dasara padagalu · raghavendra

Itane guru raghavendra

ಈತನೇ ಗುರು ರಾಘವೇಂದ್ರಾ – ಖ್ಯಾತ ಕಾಣಿರೋ        || ಪ ||
ವಾತಮತದುಗ್ದಾಬ್ಧಿ ಚಂದ್ರ ಸು-ಖಾತಿಶಯಗಳ ನೀವ ನಿರುತ        || ಅ ||

ಹಿಂದೆ ಹೇಮಕಶ್ಯಪನ ಸುತ
ನೆಂದು ಕರೆಸಲು ಓಂ ನಮಃ ಶಿವ
ಎಂದು ಬರೆಯಲು ಹೇಳಲಾಪಿತನು
ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು
ತೋರೆಲವೊ ಸ್ಥಂಭದಿ ಇಂದು ನಿನ್ನನು
ಕಾವದೇವರನು ಎಂದೆನ್ನಲವನು
ಇಂದಿರೇಶನ ದ್ವಂದ್ವರೂಪವ
ಅಂದುತೋರಿದ ಮಹಿಮನೋ            || ೧ ||

ವ್ಯಾಸಮುನಿಯಾಗವತರಿಸಿ ಜೀ
ವೇಶರೊಂದೆಂಬ ಮಾಯಿಗಳ ಕು
ಭಾಷ್ಯಗಳೆಲ್ಲ ತಾ ಕೆಡಿಸಿ – ಸರ್ವಜ್ಞ ಶಾಸ್ತ್ರವ
ಲೇಸಿನಲಿ ಸಜ್ಜನಕೆ ಬೊಧಿಸಿ – ದುರ್ವಾದಿಗಳ ಸ
ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ
ಹರಿಪ್ರೀತಿಗೊಳಿಸಿ
ಕೇಶವನೆ ಪರನೆಂದು ಸಾರುತ
ದಾಶರಥಿನಿಜದಾಸ್ಯ ಪಡೆದ        || ೨ ||

ವರಹದಂಷ್ಟ್ರಯುಗಳ ಸು
ತೀರದಲಿರುವ ಮಂತ್ರಾಲಯದ ಸ್ಥಳದೀ
ಸುರರು ಮಾಡುವ ಪರಮ ಆರಾಧನೆಯ ಕೈಗೊಳ್ಳುತಾ
ತ್ರಿವಿಧರ್ಗೆತಕ್ಕ ವರಗಳನು ದಿನದಲ್ಲಿ ನೀಡುತ್ತ
ಜಗದೊಳು ಪುನೀತಾ
ಗುರು ಸುಧೀಂದ್ರಸುತೀರ್ಥರ ಸಿರಿ
ಕರಕಮಲ ಸಂಜಾತ – ಪ್ರೀತಾ            || ೩ ||

ಮೆರೆವ ದ್ವಾದಶನಾಮ ಮುದ್ರೆಯು
ಕರದಿ ದಂಡಕಮಂಡಲು ಶ್ರೀ
ತರಳ ತುಳಸಿ ಸರವು ಕೊರಳಲ್ಲಿ – ಶ್ರೀ
ಹರಿಯ ಧ್ಯಾನವು ನಿರುತ ಮಾಡುತ ಮನದಲ್ಲಿ
ಸುಕ್ಷೇತ್ರತೀರ್ಥಕ್ಕೆ ಸರಿಮಿಗಿಲು ಎನಿಸುತ್ತಲಿಹರಿಲ್ಲಿ
ಇವರ ಅಂಘ್ರಿಯಲೀ
ನಿರುತ ಸೇವೆಮಾಳ್ಪ ಜನರಿಗೆ
ಪರಮಸುಖಗಳನೇ ಕೊಡುವರಿಲ್ಲಿ        || ೪ ||

ಚತುರವಿಧ ಫಲಗಳನು ಕೊಡುತ
ಯತಿಶಿರೋಮಣಿ ನಾಮದಲಿ ಶ್ರೀ
ಪತಿಯು ತಾನೇ ಚಕ್ರರೂಪದಲೀ – ಇವರಲಿ ನಿಂತು
ಕೃತಿಯ ನಡೆಸುವ ಸರ್ವಕಾಲದಲೀ – ಈ ಮಹಿಮೆಯನು ನಾ
ತುತಿಸಬಲ್ಲೆನೆ ಅಲ್ಪಮತಿಯಲ್ಲೀ-
ಸದ್ಭಕ್ತಿಯಲೀ
ತುತಿಸುವರ ಪಾಲಿಸುವ ಲಕ್ಷ್ಮೀ
ಪತಿವಿಠ್ಠಲ
ಸತ್ಕರುಣದಲ್ಲಿ            || ೫ ||

itane guru raghavendra – kyata kaniro || pa ||

vatamatadugdabdhi chandra su-katisayagala niva niruta || a ||

hinmde hemakasyapana suta
nendu karesalu om namah siva
endu bareyalu helalapitanu
narayanane paranendu bareyalu roshadali kalanu
torelavo sthambadi imdu ninnanu
kavadevaranu emdennalavanu
indiresana dvamdvarupava
andutorida mahimano || 1 ||

vyasamuniyagavatarisi ji
vesarondemba mayigala ku
bashyagalella ta kedisi – sarvaj~ja sastrava
lesinali sajjanake bodhisi – durvadigala sa
ccastravembasiyalli kandrisi
haripritigolisi
kesavane paranendu saruta
dasarathinijadasya padeda || 2 ||

varahadanshtrayugala su
tiradaliruva manmtralayada sthaladi
suraru maduva parama aradhaneya kaigolluta
trividhargetakka varagalanu dinadalli nidutta
jagadolu punita
guru sudhindrasutirthara siri
karakamala sanjata – prita || 3 ||

mereva dvadasanama mudreyu
karadi dandakamanmdalu sri
tarala tulasi saravu koralalli – sri
hariya dhyanavu niruta maduta manadalli
sukshetratirthakke sarimigilu enisuttaliharilli
ivara angriyali
niruta sevemalpa janarige
paramasukagalane koduvarilli || 4 ||
chaturavidha palagalanu koduta
yatisiromani namadali sri
patiyu tane cakrarupadali – ivarali nintu
krutiya nadesuva sarvakaladali – i mahimeyanu na
tutisaballene alpamatiyalli-
sadbaktiyali
tutisuvara palisuva lakshmi
pativiththala satkarunadalli || 5 ||

One thought on “Itane guru raghavendra

Leave a comment