ಜಯ ಜಯ ಜಯ ಮಧ್ವ ಜಯ ಜಯ
ಜಯ ಮಧ್ವ ಮುನಿರಾಯ ನಿನ್ನ ಚಾರು
ತೋಯಜಾಂಘ್ರಿಯಲಿ ನಾ ಶರಣು ಅಹ
ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ
ಕಾಯ ವಾಙ್ಮನ ಕರ್ಮ ದೋಷ ಮನ್ನಿಸಿ ಕಾಯೋ || ಪ ||
ಭಾವಿ ವಿರಂಚಿ ಮಹೋಜ ಜಯಾ –
ದೇವಿ ಸಂಕರ್ಷಣ ತನೂಜ ಸೂತ್ರ
ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ –
ದೇವಿ ಹೃದಬ್ಜವಿರಾಜ ಅಹ
ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ
ವನರುಹ ನಿಷ್ಠ ಹನುಮಭೀಮ ಮಧ್ವ || 1 ||
ಜಯತು ಶ್ರೀಹರಿ ರಾಮಚಂದ್ರ ಭಕ್ತ
ಜಯದ ಮೋದದ ಅರ್ತಿಹಂತ ಕೃಷ್ಣ
ಜಯತು ಕಾರುಣ್ಯ ಸಮುದ್ರ ಭಕ್ತ
ಜಯದ ಕ್ಷೇಮದ ಜ್ಞಾನ ಸುಖದ ಅಹ
ರಾಮವಚನ ಕಾರ್ಯರತ ಹನುಮಗೆ ನಮೋ
ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ || 2 ||
ಜಯತು ಶ್ರೀಹರಿ ವೇದವ್ಯಾಸ ಭಕ್ತ
ಜಯದ ಹೃತ್ತಿಮಿರ ನಿರಾಸ ಮಾಳ್ಪ
ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ –
ರಾಯಗೆ ನಿಜಗುರು ಶ್ರೀಶ ಅಹ
ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ
ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ || 3 ||
ಅಸುರರು ಪುಟ್ಟಿ ಭೂಮಿಯಲಿ ಸಾಧು
ಭೂಸುರರೆಂದು ತೋರುತಲಿ ವೇದ
ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ
ವಶವಾಗೆ ಸುಜನರಲ್ಲಿ ಅಹ
ಶ್ರೀಶನಾಜ್ಞೇಯತಾಳಿ ಮಧ್ವಾಭಿದಾನದಿ
ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ || 4 ||
ಮಧ್ಯಗೇಹರ ಮನೆಯಲ್ಲಿ ಮುಖ್ಯ
ವಾಯುವೇ ಶಿಶುರೂಪ ತಾಳಿ ಬಲ
ವಯಸ್ಸಲ್ಲೇ ಯತಿವರ್ಯರಲ್ಲಿ ಕೊಂಡಿ
ಸಂನ್ಯಾಸ ಸುಪ್ರಮೋದದಲಿ ಅಹ
ಮಧ್ಯಗೇಹರ ಪುರುಷೋತ್ತಮತೀರ್ಥರ
ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ || 5 ||
ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ
ಗುರುಗಳ ಸೇವಿಸಿ ಮೋಕ್ಷ ಮೋದ
ಉರುಗುಣಸಿಂಧು ನಿರ್ದೋಷನಾದ
ಶಿರಿವರನು ಕಮಲಾಕ್ಷ ಅಹ
ಭಾರಿ ಪ್ರಸಾದವ ದಯದಿ ಬೀರಲ್ಲೇವೆ
ದೊರೆಯುವದೆಂದು ಬೋಧಿಸಿದೆಯೋ ಮಧ್ವ || 6 ||
ಶ್ರೀಶ ವೇದವ್ಯಾಸನಲ್ಲಿ ಗೀತಾ
ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ –
ದೇಶಕೊಂಡು ಮತ್ತಿಲ್ಲಿ ಬಂದು
ವ್ಯಾಸನಭಿಪ್ರಾಯದಲ್ಲಿ ಅಹ
ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ
ಬೀರಿದ ಅಧಿಕಾರಿಗಳಿಗೆ ನೀ ದಯದಿ
ಮೂಲಗ್ರಂಥಗಳು ಮೂವತ್ತು ಏಳು || 7 ||
ಳಾಳುಕ ಪ್ರಿಯತಮವಾದ್ದು ಭಕ್ತಿ
ಶೀಲತ್ವ ಸುಖಜ್ಞಾನವಿತ್ತು ಪರ –
ದಲ್ಲಿ ಕೈವಲ್ಯ ತೋರುವುದು ಅಹ
ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು
ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ || 8 ||
ಗೀತಾಭಾಷ್ಯವು ಸೂತ್ರ ಭಾಷ್ಯಗೀತಾ
ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು
ತತ್ವನಿರ್ಣಯಾ ಋಗ್ಭಾಷ್ಯ ತತ್ವೋ –
ದ್ಯೋತ ಭಾಗವತ ತಾತ್ಪರ್ಯ ಅಹ
ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ
ನಿರ್ಣಯ ಯಮಕ ಭಾರತ ಕರ್ಮ ನಿರ್ಣಯ || 9 ||
ಸನ್ನ್ಯಾಯ ವಿವರಣ ತಂತ್ರಸಾರ
ಅನುವ್ಯಾಖ್ಯಾನವು ಸದಾಚಾರ ಸ್ಮøತಿ
