ರಾಯರ ನೋಡಿರೈ – ಶ್ರೀ ಗುರು ರಾಯರ ಪಾಡಿರೈ || ಪ ||
ಶ್ರೀಯರಸನಪ್ರೀಯಾ-ಕಂಜಾಪ್ತಾಭಸು
ಕಾಯಾ – ಕವಿಜನಗೇಯಾ || ಅ ||
ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ
ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ || ೧ ||
ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ
ಪುಂಡರೀಕಪದಭಂಗಾ-ಮುನಿಕುಲೋತ್ತುಂಗ
ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ || ೨ ||
ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ
ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು
ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ || ೩ ||
ಪರಿಮಳ ವಿರಚಿಸಿ ಬುಧರಿಗೆ ಬೀರಿದ ಧೀರ-ಗುಣಗಂಭೀರ
ಪರಿಪರಿ ಚರಿತೆಯ ತೋರ್ದ ಭೂದೇವರ ದೇವ-ದೇವಸ್ವಭಾವ
ನರ ಇವರನು ಕ್ಷಣ ಬಿಡದಲೆ ಭಜಿಸಲು ಸುಖವು-ಅಘಪರಿಹರವು || ೪ ||
ದುಷ್ಟಮತವ ಖಂಡಿಸಿ ಹರಿಪರನೆಂದೊರೆದಾ-ಅಭೀಷ್ಟೆಯ ಗರೆದಾ
ಸೃಷ್ಟಿಯೊಳಗೆ ಶ್ರೀಪ್ರಾಣೇಶವಿಠ್ಠಲನ ದಾಸ-ಮುನಿಕುಲೋತ್ತಂಸ
ಎಷ್ಟುಪೊಗಳಲಶಕ್ಯವು ಸದ್ಗುಣಸಾಂದ್ರ-ಶ್ರೀ ರಾಘವೇಂದ್ರ || ೫ ||
rayara nodirai – sri guru rayara padirai || pa ||
sriyarasanapriya-kanjaptabasu
kaya – kavijanageya || a ||
srisudhindrakara kamalasambuta- bahuvikyata
srisana gunagala tutisuva yatisiromaniyo- chintamaniyo
i sujanara manasige toruvidahlada- siriprahlada || 1 ||
danda kamandala kashayavu suvasana-vedavyasana
pundarikapadabanga-munikulottunga
mandaladolu bahu tondara paripalaka-varabalhika || 2 ||
tungatiradi mantralayadolagiruvo-kalpataruvo
gangajanaka vihangavahana illihanu-natasuradhenu
mangalamahimara darusana matra aganasa-sriguruvyasa || 3 ||
parimala virachisi budharige birida dhira-gunagambira
paripari chariteya torda budevara deva-devasvabava
nara ivaranu kshana bidadale bajisalu sukavu-agapariharavu || 4 ||
dushtamatava kandisi hariparanemdoreda-abishteya gareda
srushtiyolage sripranesaviththalana dasa-munikulottamsa
eshtupogalalasakyavu sadgunasandra-sri raghavendra || 5 ||
One thought on “rayara nodirai”