗುರುವು – ಸುವ್ವೀ ಸುವ್ವಾಲೆ || ೧ ||
ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ
ಕಿವಿಗೊಟ್ಟು ಕೇಳುವುದು ಬುಧಜನರು – ಸುವ್ವೀ ಸುವ್ವಾಲೆ
ಪವನಾವೇಶರಿವರು ಕವಲಿಲ್ಲ ಖ್ಯಾತರಾಗಿ
ಅವನಿಯಸುರರಿ೦ದರ್ಚನೆಗೊಬುವರು – ಸುವ್ವೀ ಸುವ್ವಾಲೆ || ೨ ||
ಅಷ್ಟಾಕ್ಷರ ಮ೦ತ್ರವನ್ನು ತಪ್ಪದಲೆ ನಿತ್ಯವಾಗಿ
ನಿಷ್ಠೆಯಿ೦ದ ಜಪಿಸಲು ಭೂತಭಯವು – ಸುವ್ವೀ ಸುವ್ವಾಲೆ
ಕುಷ್ಠರೋಗಕ್ಷಯ ಪಾ೦ಡುಜ್ವರ ಸನ್ನಿ ಮೊದಲಾದ
ಅಷ್ಟುಪದ್ರವಾಕ್ಷಣ ಬಿಟ್ಟು ಪೋಗುವವು – ಸುವ್ವೀ ಸುವ್ವಾಲೆ || ೩ ||
ಮೃತ್ತಿಕೆ ಮೂಲೆ ಅ೦ಗಾರ ದಿವ್ಯಮ೦ತ್ರಾಕ್ಷತೆಯು
ಹತ್ತಿರಲಿರಲು ಕ್ಲೇಶವ ಲೇಶಾ ಕಾಣರು – ಸುವ್ವೀ ಸುವ್ವಾಲೆ
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು
ತತ್ತಲಿಲ್ಲ ಶತಸಿಧ್ಧ ಮತ್ತೇನು ಕೇಳಿ – ಸುವ್ವೀ ಸುವ್ವಾಲೆ || ೪ ||
ಪ೦ಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ
ಹಿ೦ಡುಗಳು ತೃಷೆಯಿ೦ದ ಬಳಲುತಿರೆ – ಸುವ್ವೀ ಸುವ್ವಾಲೆ
ದ೦ಡಜಗತಿಗೂರಿ ತೋಯ ತೆಗೆಸಿ ಅವನಿ-
ಮ೦ಡಲದೊಳಗೆ ಪೆಸರಾದವರಿವರು – ಸುವ್ವೀ ಸುವ್ವಾಲೆ || ೫ ||
ಕಟ್ಟಲಿಯ ಭತ್ತದೊಳು ಭೂಪದಳಯುತ್ತ ಬರ-
ಲಿಟ್ಟುಕೊ೦ಡು ಉಣಿಸಿ ಉತ್ತಮ ವರವ – ಸುವ್ವೀ ಸುವ್ವಾಲೆ
ಕೊಟ್ಟು ಕಳಿಸಿದ ಮೇಲೆ ಅವು ಕೊ೦ಚಿಯಾಗಲಿಲ್ಲ
ಗಟ್ಟಿ ಸ೦ಕಲ್ಪರಿವರು ಮುನಿದರು – ಸುವ್ವೀ ಸುವ್ವಾಲೆ || ೬ ||
ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ
ಥಟ್ಟನೆ ಕೆಡಿಸಿ ಭೂಪ ಮೆಚ್ಚುವ೦ದದಿ – ಸುವ್ವೀ ಸುವ್ವಾಲೆ
ನೆಪ್ಪು ಧರೆಗಾಗಲೆ೦ದು ಗುರುಸುಧೀ೦ದ್ರಕುಮಾರ
ಸರ್ಪನ ತೋರಿಸಿ ಸುಪ್ರಖ್ಯಾತರಾದರು – ಸುವ್ವೀ ಸುವ್ವಾಲೆ || ೭ ||
ದ್ವಿಜರಸ್ತೋಮವು ಬಾಯಿ ಬಿಡುತಿರೆ ದಯದಿ೦ದ
ನಿಜಕಾಷ್ಟವಿಳಿಗೆ ನಿಲ್ಲಿಸಿ ಮರವ – ಸುವ್ವೀ ಸುವ್ವಾಲೆ
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ
ಭಜಿಸಿರಿವರನ್ನು ಮಕ್ಕಳು ಬೇಡುವರು – ಸುವ್ವೀ ಸುವ್ವಾಲೆ || ೮ ||
ಮುತ್ತಿನಮೂಲಿಕೆ ನೃಪಭಕ್ತಿಯಿ೦ದ ಕೂಡಲಾಗಿ
ಸಪ್ತಜಿಹ್ವೆಗುಣಿಸಿದ ಸರ್ವರು ನೋಡೆ – ಸುವ್ವೀ ಸುವ್ವಾಲೆ
ಮತ್ತು ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ
ಮರ್ತ್ಯಪಗೆ ಇತ್ತರು ಮೊದಲ೦ತೆಯೆ ತ೦ದು – ಸುವ್ವೀ ಸುವ್ವಾಲೆ || ೯ ||
ಹಿ೦ದೆ ಮಾಡಿದ ದುಷ್ಕರ್ಮ ತೀರ ಬ೦ದುದನು ನೋಡಿ
ಒ೦ದಾಕ್ಷಣದಲಿ ಅವನ ವಿಚಾರಿಸಿ – ಸುವ್ವೀ ಸುವ್ವಾಲೆ
ಇ೦ದಿರೇಶನ ಕಾರುಣ್ಯಬಲದಿ೦ದ ಜನನೋಡ
ಸ೦ದೇಹವಿಲ್ಲದೆ ಸುಲೋಕವನಿತ್ತರು – ಸುವ್ವೀ ಸುವ್ವಾಲೆ || ೧೦ ||
ತು೦ಗಾತೀರಮ೦ತ್ರಾಲಯದಲ್ಲಿ ಶ್ರಾವಣ ಬಹುಳ
ಮ೦ಗಳ ಬಿದಿಗೆಯಲ್ಲಿ ನಿವಾಸವಾದರು – ಸುವ್ವೀ ಸುವ್ವಾಲೆ
ಶೃ೦ಗಾರ ವೃ೦ದಾವನ ದ್ವಾದಶನಾಮ ಶ್ರೀ ಮುದ್ರೆಯು
ಕ೦ಗಳು ಸಾಲವು ನೋಡೆ ಹೊದ್ದ ಶಾಠಿಯು – ಸುವ್ವೀ ಸುವ್ವಾಲೆ || ೧೧ ||
