MADHWA · purandara dasaru · ugabhoga

ugabhoga by Purandara dasaru(Part 2)

(ಆಚಮನ)
ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ
ಮಲಮೂತ್ರ ವಿಸರ್ಜನಕೆ ಮಾಡು ಮೂರಾಚಮನೆ
ನಲಿದುಂಡ ಮೇಲೆ ನಾಲ್ಕಾಚಮನೆ
ಲಲನೆಯ ಸಂಗಕ್ಕೆ ಮಾಡು ಅಯಿದಾಚಮನೆ-
ಯೆಂದ ಲಕ್ಷ್ಮೀಪತಿ ಪುರಂದರವಿಠಲೇಶ್ವರ ||

(Acamana)
Halavu karmagalige havani eradacamane
Malamutra visarjanake madu muracamane
Nalidunda mele nalkacamane
Lalaneya sangakke madu ayidacamane-
Yenda lakshmipati purandaravithalesvara ||


(ಸಂಧ್ಯಾವಂದನೆ)
ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ
ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ
ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ
ನಕ್ಷತ್ರ ಬಿಟ್ಟರೆ (ನರನನು) ನಾರಾಯಣ ಪುರಂದರವಿಠಲ ಬಿಡುವ ||

(sandhyavandane)
Nakshatragala kanda naranige uttamasandhya
Nakshatra onderadu kanda naranige madhyamasandhya
Nakshatra ondanu kanada naranige adhamasandhya
Nakshatra bittare (narananu) narayana purandara vittalabiduva ||


(ಪ್ರಾತಃಸ್ಮರಣ)
ಹರೇ ಗೋವಿಂದ ಎಂದೇಳು
ಹತ್ತವತಾರವ ಪೇಳು
ಮೂಡಲದೆಸೆಗೆ ನಡೆ
ಗೋವಿಪ್ರತುಳಸಿಗೆ ಎರಗಿ ಬಂದು
ನೈರುತ್ಯದಲ್ಲಿ ತೃಣವನಿಟ್ಟು ಶೌಚ ಮಾಡು(/ಮಲಮೂತ್ರಂಗಳ ಬಿಟ್ಟು)
ಗುರು ಪರಂಪರೆಯೆಂದು ಪುರಂದರವಿಠಲ ಎನ್ನು||

(pratahsmarana)
Hare govinda endelu
Hattavatarava pelu
Mudaladesege nade
Govipratulasige eragi bandu
Nairutyadalli trunavanittu Sauca madu
Guru parampareyendu purandara vittalaennu||


(ಪ್ರಾತಃಸ್ಮರಣ)
ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು
ಚಿತ್ತಜನಯ್ಯನ ಚಿತ್ತದಿ ಧ್ಯಾನಿಸಿ
ಅತ್ತ ಉದಯಕ್ಕೆ ಘಳಿಗೆ ಎರಡಿರುವಲ್ಲಿ
ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಘ್ಯವನೀಯೆ
ಉತ್ತಮಜನರು ಪೊತ್ತಿದ್ದ ಪಾಪಗಳನೆಲ್ಲ
ಉತ್ತರಿಸುವೆನೆಂದಾ ಪುರಂದರವಿಠಲ||

(pratahsmarana)
Hattaidu galigeya mele mattaidu baraleddu
Cittajanayyana cittadi dhyanisi
Atta udayakke galige eradiruvalli
Nitya snanava madi adityagargyavaniye
Uttamajanaru pottidda papagalanella
Uttarisuvenenda purandaravithala||


(ಮೃತ್ತಿಕಾ ಸ್ನಾನ)
ನುಡಿವೆ ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿಕಾಯಿಯಷ್ಟು ಮಣ್ಣ ಹಚ್ಚಿ
ನೀರೊಳು ತೊಳೆದು ಬಲಗೈಗೆ ಅಯ್ದು ಮಣ್ಣು
ಎಡದ ಕೈಗೆ ಏಳು ಮಣ್ಣು
ಜೋಡು ಪಾದಕ್ಕೆ ಅಯಿದೈದು ಮಣ್ಣು

(mruttika snana)
Nudive linga Saucakkomme gudakke muru nellikayiyashtu manna hacci
Nirolu toledu balagaige aydu mannu
Edada kaige elu mannu
Jodu padakke ayidaidu mannu
Ayidu kadeyolittu purandara vittalaennu ||


(ಆಚಮನ)
ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು
ಉದ್ದು ಮುಣುಗುವಂತೆ ಇರಬೇಕು ನೀರು
ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ ಅದನು
ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ||

(Acamana)
Akala kivigene angai hallavagirabeku
Uddu munuguvante irabeku niru
Sakagade heccu kadime sakembashtu kudidare adanu
Sakara purandara vittalamadyasama maduva||


(ಸ್ನಾನ)
ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ ಮೈದೊಳೆದು ಮಡಿವುಟ್ಟು ನಾಮಗಳಿಟ್ಟು
ಚಂದದಲಿ ಸಂಧ್ಯಾವಂದನೆ ಮಾಡೆ ಫಲವಾಹುದು
ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ
ಇಂದ್ರ ಹದಿನಾಲ್ಕು ಮನುನರಕವೆಂದು ಅಂದು ಪುರಂದರ ವಿಠಲ ಪೇಳಿದನೆಂದು ಸಿದ್ಧ ||

(snana)
Andavillada asaktanige omde ariveyinda maidoledu madivuttu namagalittu
Candadali sandhyavandane made palavahudu
Ninde hingalendu madida manujange
Indra hadinalku manunarakavendu andu purandara vithala pelidanndu siddha ||


