dasara padagalu · raghavendra

Gururaya gururaya

ಗುರುರಾಯ ಗುರುರಾಯ                || ಪ ||
ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ        || ಅ ||

ನಮಿಸುವೆ ನಿನ್ನಡಿಗಮಿತ ವಿಧದಿ
ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ            || ೧ ||

ಆರ್ತಜನರ ಇಷ್ಟಾರ್ಥಗಳನ್ನೆಲ್ಲ
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ        || ೨ ||

ಪವನರ ವರಮತಪ್ರವರನೆನಿಸಿ
ಶ್ರೀವರನರ್ಚಿಸುತಿಹ ಯತಿಕುಲತಿಲಕ                || ೩ ||

ಸರ್ವತ್ರದಿ ಹರಿ ಇರುವುದ ನೋಡಿ
ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ        || ೪ ||

ನೀನೆ ಗತಿಯೊ ಹೇ ದೀನವತ್ಸಲನೆ
ಜ್ಞಾನವನು ಕೊಡು ನಾನೆಂಬುದ ಕಳೆ                || ೫ ||

ಪತಿತನು ನಾ ನಿಮ್ಮತಿಶಯ ಗುಣಗಳ
ತುತಿಸಬಲ್ಲೆನೆ ಯತಿಕುಲವರ್ಯ            || ೬ ||

ಮಾರುತಿವರದ ರಮಾಪತಿವಿಠ್ಠಲ
ತಾರತಮ್ಯ ತಿಳಿಸ್ಯಾರಾಧನೆ ಕೊಡು                || ೭ ||

Gururaya gururaya || pa ||

Durita kaleyo dayasandra – raghavendra || a ||

Namisuve ninnadigamita vidhadi
Mamasramagala kaleyo he vimalasuteja || 1 ||

Artajanara ishtarthagalannella
Purtigolisi krutarthara maduvi || 2 ||

Pavanara varamatapravaranenisi
Srivaranarcisutiha yatikulatilaka || 3 ||

Sarvatradi hari iruvuda nodi
Purvadevategala garvaharane madgururaya || 4 ||

Nine gatiyo he dinavatsalane
J~janavanu kodu nanembuda kale || 5 ||

Patitanu na nimmatisaya gunagala
Tutisaballene yatikulavarya || 6 ||

Marutivarada ramapativiththalana
Taratamya tilisyaradhane kodu || 7 ||

One thought on “Gururaya gururaya

Leave a comment