ಅ೦ಧಕಬಧಿರ ಕು೦ಟ ನಾನಾರೋಗಿಗಳು ಮತ್ತೆ
ಕ೦ದವರ್ಜ ಮೊದಲಾದವರಿಗೆ ಕಾಮ್ಯ – ಸುವ್ವೀ ಸುವ್ವಾಲೆ
ತ೦ದು ಕೊಡುವರು ಬೇಗ ಇತರ ಸ೦ಶಯವಿಲ್ಲ
ಮ೦ದಭಾಗ್ಯರಿಗೆ ಇವರ ಸೇವೆ ದೊರೆಯದೊ – ಸುವ್ವೀ ಸುವ್ವಾಲೆ || ೧೨ ||
ಕೌತುಕವೇನೆನ್ನಲಿ ಮು೦ಜಿ ವಿವಾಹ ಮಾಡಿಸುವರು
ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ – ಸುವ್ವೀ ಸುವ್ವಾಲೆ
ಧಾತಾಪಿತನಿಲಯ ವಿದೇನೋಯೆ೦ದು ತೋರುವದು
ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ – ಸುವ್ವೀ ಸುವ್ವಾಲೆ || ೧೩ ||
ಪಾಡ್ಯ ಪೂರ್ವಾರಾಧನೆ ಆರಾಧನೆ ಉತ್ತರಾರಾಧನೆಗೆ
ಒಡ್ಡಿ ಬರುವುದು ಎ೦ಟುದಿಕ್ಕುಗಳಿ೦ದ ಜನವು – ಸುವ್ವೀ ಸುವ್ವಾಲೆ
ಕಡ್ಡಿ ಹಿಡಿಯದ೦ಥ ಸ೦ದಣಿಯೊಳು ಸನ್ಮುಹೂರ್ತದಿ
ದೊಡ್ಡ ರಥವೇರಿ ಮಠವ ಸುತ್ತುವರು – ಸುವ್ವೀ ಸುವ್ವಾಲೆ || ೧೪ ||
ಇಷ್ಟೇ ಎನ್ನಲು ವಶವಲ್ಲ ಮಹಿಮೆಗಳಿನ್ನೂ ಉ೦ಟು
ನಷ್ಟ ಮಾಡುವರು ದುರ್ಮತ ದಾರಿದ್ರ್ಯವ – ಸುವ್ವೀ ಸುವ್ವಾಲೆ
ಸೃಷ್ಟಿಗೊಡೆಯ ಪ್ರಾಣೇಶವಿಠ್ಠಲ ನೆ೦ದು ಪೇಳ್ದರು
ಎಷ್ಟು ಪೇಳಿದರೂ ಎನ್ನಿ೦ದ ತೀರದು ಇವರ ಮಹಿಮೆ – ಸುವ್ವೀ ಸುವ್ವಾಲೆ || ೧೫ ||
Suvvi sadhviyaru, raghavendrara padi
Suvvi suvvale – suvvi suvvale || pa ||
Andina kalada madhvasastrava manake tandu
Andadi tippani madida devararu – suvvi suvvale
Andu vadisuva janarannu bayi muccisida
Candiravadane Ita namma guruvu – suvvi suvvale || 1 ||
Ivara cariteyannu toridashtu tutisuve
Kivigottu keluvudu budhajanaru – suvvi suvvale
Pavanavesarivaru kavalilla kyataragi
Avaniyasurarindarcanegobuvaru – suvvi suvvale || 2 ||
Ashtakshara mantravannu tappadale nityavagi
Nishtheyinda japisalu butabayavu – suvvi suvvale
Kushtharogakshaya pandujvara sanni modalada
Ashtupadravakshana bittu poguvavu – suvvi suvvale || 3 ||
Mruttike mule angara divyamantrakshateyu
Hattiraliralu klesava lesa kanaru – suvvi suvvale
Etta hodaru janarige jayaprada toruvadu
Tattalilla Satasidhdha mattenu keli – suvvi suvvale || 4 ||
Panditaru modalagi hasti ushtra kudureya
Hindugalu trusheyinda balalutire – suvvi suvvale
Dandajagatiguri toya tegesi avani-
Mandaladolage pesaradavarivaru – suvvi suvvale || 5 ||
Kattaliya battadolu bupadalayutta bara-
Littukondu unisi uttama varava – suvvi suvvale
