MADHWA · Mahalakshmi · modalakalu sesha dasaru · sulaadhi

Shukravara suladhi/Ramaa suladhi

ಧ್ರುವತಾಳ
ಇಂದುಮುಖಿಯೆ ನಿನ್ನ ಸಂದರುಶನದಿಂದಾ
ನಂದವಾಯಿತು ಅರವಿಂದನಯನೆ
ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ
ಸುಂದರವಾದ ರೂಪದಿಂದ ಬಂದು
ಮಂದಹಾಸದಿಂದ ಮಾತನಾಡಿದುದರಿಂದ
ಬೆಂದು ಪೋದೆವೆನ್ನ ತ್ರಿವಿಧ ತಾಪ
ಇಂದಿರೇ ಈ ರೂಪದಿಂದ ತೋರಿದಳು
ಬಂಧುನೆನಿಪ ಲೋಕ ಗುರು ಸತಿಯೊ
ಕಂದುಕಂಧರನಾದ ದೇವನ್ನ ರಾಣಿಯೊ
ಇಂದ್ರಾಣಿ ಮೊದಲಾದ ಜನರೋರ್ವಳೊ
ಮಂದಾಕಿನಿಯೊ ಇದರೊಳೊಂದರಿಯೇ ಕರುಣ
ಸಿಂಧುವೆ ನಿನ್ನ ಪದಕೆ ನಮೊ ನಮೊ
ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು
ವೊಂದಿಪ್ಪ ಕಾರಣದಿಂದ ನಿನ್ನ
ಅಂದವಾದ ರೂಪ ಶ್ರೀಯಗಳನ್ನು ತಿಳಿದು
ವಂದಿಸಿ ವರಗಳು ಬೇಡಲಿಲ್ಲಇಂದಿರೆ ರಮಣನ
ಬಂಧಕ ಶಕುತಿಯುಮಂದನಾದವ ನಾನು ಮೀರುವೆನೇ
ಕಂದನ ಅಪರಾಧವೆಣಿಸದಲೇ ನೀನು
ಅಂದ ವಚನವನ್ನೆ ಸತ್ಯ ಮಾಡಿ
ಬಂಧುನೆನಿಸಿಕೊಂಬ ಗುರು ವಿಜಯ ವಿಠ್ಠಲನ್ನ
ಎಂದೆಂದಗಲದಿಪ್ಪ ವರವ ನೀಡು ||1||

ಮಟ್ಟತಾಳ
ಸಾನುರಾಗದಿ ಎನ್ನ ಸಾಮೀಪ್ಯವನೈದಿ
ಪಾಣಿದ್ವಯದಲ್ಲಿ ವೇಣು ಸ್ಪರಶ ಮಾಡಿ
ಏನು ಬೇಡುವೆ ಬೇಡು ನೀಡುವೆನೆಂತೆಂದು
ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ
ಮಾನುಷನ್ನ ಜನಿತ ಅಜ್ಞಾನ ದಿಂದ
ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ
ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ
ಪೂರ್ಣ ಮಾಡುಯೆಂದು ವರಗಳ ಬೇಡದಲೆ
ಹೀನ ಮನೋಭಾವ ಮಾಡಿದೆ ಹೇ ಜನನಿ
ಧೇನುವಿಗೆ ವತ್ಸ ಮಾಡಿದ ಅಪಚಾರ
ತಾನೆಣಿಸಿ ಅದರ ಸಾಕದೆ ಬಿಡುವದೆ
ಮಾನ ನಿಧಿಯೆ ಎನ್ನ ಅನುಚಿತವೆಣಿಸದಲೆ
ಏನು ಬೇಡಿದ ವರವ ನೀಡುವೆನೆಂತೆಂದ
ವಾಣಿ ಸತ್ಯ ಮಾಡು ಅವ್ಯವಧಾನದಲಿ
ಜ್ಞಾನಪೂರ್ಣ ಗುರು ವಿಜಯ ವಿಠ್ಠಲರೇಯ
ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ||2||