(ಗುರು)
ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು
ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ
ಒಂದಿಷ್ಟು ಅಪಮಾನ ಮಾಡಿದರೆ ತಪ್ಪದೆ
ಒಂದು ನೂರು ಶ್ವಾನಜನ್ಮ ಕೋಟಿ ಹೊಲೆಜನ್ಮ
ತಂದೀವನು ಪುರಂದರವಿಠಲ

(guru)
Ondaksharava pelidavaru urviyolage avare guru
Endu ileyolu bahumana madabeku kundade
Ondishtu apamana madidare tappade
Ondu nuru svanajanma koti holejanma
Tamdivanu purandaravithala


(ಅಭಿಷೇಕ ಮಹಿಮೆ)

ಅಪರಾಧ ಹತ್ತಕ್ಕೆ ಅಭಿಷೇಕ ಉದಕ
ಅಪರಾಧ ನೂರಕೆ ಕ್ಷೀರ ಹರಿಗೆ
ಅಪರಾಧ ಸಹಸ್ರಕೆ ಹಾಲು ಮೊಸರು ಕಾಣೊ ||
ಅಪರಾಧ ಲಕ್ಷಕೆ ಜೇನು ಘೃತ
ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ
ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು
ಅಪರಾಧ ಕೋಟಿಗೆ ಸ್ವಚ್ಛ ಜಲ
ಅಪರಾಧ ಅನಂತ ಕ್ಷಮೆಗೆ ಗಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ಶಾಂತಮನವಯ್ಯ ಶಾಂತವಾಕ್ಯ (/ತಾಪಸೋತ್ತಮನ ಒಲುಮೆ ವಾಕ್ಯ)

(abisheka mahime)
Aparadha hattakke abisheka udaka
Aparadha nurake kshira harige
Aparadha sahasrake halu mosaru kano ||
Aparadha lakshake jenu gruta
Aparadha hattu lakshake balupari kshira
Aparadha kshamege acca tengina halu
Aparadha kotige svacca jala
Aparadha anamta kshamege gandhodaka
Upamerahita namma purandaravithalage
Santamanavayya samtavakya


(ಜಪ)
ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು
ಬದ್ಧ ಅಂಗುಟಾಗ್ರ ಎಣಿಸಬೇಕು
ಕಿರಿ ಅಂಗುಲಿ ಪಂಚ ಭೋಗಿಸಿ (ಬಗ್ಗಿಸಿ?) ಇರಬೇಕು
ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿಯ
ಬುದ್ಧಿಪೂರ್ವಕದಿಂದ ಗೆಯ್ವುತಲಿರಬೇಕು
ಮುದ್ದುಮೂರುತಿ ನಮ್ಮ ಪುರಂದರವಿಠಲನ್ನ
ಎದ್ದೆದ್ದು ನೋಡುವ ಬಗೆ ಕಾಣಲು ಬೇಕು

(japa)
Madhyanguliya mele manisaravittinnu
Baddha angutagra enisabeku
Kiri anguli panca bogisi irabeku
Badravagi nillisi niru sorade gayatriya
Buddhipurvakadinda geyvutalirabeku
Muddumuruti namma purandaravithalanna
Eddeddu noduva bage kanalu beku


(ಜಪ)
ಅನಾಮಿಕಾಖ್ಯ ಮಧ್ಯದ ಎರಡನೆಯ ಗೆರೆಯಾದಿ
ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ
ಎಣಿಸು ತರ್ಜನಿಮೂಲ ಪರ್ಯಂತರ
ಘನ ಹತ್ತು ಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪವ

(japa)
Anamikakya madhyada eradaneya gereyadi
Initu madhyanguli konegere kudisi
Manumurti parimana angushthadindali
Enisu tarjanimula paryantara
Gana hattu gere japa purandaravithalage
Manadi arpisuta gayatri japava


(ಜಪ)
ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು
ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ
ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಆಹುದಯ್ಯ
ಒಡೆಯ ಪುರಂದರವಿಠಲನೊಲಿಸಬೇಕಾದರೆ
ಹಿಡಿಯೊ ಈ ಪರಿ ಹೇಳಿದ ವಚನತತ್ವಗಳ

(japa)
Bidu manuja I japavu siddhige baradu
Todeya kelage kai himde mumde kai cacibiduta mantrartha nodadale
Adigadige japava made daityarige Ahudayya
Odeya purandaravithalanolisabekadare
Hidiyo I pari helida vacanatatvagala


(ಅರ್ಘ್ಯ)
ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ
ಸುಮನಸರೊಳು ಸೂರ್ಯಗರ್ಘ್ಯವನಿತ್ತು
ನಿಮ್ಮ ಪಾಪಗಳನೆಲ್ಲ ಚಿಮ್ಮಿ ಕಳೆಯಿರೆಂದು
ಬೊಮ್ಮಮೂರುತಿ ತಾನು ಘಮ್ಮನೆ ಪೇಳಿರೆ
ನಿಮ್ಮಜ್ಞಾನಕೆ ಸಿಲುಕಿ ಸುಮ್ಮನೆ ಕೆಡದಿರಿ
ನಿಮ್ಮ ಶಿಕ್ಷಿಪನು ಪುರಂದರವಿಠಲ

(argya)
Rameya ramananu tanu bommadigalanella
Sumanasarolu suryagargyavanittu
Nimma papagalanella cimmi kaleyirendu
Bommamuruti tanu Gammane pelire
Nimmaj~janake siluki summane kedadiri
Nimma sikshipanu purandaravithala