ಅನುತ್ತಮ ದ್ವಾದಶಸ್ತೋತ್ರ ಯತಿ
ಪ್ರಣವ ಕಲ್ಪದಿ ಪ್ರಣವಸಾರ ಅಹ
ಉಪನಿಷದ್ಭ್ಬಾಷ್ಯವು ಹತ್ತು ಉತ್ಕಷ್ಟವು
ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ || 10 ||
ಮನನ ಮಾಡಲು ಐತರೇಯ ಪುನಃ
ಶ್ರವಣ ಮಾಡಲು ತೈತಿರೀಯ ಸಂ –
ಚಿಂತಿಸಲು ಈಶಾವಾಸ್ಯ ಬಹು
ಘನವಿದ್ಯಾಯುತವು ಛಾಂದೋಗ್ಯ ಅಹ
ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು
ಸತತ ಸಂಸ್ಮರಣೀಯ ಜ್ಞಾನದಾಯಕವು || 11 ||
ಕೃಷ್ಣಾಮೃತ ಮಹಾರ್ಣದಿ ಬಾಲ
ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ
ಜ್ಞಾನ ಸಾಧನವ ಬೋಧಿಸಿ ನರ –
ಸಿಂಹನ ನಖಸ್ತುತಿ ಮುದದಿ ಅಹ
ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ
ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ || 12 ||
ಮಾಯಾ ಅವಿದ್ಯಾ ಆವೃತವು ಬ್ರಹ್ಮ
ಅದ್ಯಸ್ಥ ಜಗತೆಂಬ ಮತವ ತರಿದು
ಮಾಯಾವಾದ ಖಂಡನವ ಮಾಡಿ
ನ್ಯಾಯ ಪ್ರಮಾಣ ಲಕ್ಷಣವ ಅಹ
ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ –
ಡನವ ಉಪಾಧಿಖಂಡನ ಸಹಗೈದಿ || 13 ||
ತಾರತಮ್ಯ ಪಂಚಭೇದ ಸತ್ಯ
ಹರಿಯೇ ಸರ್ವೋತ್ತಮ ಸುಹೃದ ಶಿರಿ
ವರನೇ ಸ್ವತಂತ್ರ ಪ್ರಮೋದ ಸ್ವಾಮಿ
ಸೃಷ್ಟಾ ಪಾತಾ ಅತ್ತಾತ್ರಾಹ ಅಹ
ತತ್ವ ವಿವೇಕವು ತತ್ವ ಸಂಖ್ಯಾನವು
ನಿತ್ಯ ಸುಪಠನೀಯ ಹರಿ ಸರ್ವೋತ್ಕಷ್ಟ || 14 ||
ನೀನಿಂತು ನುಡಿಸಿದೀ ನುಡಿಯು ನಿನ್ನ
ಸನ್ನಿಧಾನದಿ ಸಮರ್ಪಣೆಯು ನಾನು
ಏನೂ ಓದದ ಮಂದಮತಿಯು ನೀನು
ಪೂರ್ಣಪ್ರಜ್ಞನು ಜೀವೋತ್ತಮನು ಅಹ
ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ
‘ಪ್ರಸನ್ನ ಶ್ರೀನಿವಾಸ’ ನ್ನೊ ಲಿಸೋ ಎನಗೆ ಜೀಯ || 15 ||
jaya jaya jaya madhva jaya jaya
jaya madhva munirAya ninna cAru
tOyajAMGriyali nA SaraNu aha
mAyESanige priya muKyaprANanE enna
kAya vA~gmana karma dOSha mannisi kAyO || pa ||
BAvi viraMci mahOja jayA –
dEvi saMkarShaNa tanUja sUtra
saMvid balAdi suBrAja SradhdhA –
dEvi hRudabjavirAja aha
inaSaSi RuShikula tilaka SrIvaranaMGri
vanaruha niShTha hanumaBIma madhva || 1 ||
jayatu SrIhari rAmacaMdra Bakta
jayada mOdada artihaMta kRuShNa
jayatu kAruNya samudra Bakta
jayada kShEmada j~jAna suKada aha
rAmavacana kAryarata hanumage namO
namO kurukula hara BIma kRuShNEShTage || 2 ||
jayatu SrIhari vEdavyAsa Bakta
jayada hRuttimira nirAsa mALpa
sUrya svakAMti prakASa madhva –
rAyage nijaguru SrISa aha
vaidikaSAstradiMdalE vEdya SrISana
hitadi namage tOrpAnaMda munige namO || 3 ||
asuraru puTTi BUmiyali sAdhu
BUsurareMdu tOrutali vEda
SAstrakke apArtha pELi mOha
vaSavAge sujanaralli aha
SrISanAj~jEyatALi madhvABidAnadi
mOsa durmata dhvAMta BAskaranudisidi || 4 ||
madhyagEhara maneyalli muKya