ತ್ರಿವಿಡಿತಾಳ
ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು
ತನ್ನಿಂದ ತಾನೆ ಬಂದು ಒದಗುತಿರೆ
ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ
ಬಿನ್ನಪವನು ಉಂಟು ಗ್ರಹಿಸಬೇಕು
ಅನಂತ ಜನುಮದ ಪುಣ್ಯ ಪ್ರಭಾವದಿಂದ
ಘನ್ನ ಮಹಿಮನಾದ ಪುರುಷನೋರ್ವ
ಕ್ಷಣವಗಲದಿಪ್ಪ ಆಪ್ತನಾದವನೆನಿಸಿ
ಎನ್ನ ವಿರಹಿತವಾದ ಸ್ಥಾನವನ್ನು
ಕಣ್ಣಿಲಿ ನೋಡಲಾರೆನೆಂದು ನುಡಿದವನ್ನ
ಎನ್ನ ದುರ್ಭಾಗ್ಯದಿಂದ ಅಗಲಿ ನಾನಾ
ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ
ಮನ್ನಿಸಿ ಮನಕ ತಂದು ಪೂರ್ವದಂತೆ
ಮನ್ಮನದಲಿ ತೋರೊ ವ್ಯವಧಾನ ಮಾಡದಲೆ
ಇನ್ನಿದೆ ಬೇಡುವೆನೇ ಜನ್ನನೀಯೇ
ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ
ಮನ್ಮನೋರಥವನು ಪೂರ್ಣ ಮಾಡು ಆ
ಪನ್ನರ ರಕ್ಷಿಸುವ ಬಿರಿದು ನಿನಗೆ ಉಂಟು
ಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇ
ಪನ್ನಂಗತಲ್ಪ ಗುರು ವಿಜಯ ವಿಠ್ಠರೇಯ
ನಿನ್ನ ವಾಕ್ಯವೊಹಿಪ ಸರ್ವಕಾಲ ||3||

ಅಟ್ಟತಾಳ
ಕರಣಗಳಲಿ ಹರುಇ ವ್ಯಾಪಕನೆಂತೆಂಬ
ಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯ
ಪರಮೇಷ್ಠಿ ಮೊದಲಾದ ಸುರರು ಸಹಿತನಾದ
ಸಿರಿಪತಿ ವೊಹಿಸುವನೆಂದು ಪೇಳುತಲಿರೆ
ಕರಣಮಣನಿಗಳಾದ ಸುರರಿತ್ತ ವರಗಳ
ಹರಿ ಸತ್ಯ ಮಾಡುವನೆಂಬದಚ್ಚರವೇನೊ
ಶರಣನ್ನ ಮನೋರಥ ಪೂರ್ಣ ಮಾಡುವುದಕ್ಕೆ
ಕೊರತೆ ನಿನಗಾವುದು ಕೋಮಲಾಂಗಿಯೆ ನಿನ್ನ
ಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆ
ತ್ವರಿತದಿಂದಲಿ ಈ ವರವನ್ನೆ ಪಾಲಿಸು
ಸುರಪಕ್ಷಪಾಲ ಗುರು ವಿಜಯ ವಿಠ್ಠಲ ನಿಮ್ಮ
ಕರವಶನಾಗಿಪ್ಪ ಆವಾವ ಕಾಲದಲಿ ||4||

ಆದಿತಾಳ
ಆವಾವ ಜನ್ಮದಲ್ಲಿ ಅರ್ಚಿಸಿದೆ ನಿನ್ನ
ಆವಾವ ಕಾಲದಲ್ಲಿ ಅನುಗ್ರಹಿಸಿದ ವರವು
ಈ ವಿದ್ಯಮಾನವಾದ ಜನುಮದಲೊಮ್ಮೆ ಘನ್ನ
ದೇವಿಯೋ ನಿನಪಾದ ಸಾರಿದವನಲ್ಲ
ಗೋವತ್ಸ ನ್ಯಾಯದಿಂದ ನಿನಗ ನೀನೆ ಬಂದು
ಆವದು ಬೇಡಿದ ವರಗಳನೀವೆನೆಂದು
ಸುವಾಣಿಯಿಂದ ಎನ್ನ ಆದರಿಸಿದಿ ನಿನ್ನ
ಔದಾರ್ಯತನಕಿನ್ನು ಆವದಾವದು ಸಮ
ಶ್ರೀ ವತ್ಸಲಾಂಛನ ಗುರು ವಿಜಯ ವಿಠ್ಠಲ
ನಿನ್ನಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ||5||