(ಮನ ಶುದ್ಧಿ)
ಹೃದಯದ ಮಲವನ್ನು ತೊಳೆಯಲರಿಯದೆ ತಾವು
ಉದಯದಲೆದ್ದು ಮಿಂದು ಗದಗದಗುಟ್ಟುವಂತೆ ಅದರಿಂದೇನು ಫಲ
ಅದಕಿಂತ ಉದಯಾಸ್ತಮಾನ ನೀರೊಳಗಿಪ್ಪ
ಮುದಿಕಪ್ಪೆ ಮಾಡಿದ ತಪ್ಪೇನಯ್ಯ
ಪುರಂದರವಿಠಲನ ನಾಮವ ನೆನೆಯದೆ
ದಿನಕ್ಕೆ ನೂರು ಬಾರಿ ಮುಳುಗಿದರೇನಯ್ಯ

(mana Suddhi)
Hrudayada malavannu toleyalariyade tavu
Udayadaleddu mindu gadagadaguttuvamte adarindenu Pala
Adakinta udayastamana nirolagippa
Mudikappe madida tappenayya
Purandaravithalana namava neneyade
Dinakke nuru bari mulugidarenayya


(ಗೋಪೀಚಂದನ ಮಹಿಮೆ)
ಕೂಪದಲ್ಲಾದರು ಕೊಳದಿ ಮುಣುಗಿದಲ್ಲಾದರು
ಪಾಪಿಯಲ್ಲಾದರು ಅಶುಚಿಯಲ್ಲಾದರು
ಪತ್ನಿ ನೆರೆದಾದರು ಗೋಪೀಚಂದನದ ಸಂಪರ್ಕವಿದ್ದರೆ
ಮುಖ್ಯವಿದು ಕಾಲ ಸಂಧ್ಯಾ ಎಂದು
ಲಕ್ಷ್ಮೀಪತಿ ಪುರಂದರವಿಠಲ ಪೇಳ್ದ
(gopicandana mahime)
Kupadalladaru koladi munugidalladaru
Papiyalladaru asuciyalladaru
Patni neredadaru gopicandanada samparkaviddare
Mukyavidu kala samdhya emdu
Lakshmipati purandara vittalapelda


(ಹಲ್ಲು ಶುದ್ಧಿ)

ಹಲ್ಲು ಬೆಳಗುವಲ್ಲಿ ಬಿಂಬ
ಪ್ಲಕ್ಷಪತ್ರೆ ನೆಲ್ಲು ನಿಲ್ಲು
ಮಹಾಲಯ ಪುಣ್ಯ ದಿವಸದಿ
ಬಲ್ಲಿದೇಕಾದಶಿ ಪಾರ್ವಣ ಅಮಾವಾಸ್ಯೆಯೆ
ಇಟ್ಟ ಶಶಿ ರವಿ ಗ್ರಹಣದಲ್ಲಿ ಅಲ್ಲದೆಯ್ಯ ( ಸಲ್ಲದಯ್ಯ? )
ದಂತಕಾಷ್ಠ ಮಲಿನಗಳಿಗೆ ಝಲ್ಲಿಸಿ
ನೀರ ಮುಕ್ಕುಳಿಸಿ ಹನ್ನೆರಡು
ಬಲ್ಲ ಬುಧರಿಗೆ ಪುರಂದರವಿಠಲ
ಇಲ್ಲಿ ಒಲಿವ ಇದನಾಚರಿಸೆ

(hallu Suddhi)
Hallu belaguvalli bimba
Plakshapatre nellu nillu
Mahalaya punya divasadi
Ballidekadasi parvana amavasyeye
Itta sasi ravi grahanadalli alladeyya
Dantakashtha malinagalige Jallisi
Nira mukkulisi hanneradu
Balla budharige purandaravithala
Illi oliva idanacarise


ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ
ಗೆಜ್ಜೆಯ ಕಟ್ಟಿದವ ಖಳರೆದೆ ಮೆಟ್ಟಿದವ
ಗಾಯನ ಪಾಡಿದವ ಹರಿಮೂರ್ತಿ ನೋಡಿದ್ದವ
ಪುರಂದರವಿಠಲನ ನೋಡಿದವ ವೈಕುಂಠಕ್ಕೆ ಓಡಿದವ

Tamburi mitidava bavabdhi datidava
Talava tattidava surarolu seridava
Gejjeya kattidava kalarede mettidava
Gayana padidava harimurti nodiddava
Purandaravithalana nodidava vaikunthakke odidava


ಹರಿಯೆಂಬೋದೆ ಲಗ್ನಬಲವು, ಹರಿಯೆಂಬೋದೆ ಸುದಿನಬಲವು
ಹರಿಯೆಂಬೋದೆ ತಾರಾಬಲವು, ಹರಿಯೆಂಬೋದೆ ಚಂದ್ರಬಲವು
ಹರಿಯೆಂಬೋದೆ ವಿದ್ಯಾಬಲವು, ಹರಿಯೆಂಬೋದೆ ದ್ರವ್ಯಬಲವು
ಹರಿಲಕ್ಷ್ಮೀಪತಿ ಪುರಂದರವಿಠಲನೆ ಬಲವಯ್ಯ ಸರ್ವ ಸುಜನರಿಗೆ

Hariyembode lagnabalavu, hariyembode sudinabalavu
Hariyembode tarabalavu, hariyembode candrabalavu
Hariyembode vidyabalavu, hariyembode dravyabalavu
Harilakshmipati purandaravithalane balavayya sarva sujanarige