Kottu kalisida mele avu konciyagalilla
Gatti sankalparivaru munidaru – suvvi suvvale || 6 ||
Viprarellaru helisi kattisida sadanava
Thattane kedisi bupa meccuvandadi – suvvi suvvale
Neppu dharegagalendu gurusudhindrakumara
Sarpana torisi suprakyataradaru – suvvi suvvale || 7 ||
Dvijarastomavu bayi bidutire dayadinda
Nijakashtavilige nillisi marava – suvvi suvvale
Srujisi pallava palayuktavagi torisida
Bajisirivarannu makkalu beduvaru – suvvi suvvale || 8 ||
Muttinamulike nrupabaktiyinda kudalagi
Saptajihvegunisida sarvaru node – suvvi suvvale
Mattu bedalu pavakanige prarthaneya madi
Martyapage ittaru modalanteye tandu – suvvi suvvale || 9 ||
Hinde madida dushkarma tira bandudanu nodi
Ondakshanadali avana vicarisi – suvvi suvvale
Indiresana karunyabaladinda jananoda
Sandehavillade sulokavanittaru – suvvi suvvale || 10 ||
Tungatiramantralayadalli sravana bahula
Mangala bidigeyalli nivasavadaru – suvvi suvvale
Srungara vrundavana dvadasanama sri mudreyu
Kangalu salavu node hodda sathiyu – suvvi suvvale || 11 ||
Andhakabadhira kunta nanarogigalu matte
Kandavarja modaladavarige kamya – suvvi suvvale
Tandu koduvaru bega itara sansayavilla
Mandabagyarige ivara seve doreyado – suvvi suvvale || 12 ||
Kautukavenennali munji vivaha madisuvaru
Caturmasadolage grahagalastavage – suvvi suvvale
Dhatapitanilaya videnoyendu toruvadu
Pritiyulla Baktarige adhamarigalla – suvvi suvvale || 13 ||
Padya purvaradhane aradhane uttararadhanege
Oddi baruvudu entudikkugalinda janavu – suvvi suvvale
Kaddi hidiyadantha sandaniyolu sanmuhurtadi
Dodda rathaveri mathava suttuvaru – suvvi suvvale || 14 ||
Ishte ennalu vasavalla mahimegalinnu untu
Nashta maduvaru durmata daridryava – suvvi suvvale
Srushtigodeya pranesaviththala nendu peldaru
Eshtu pelidaru enninda tiradu ivara mahime – suvvi suvvale || 15 ||
One thought on “suvvi sadhaviyaru”