ಜತೆ
ನಿನ್ನ ದರುಶನದಿಂದ ಅನಿಷ್ಟವನು ನಾಶ
ಘನ್ನ ಇಷ್ಟ ರೂಪ ಗುರು ವಿಜಯ ವಿಠ್ಠಲ ಪ್ರಾಪ್ತ ||

dhruvatALa
indumuKiye ninna sandaruSanadindA
nandavAyitu aravindanayane
andige gejje modalAdABaraNadinda
sundaravAda rUpadinda bandu
mandahAsadinda mAtanADidudarinda
bendu pOdevenna trividha tApa
indirE I rUpadiMda tOridaLu
bandhunenipa lOka guru satiyo
kandukandharanAda dEvanna rANiyo
indrANi modalAda janarOrvaLo
mandAkiniyo idaroLondariyE karuNa
sindhuve ninna padake namo namo
mandarge yOgyavAda manuShya dEhavannu
vondippa kAraNadinda ninna
andavAda rUpa SrIyagaLannu tiLidu
vandisi varagaLu bEDalilla^^indire ramaNana
bandhaka SakutiyumandanAdava nAnu mIruvenE
kandana aparAdhaveNisadalE nInu
anda vacanavanne satya mADi
bandhunenisikoMba guru vijaya viThThalanna
endendagaladippa varava nIDu ||1||

maTTatALa
sAnurAgadi enna sAmIpyavanaidi
pANidvayadalli vENu sparaSa mADi
Enu bEDuve bEDu nIDuvenentendu
vANiyindali nuDidu anugrahisidudake
mAnuShanna janita aj~jAna dinda
j~jAnanidhiye ninna padadvandvake namisi
mAnasinApEkShe vivarisi binnaisi
pUrNa mADuyendu varagaLa bEDadale
hIna manOBAva mADide hE janani
dhEnuvige vatsa mADida apacAra
tAneNisi adara sAkade biDuvade
mAna nidhiye enna anucitaveNisadale
Enu bEDida varava nIDuvenentenda
vANi satya mADu avyavadhAnadali
j~jAnapUrNa guru vijaya viThThalarEya
prEraNeyindalli prArthisuvenu ninna ||2||

triviDitALa
ninnanugrahadinda dhana modalAda vastu
tanninda tAne bandu odagutire
innidakke nAnu ninna prArthipodilla
binnapavanu unTu grahisabEku
ananta janumada puNya praBAvadinda
Ganna mahimanAda puruShanOrva
kShaNavagaladippa AptanAdavanenisi
enna virahitavAda sthAnavannu
kaNNili nODalArenendu nuDidavanna
enna durBAgyadinda agali nAnA
banna baDutalippe nimiSha ondyugavAgi
mannisi manaka tandu pUrvadante
manmanadali tOro vyavadhAna mADadale
innide bEDuvenE jannanIyE
ninninda nuDidantha vAkya saPala mADi
manmanOrathavanu pUrNa mADu A
pannara rakShisuva biridu ninage unTu
sannutisi bEDikoMbe guNanidhiyE
pannangatalpa guru vijaya viThTharEya
ninna vAkyavohipa sarvakAla ||3||

aTTatALa
karaNagaLali haru^^i vyApakanenteMba
pariyannu tiLidippa nara nuDida vAkya
paramEShThi modalAda suraru sahitanAda
siripati vohisuvanendu pELutalire
karaNamaNanigaLAda suraritta varagaLa
hari satya mADuvaneMbadaccaravEno
SaraNanna manOratha pUrNa mADuvudakke
korate ninagAvudu kOmalAngiye ninna
caraNa dvaMdvake namisi SaragoDDi bEDuve
tvaritadindali I varavanne pAlisu
surapakShapAla guru vijaya viThThala nimma
karavaSanAgippa AvAva kAladali ||4||

AditALa
AvAva janmadalli arciside ninna
AvAva kAladalli anugrahisida varavu
I vidyamAnavAda janumadalomme Ganna
dEviyO ninapAda sAridavanalla
gOvatsa nyAyadinda ninaga nIne bandu
Avadu bEDida varagaLanIvenendu
suvANiyinda enna Adarisidi ninna
audAryatanakinnu AvadAvadu sama
SrI vatsalAnCana guru vijaya viThThala
ninnaBAvadindali nOLpa BAgyavE pAlisE ||5||

jate
ninna daruSanadinda aniShTavanu nASa
Ganna iShTa rUpa guru vijaya viThThala prApta ||

 

3 thoughts on “Shukravara suladhi/Ramaa suladhi

  1. Dear sir/madam
    Thank u for sending Slokas
    It will be helpful if I can get it in Telugu or Hindi or Sanskrit for better understanding.
    Thanks
    Jaivijayaraya

    Like

Leave a comment