ಅಣುವಿಗೆ ಅಣುವಾಗಿ ಘನಕೆ ಘನವಾಗಿ
ಗುಣತ್ರಯ ತತ್ವಕೆ ಮೀರಿದ ದೊರೆಯಾಗಿ
ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ
ಗುಣನಿಧಿ ಪುರಂದರವಿಠಲ ನಿನ್ನ ಮಹಿಮೆ
ಎಣಿಕೆ ಮಾಡುವರ್ಯಾರೋ ಎನ್ನಪ್ಪನೆ

Anuvige anuvagi Ganake ganavagi
Gunatraya tatvake mirida doreyagi
Truna modalagi meru pariyanta iruvava ninagi
Gunanidhi purandara vittalaninna mahime
Enike maduvaryaro ennappane


ನಿನ್ನುಂಗುಟವು ಬೊಮ್ಮಾಂಡವನೊಡೆಯಿತು
ನಿನ್ನ ನಡೆ ಜಗವ ಈರಡಿ ಮಾಡಿತು
ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು
ನಿನ್ನ ವಕ್ಷಸ್ಥಳ ಸಿರಿಲಕುಮಿಗೆಡೆಯಾಯಿತು
ನಿನ್ನ ನಳಿದೋಳು ಸಿರಿಲಕುಮಿಯ ಬಿಗಿದಪ್ಪಿತು
ನಿನ್ನ ಕುಡಿನೋಟ ಸಕಲ ಜೀವರ ಪೊರೆಯಿತು
ನಿನ್ನ ತೊದಲುನುಡಿ ಸಕಲ ವೇದವ ಸವಿಯಿತು
ನಿನ್ನ ಅವಯವಂಗಳ ಮಹಿಮೆಯನು ಒಂದೊಂದು
ಪೊಗಳಲಳವಲ್ಲ ಸಿರಿಪುರಂದರ ವಿಠಲರೇಯ
ನಿನ್ನ ಅಪಾರಮಹಿಮೆಗೆ ನಮೋ ನಮೋ ಎಂಬೆ ||

Ninnungutavu bommandavanodeyitu
Ninna nade jagava iradi maditu
Ninna pokkalu sarasijanabana padeyitu
Ninna vakshasthala sirilakumigedeyayitu
Ninna nalidolu sirilakumiya bigidappitu
Ninna kudinota sakala jivara poreyitu
Ninna todalunudi sakala vedava saviyitu
Ninna avayavamgala mahimeyanu ondondu
Pogalalalavalla siripurandara vithalareya
Ninna aparamahimege namo namo embe ||


ಹಾ ಕೃಷ್ಣ ದ್ವಾರಕಾವಾಸ ಎಂದೆನಲು
ಶ್ರೀಪತಿ ಅಕ್ಷಯವಸ್ತ್ರವನಿತ್ತ
ದ್ರೌಪದಿಯಭಿಮಾನವ ಕಾಯ್ದ ನಮ್ಮ
ಆಪತ್ತಿಗಾಹೆನೆಂಬ ಶ್ರೀಪತಿ ಪುರಂದರವಿಠಲ
ಅಕ್ಷಯವಸ್ತ್ರವನಿತ್ತು ಪಾರ್ಥನ ರಮಣಿಯ ಕಾಯ್ದನು ||

Ha krushna dvarakavasa endenalu
Sripati akshayavastravanitta
Draupadiyabimanava kayda namma
Apattigahenemba sripati purandaravithala
Akshayavastravanittu parthana ramaniya kaydanu ||


ಶುಭವಿದು ಶೋಭನ ಹರಿಗೆ
ಶುಭವಿದು ಶೋಭನ ಸಿರಿಗೆ
ಶುಭವಿದು ಪುರಂದರವಿಟ್ಠಲರಾಯನಿಗೆ
ಶುಭವಿದು ಶೋಭನ ಹರಿಗೆ ||

Subavidu shobana harige
Subavidu shobana sirige
Subavidu purandaravitthalarayanige
Subavidu shobana harige ||


ತನ್ನ ತಾನರಿಯದಾ ಜ್ಞಾನವೇನೊ
ಚೆನ್ನ ಶ್ರೀಪುರಂದರವಿಟ್ಠಲನ ನೆನೆಯದವ
ಸಂನ್ಯಾಸಿಯಾದರೇನು ಷಂಡನಾದರೆ ಏನು ||

Tanna tanariyada j~janaveno
Cenna sripurandaravitthalana neneyadava
Samnyasiyadarenu shandanadare Enu ||


ನಿನ್ನ ದಾಸನಾಗಿ ನಿನ್ನ ಎಂಜಲನುಂಡು
ನೀನುದಾಸೀನಮಾಡಿದರೆ ಲೋಕರು ನಗರೇ
ನಿನ್ನ ಚರಣಕಮಲವನು ಕೊರಳಲಿ ಕಟ್ಟುವೆ ಪುರಂದರವಿಠಲ||

Ninna dasanagi ninna enjalanundu
Ninudasinamadidare lokaru nagare
Ninna caranakamalavanu koralali kattuve purandaravithala||