vAyuvE SiSurUpa tALi bala
vayassallE yativaryaralli koMDi
saMnyAsa supramOdadali aha
madhyagEhara puruShOttamatIrthara
BAgyakke eNevuMTE mUrlOkadoLage || 5 ||
puruShOttamAccyutaprEkSha tIrtha
gurugaLa sEvisi mOkSha mOda
uruguNasiMdhu nirdOShanAda
Sirivaranu kamalAkSha aha
BAri prasAdava dayadi bIrallEve
doreyuvadeMdu bOdhisideyO madhva || 6 ||
SrISa vEdavyAsanalli gItA
BAShya samarpisi alyilli upa –
dESakoMDu mattilli baMdu
vyAsanaBiprAyadalli aha
sariyAda tatvabOdhaka graMthagaLa mADi
bIrida adhikArigaLige nI dayadi
mUlagraMthagaLu mUvattu ELu || 7 ||
LALuka priyatamavAddu Bakti
SIlatva suKaj~jAnavittu para –
dalli kaivalya tOruvudu aha
punarapi badarige pOgi SrISana kaMDu
dhanya manadi baMdu SAstra bOdhisidi || 8 ||
gItABAShyavu sUtra BAShyagItA
tAtparya sUtrANuBAShya viShNu
tatvanirNayA RugBAShya tatvO –
dyOta BAgavata tAtparya aha
nirNaya SrImahABArata tAtparya
nirNaya yamaka BArata karma nirNaya || 9 ||
sannyAya vivaraNa taMtrasAra
anuvyAKyAnavu sadAcAra smaøti
anuttama dvAdaSastOtra yati
praNava kalpadi praNavasAra aha
upaniShadBbAShyavu hattu utkaShTavu
ShaTTraSnakAThaka bRuºdAraNyAKya || 10 ||
manana mADalu aitarEya punaH
SravaNa mADalu taitirIya saM –
ciMtisalu ISAvAsya bahu
GanavidyAyutavu CAMdOgya aha
arthavaNamAMDUkya talava kArOktavu
satata saMsmaraNIya j~jAnadAyakavu || 11 ||
kRuShNAmRuta mahArNadi bAla
kRuShNa jayaMti nirNayadi Bakti
j~jAna sAdhanava bOdhisi nara –
siMhana naKastuti mudadi aha
paThise Badrada kathAlakShaNadali vAda
mADuva bage tOrdiyainRuhariya namisi || 12 ||
mAyA avidyA AvRutavu brahma
adyastha jagateMba matava taridu
mAyAvAda KaMDanava mADi
nyAya pramANa lakShaNava aha
nuDidu prapaMca mithyAtvAnumAna KaM –
Danava upAdhiKaMDana sahagaidi || 13 ||
tAratamya paMcaBEda satya
hariyE sarvOttama suhRuda Siri
varanE svataMtra pramOda svAmi
sRuShTA pAtA attAtrAha aha
tatva vivEkavu tatva saMKyAnavu
nitya supaThanIya hari sarvOtkaShTa || 14 ||
nIniMtu nuDisidI nuDiyu ninna
sannidhAnadi samarpaNeyu nAnu
EnU Odada maMdamatiyu nInu
pUrNapraj~janu jIvOttamanu aha
enna korategaLa nIgisi hRusthaSrI
‘prasanna SrInivAsa’ nno lisO enage jIya || 15 ||