ಬಡಗಿನ ನಾಡಲ್ಲಿ ಒಂದು ವಿಪರೀತ ಹುಟ್ಟಿತು
ಮುಂದೆ ಮುದ್ದೆ ಮಾಡಿದ ಕಣಕದ ರೊಟ್ಟಿ
ಅದಕೆ ಸಾಧನ ತೋವೆ ಕಟಕೆಟ್ಟಿ
ಅದರ ಮೇಲೆ ತಾ ಪುಣ್ಯವು ಪುಟ್ಟಿ
ಪುರಂದರವಿಠಲನ ಪ್ರಸಾದ ಘಟ್ಟಿ
ಯಾವಾಗ ದೊರಕಿದಾವಾಗ ಜಗಜಟ್ಟಿ||

Badagina nadalli ondu viparita huttitu
Munde mudde madida kanakada rotti
Adake sadhana tove kataketti
Adara mele ta punyavu putti
Purandaravithalana prasada gatti
Yavaga dorakidavaga jagajatti||


ಯಾರು ಮುನಿದು ನಮಗೇನು ಮಾಡುವರಯ್ಯ
ಯಾರು ಒಲಿದು ನಮಗೇನು ಕೊಡುವರಯ್ಯ
ಕೊಡಬೇಡ ನಮ್ಮ ಕುನ್ನಿಗೆ ಕಾಸನು
ಈಯಲುಬೇಡ ನಮ್ಮ ಶುನಕಂಗೆ ತಳಿಗೆಯ
ಆನೆ ಮೆಲೆ ಪೋಪನ ಶ್ವಾನ ಮುಟ್ಟಬಲ್ಲುದೆ
ನಮಗೆ ಶ್ರೀಪುರಂದರವಿಠಲಾನೆ ಸಾಕು ||

Yaru munidu namagenu maduvarayya
Yaru olidu namagenu koduvarayya
Kodabeda namma kunnige kasanu
Iyalubeda namma sunakamge taligeya
Ane mele popana svana muttaballude
Namage sripurandaravithalane saku ||


ಲೇಸು ದಾಸರಿಗೆ ಸಿರಿ ಭಾಗವತರಿಗೆ
ದಾರಿದ್ರ್ಯ ದ್ರೋಹಿಗಳಿಗೆ , ಕೀರ್ತಿ ಕಿಂಕರರಿಗೆ
ಅಪಕೀರ್ತಿ ಕ್ರೂರರಿಗೆ , ಜಯ ದೇವರಿಗೆ
ಅಪಜಯ ಮಂಕುಗಳಿಗೆ , ನಷ್ಟ ಕಪಟರಿಗೆ
ಲಾಭ ಮಹಾತ್ಮರಿಗೆ , ಪುರಂದರವಿಠಲನ ಆಳುಗಳಿಗೆ ಮುಕ್ತಿ
ದೈತ್ಯರಿಗೆ ಅಂಧಂತಮಸ್ಸು ಸಂದೇಹವಿಲ್ಲ ||

Lesu dasarige siri bagavatarige
Daridrya drohigalige , kirti kimkararige
Apakirti krurarige , jaya devarige
Apajaya mankugalige , nashta kapatarige
Laba mahatmarige , purandaravithalana alugalige mukti
Daityarige andhantamassu sandehavilla ||


ಕಣ್ಣಿಲಿ ಕೇಳುವ ಕಾಂಬುದನರಿವ
ಆಘ್ರಾಣಿಸುವ ಆಸ್ವಾದಿಸುವ ರಸನದಿ ಕೇಳುವ
ಕರ್ಮಲೋಪಕ ಲೋಕವಿಲಕ್ಷಣ ಪುರಂದರವಿಠಲ ||

Kannili keluva kambudanariva
Agranisuva asvadisuva rasanadi keluva
Karmalopaka lokavilakshana purandara vittala||


ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ ನಿಂತಿದ್ದ ಕಾಲವೆ
ನಿನ್ನ ನೆನೆದವ ಜೀವನ್ಮುಕ್ತನಲ್ಲವೆ
ಸರ್ವಕಾಲದಲ್ಲಿ ಒರಲುತ್ತ ನರಲುತ್ತ ಹರಿಹರಿ ಎಂದವ
ಜೀವನ್ಮುಕ್ತ ಎಂಬುದಕ್ಕೆ ಏನು ಆಶ್ಚರ್ಯವಯ್ಯ ಪುರಂದರವಿಠಲ||

Avina kombina tudiyalli sasive nintidda kalave
Ninna nenedava jivanmuktanallave
Sarvakaladalli oralutta naralutta harihari endava
Jivanmukta embudakke Enu ascaryavayya purandaravithala||


ಪಾಂಡುತನಯನಂತೆ ಕರೆದು ನಿನ್ನ ಅಟ್ಟುಮಾಣಿಗೆ ಮಣೆಯ ಹಾಕಿಕ್ಕಬೇಕು
ಅರ್ಜುನನಂತೆ ನಿನ್ನ ಬಂಡಿಯ ಬೋವನ ಮಾಡಿ ಕುದುರೆಲಗಾಮು ಕೈಹಿಡಿಸಲಿಬೇಕು
ಆಹಾ ಅನುದಿನ ಅರ್ಚಿಸಿ ಪೂಜಿಸಿ ಮೋಸ ಹೋದೆ ಸ್ವಾಮಿ ಪುರಂದರವಿಠಲ ||

Pandutanayanante karedu ninna attumanige maneya hakikkabeku
Arjunanante ninna bandiya bovana madi kudurelagamu kaihidisalibeku
Aha anudina arcisi pujisi mosa hode svami purandara vittala||


ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ
ನಿತ್ಯ ಪುತ್ರಭಾವ ಬೊಮ್ಮ ಪ್ರಾಣರಿಗೆ
ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ
ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ
ಇಂತೆಂದ ಶ್ರೀಪುರಂದರವಿಠಲ ||

Nitya patibava srilakumidevigayya
Nitya putrabava bomma pranarige
Nitya pautrabava garuda sesha rudrarige
Nitya brutyabava indra kama Atma jivarige
Intenda sripurandara vittala||


ಸನಕಾದಿಗಳ ಹಂಸದಂತೆ ಕಮಲದಲಿ ನಲಿವ ಮೂರುತಿಯನು
ಮನುಜೋತ್ತಮರೆಂಬ ಮನ ಅಂಬರದೊಳು
ಕಾಲಮಿಂಚಿನಂತೆ ಥಳಥಳಿಸುವ ಗುರುಪುರಂದರವಿಠಲ ||

Sanakadigala hamsadante kamaladali naliva murutiyanu
Manujottamaremba mana ambaradolu
Kalamincinante thalathalisuva gurupurandara vittala||


ಸತ್ಯಜನಾಭನೆ ಸತ್ಯಮಹಿಮನೆ
ಸತ್ಯಕಾಮನೆ ಸತ್ಯಪೂರ್ಣನೆ
ಸತ್ಯಭೂಷಣ ನಿತ್ಯ ಪುರಂದರವಿಠಲರೇಯ ||

Satyajanabane satyamahimane
Satyakamane satyapurnane
Satyabushana nitya purandaravithalareya ||


ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ
ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ
ಪನ್ನಂಗಶಯನ ಶ್ರೀಪುರಂದರವಿಠಲ ||

Ondu kaladalli Ane kudure melmeresuve
Ondu kaladalli barigalalli nadesuve
Ondu kaladalli mrushtannavunisuve
Ondu kaladalli upavasavirisuve
Ninna mahimeya nine balleyo deva
Pannanngasayana sripurandara vittala||


ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಲಿದಾಡಲಾರೆ
ಪುರಂದರವಿಠಲ,  ನೀನೇ ಕರುಣಾಳು ಕಾಯೋ

Ganadettinante tirugadalare
Bandiya nogadamte bilalare
Giliyante na ninna kugadalare
Navilinante na nalidadalare
Purandara vithala, nine karunalu kayo


ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸರನು ಯಮನೆಳೆವನೆಂಬಪಕೀರ್ತಿಯ
ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ

Irali ninnalli Bakti enage iradirali
Haridasanendenna karevaru sajjanaru
Haridasaranu yamanelevanembapakirtiya
Pariharisikollo sri purandara vithala


ಇರುವದಾದರೆ ಮುಗುಳುತೆನೆ
ಅದಿಲ್ಲದಿರೆ ಚಿಗುರೆಲೆ
ಅದೂ ಇಲ್ಲದಿರೆ  ಬರಿಯ ಕಟ್ಟಿಗೆ
ಇಲ್ಲದಿದ್ದರೆ ಬೇರು ಮಣ್ಣು
ಅದೊಂದೂ ಇಲ್ಲದಿರೆ ತುಳಸಿ ತುಳಸಿ ಎಂದೊರಲಿದರೆ ಸಾಕು
ಎಲ್ಲ ವಸ್ತುಗಳನೀಡಾಡುವ ಪುರಂದರವಿಠಲ

Iruvadadare mugulutene
Adilladire cigurele
Adu illadire bariya kattige
Illadiddare beru mannu
Adondu illadire tulasi tulasi emdoralidare saku
Ella vastugalanidaduva purandara vittala


ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ  ಮ-
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಭೀತಿ ಬರಲಿ ಮ-
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಬಾಧೆ ಬರಲಿ ಮ-
ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾ ಆಪತ್ತು ಬರಲಿ ಮ-
ತ್ತಿದರಿಂಬಿಟ್ಟಿನ್ನಿಲ್ಲೆಂಬ ಅದಕೊಂದಿದ-
ಕ್ಕೊಂದು ಯೋಚಿಸಬೇಡಿ  ಕಾಣಿರೊ ಮ-
ತ್ತದಕೊಂದಿದಕೊಂದು ಯೋಚಿಸಬೇಡಿ  ಕಾಣಿರೊ
ಪುರಂದರವಿಠಲ ತನ್ನ ನಂಬಿದವರ ಹಿಂದ್ಹಾಕಿಕೊಂಬ ಕಾಣಿರೊ

Idarimbittinnillemba mahavyadhi barali ma-
Ttidarimbittinnillemba mahabiti barali ma-
Ttidarimbittinnillemba mahabadhe barali ma-
Ttidarimbittinnillemba maha Apattu barali ma-
Ttidarimbittinnillemba adakondida-
Kkondu yocisabedi kaniro ma-
Ttadakondidakondu yocisabedi kaniro
Purandara vittalatanna nambidavara hind~hakikomba kaniro


ಇದೇ ಮುನಿಗಳ ಮನದ ಕೊನೆ ಠಾವು
ಇದೇ ಬ್ರಹ್ಮಾದಿಗಳ ಹೃತ್ಕಮಲದ  ಠಾವು
ಇದೇ ಅರಿವ ಸುಜ್ಞಾನಿಗಳಿಗೆ ವೈಕುಂಠವು
ಇದೇ ದ್ವಾರಕೆಯು  ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ಮನಮಂದಿರ

Ide munigala manada kone thavu
Ide brahmadigala hrutkamalada thavu
Ide ariva suj~janigalige vaikunthavu
Ide dvarakeyu ide kshirambudhi
Ide purandaravithalana manamandira


ಇಂದಿಗೆಂಬ ಚಿಂತೆ  ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ
ಒಡೆಯನುಳ್ಳನಕ ತೊತ್ತಿಗೇತರ ಚಿಂತೆ
ಅಡಿಗಡಿಗೆ ನಮ್ಮನಾಳವ  ಕಾವ ಚಿಂತೆಯವ-
ನೊಡೆಯ ಪುರಂದರವಿಠಲರಾಯನು ಇರುತಿರೆ
ಒಡೆಯನುಳ್ಳ ತೊತ್ತಿಗೇತರ ಚಿಂತೆ

Indigemba cinte naligemba cinte tottigekayya
Odeyanullanaka tottigetara cinte
Adigadige nammanalava kava cimnteyava-
Nodeya purandaravithalarayanu irutire
Odeyanulla tottigetara cinte


ಅಚ್ಚುತನ ಭಕುತರಿಗೆ ಮನಮೆಚ್ಚದವನು ಪಾಪಿ
ಆ ನರನೊಳಾಡಿನೋಡಿ ನುಡಿಯೆ
ಮನುಜವೇಷದ ರಕ್ಕಸನೊಳಾಡಿ ನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚಿ ಮೆಚ್ಚನು ಕಾಣೋ ಎಂದೆಂದಿಗೂ

Achyutana Bakutarige manameccadavanu papi
A naranoladinodi nudiye
Manujaveshada rakkasanoladi nudidamte
Saccidanandatma purandaravithalanu
mecci meccanu kano endendigu


ಅನ್ನಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನಪಾನಾದಿಗಳೀಯೊ ಆ ಚಂಡಾಲ ಸಪ್ತರಿಗೆ
ಅನ್ನಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ

Annapanadigaliyo abyagata brahmanarige
Annapanadigaliyo A candala saptarige
Annapanadigaliyo andha dina krupanarige
Hasivege hagavannarpiso purandaravithalage


ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ
ಆಪನ್ನ ರಕ್ಷಕನೆ ಪರಿಪಾಲಿಸು ಇನ್ನು
ಪನ್ನಂಗಶಯನ ಪುರಂದರವಿಠಲ

Anyarobbara kane mannisuvarenna
Apanna rakshakane paripalisu innu
Pannangasayana purandaravithala


ಅತಳದಲ್ಲಿರಿಸೊ ಸುತಳದಲ್ಲಿರಿಸೊ
ತಳಾತಳ ಪಾತಾಳದಲ್ಲಿರಿಸೊ
ಯೋನಿಯೊಳಿರಿಸೊ
ಮತ್ತಾವಯೋನಿಯಲ್ಲಿರಿಸೊ
ನೀನೆಲ್ಲಿರಿಸಿದರೆ ನಾನಲ್ಲಿರದಾದೆನೆ?
ನೀನೆಂತು ನಡೆದು ನಡೆಸಿಕೊಂಬುವೆಯೊ
ನಾನಂತಂತೆ ನಡೆಯುವೆ ಪುರಂದರವಿಠಲ

Ataladalliriso sutaladalliriso
Talatala pataladalliriso
Yoniyoliriso
Mattavayoniyalliriso
Ninellirisidare nanalliradadene?
Ninemnu nadedu nadesikombuveyo
Nanantante nadeyuve purandaravithala


ಅಂಬರದಾಳವನು ರವಿಶಶಿ ಬಲ್ಲರು
ಅಂತರಲಾಡುವ ಪಕ್ಷಿ ತಾ ಬಲ್ಲುದೇ?
ಜಲದ ಪ್ರಮಾಣ ತಾವರೆಗಲ್ಲದೆ
ಮ್ಯಾಲಿರುವ ಗಿಡಗಳು ತಾವು ಬಲ್ಲವೇ ?
ಸುರತ ಸುಖವನೆಲ್ಲ ಯುವಕನಲ್ಲದೆ
ಬಾಲಕತನದವರು ತಾವು ಬಲ್ಲರೇ?
ದೇವ ನಿನ್ನ ಮಹಿಮೆಯ
ಜ್ಞಾನಿಗಳ ಭಕ್ತಿಯ ನೀನೇ ಬಲ್ಲಯ್ಯಾ ಪುರಂದರವಿಠಲ

Ambaradalavanu ravisasi ballaru
Antaraladuva pakshi ta ballude?
Jalada pramana tavaregallade
Myaliruva gidagalu tavu ballave ?
Surata sukavanella yuvakanallade
Balakatanadavaru tavu ballare?
Deva ninna mahimeya
J~janigala Baktiya nine ballayya purandaravithala


ಅಂದು ಬಾಹೋದು ನಮಗಿಂದೇ ಬರಲಿ
ಇಂದು ಬಾಹುದು ನಮಗೀಗೇ ಬಾರಲಿ
ಈಗ ಬಾಹೋದು ನಮಗೀಕ್ಷಣವೇ ಬರಲಿ
ಪುರಂದರವಿಠಲನ ದಯವೊಂದು ನಮಗಿರಲಿ

Andu bahodu namaginde barali
Indu bahudu namagige barali
Iga bahodu namagikshanave barali
Purandaravithalana dayavondu namagirali


ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ
ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
ಸಲಹಲಿ ಶ್ರೀ ಪುರಂದರವಿಠಲ||

Baliya manege vamana bandante
Bagirathage srigange bandante
Mucukundage sri mukunda bandante
Gopiyarige govinda bandante
Vidurana manege sri krushna bandante
Vibishanana manege sri rama bandante
Ninna namavu bandu enna naligeyali nindu
Salahali sri purandaravithala||


ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!

Ninnantha svami nanaguntu ninagilla
Ninnantha doreyu enaguntu ninagilla
Ninnantha tande enaguntu ninagilla
Nane svadesi nine paradesi
Ninnarasi lakumi enna tayi
Ninna taya toro purandara vithala||


ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು
ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು
ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ ಮುಕ್ತಿಯ ಪಡೆದರು ತತ್ವಾಭಿಮಾನಿಗಳು
ಒಂದೊಂದು ಅವಯವದಲ್ಲಿ ಸಾಯುಜ್ಯವೆಂಬ ಮುಕುತಿಯ ಪಡೆದರು ಕೆಲವರು
ಆಗ ಸಾಯುಜ್ಯ ಸರ್ವಾಂಗದಲಿ ಅಜಗಿತ್ತು ಸಲಹಿದೆ
ಅನುಪಮ ಗುಣನಿಲಯ ಗುರುಪುರಂದರವಿಠಲ ಮುಖ್ಯಪ್ರಧಾನನಿಗೆ ||

Andu gokuladalli gopalakaragi animisharella salokyava padedaru
Andu govugalagi sadhanava madi samipyavannu padedaru kelaru
Andu ninnanu kudi adi sarupyavemba muktiya padedaru tatvabimanigalu
Ondondu avayavadalli sayujyavemba mukutiya padedaru kelavaru
Aga sayujya sarvangadali ajagittu salahide
Anupama gunanilaya gurupurandara vittalamukyapradhananige ||


ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ
ಹರಿಹರಿಣನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ
ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ
ಹಂದಿಶುನಕನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ
ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳನೊಂದು
ಮಾನುಷ ದೇಹ ಬಂದಿತೊ ನಿನಗೀಗ
ಬೇಗ ನೆನೆಯೆಲೊ ಪುರಂದರವಿಟ್ಠಲರಾಯನ ||

Krimikitanagi huttidandu harisaranentenalunte
Hariharinanagi huttidandu harisaranentenalunte
Katte karadiyagi huttidandu harisaranentenalunte
Handisunakanagi huttidandu harisaranentenalunte
Maretiye manava ninna hindina bavagalanondu
Manusha deha bandito ninagiga
Bega neneyelo purandaravitthalarayana ||


ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು
ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ ಕಿಲಕಿಲ ಶಬ್ದವು ರಂಜಿಸುವ ನುಡಿಗಳು
ಮುಕುತರು ಬಂದು ಜಲಕ್ರೀಡೆಗಳ ಮಾಡಿ ಕುಳಿತು ಸುಖಿಪರು
ಇಂಥಾ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು
ಪರಲೋಕ ಸುಖವೀವ ಪುರಂದರವಿಠಲನ ಭಜಿಸು ಜೀವ ||

Alli vanagaluntu aprakrutavada palapushpagalindopputtalihudu
Pakshijatigaluntu ativilakshanavada kilakila Sabdavu ranjisuva nudigalu
Mukutaru bandu jalakridegala madi kulitu sukiparu
Intha suka bekadare nicavruttiya bittu
Paraloka sukaviva purandaravithalana Bajisu jiva ||


ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು
ದುಃಖಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು
ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ
ಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು
ಆಂದೋಳಿಕ ಛತ್ರಚಾಮರ ಸದಾ ಪೀತಾಂಬರ ಶಂಖಚಕ್ರಗಳಿಂದೊಪ್ಪುತ
ಗುರು ಪುರಂದರವಿಠಲನ ಭಜಿಸು ಜೀವ ||

Illentha sukagalunto allantha sukagaluntu
Duhkamisravada suka ihalokadallippudu nasavuntu
Dinakondu bagebageyadantha sukavagi nasavillada
Prakrutavada sukavananubavisutta kramadi tiruguvaru
Andolika catracamara sada pitambara sankacakragalindopputa
Guru purandaravithalana Bajisu jiva ||


ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ
ಕೃಷ್ಣನಾಮದ ಕಿಡಿ ಬಿದ್ದು ಬೆಂದುಹೋದದ್ದು ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ ಶಿಕ್ಷಿಸದೆ ಬಿಡ
ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು
ಪುಂಡರೀಕಾಕ್ಷ ನಮ್ಮ ಪುರಂದರವಿಠಲ ||

Bettadantha duritavu suttamuttalottare
Krushnanamada kidi biddu benduhodaddu kande
Ele ele duritave tirugi nodade hogu
Ele ele duritave marali nodade hogu
Ninna kandare sikshisade bida
Innomme kandare Sirava cendaduvanu
Pundarikaksha namma purandara vittala||


ಹೇಗೆ ಬರೆದೀತು ಪ್ರಾಚೀನದಲ್ಲಿ
ಹಾಗೆ ಇರಬೇಕು ಸಂಸಾರದಲ್ಲಿ
ಪಕ್ಷಿ ಕೂತಿತು ಅಂಗಳದಲ್ಲಿ
ಹಾರಿ ಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು
ಸಂತೆ ನೆರೆದೀತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸಂಸಾರಮಾಯ ಬಿಡಿಸಿ
ಕಾಯೊ ಪುರಂದರವಿಠಲ ||

Hege bareditu pracinadalli
Hage irabeku samsaradalli
Pakshi kutitu angaladalli
Hari hoyitu A kshanadalli
Aduva makkalu mane kattidaru
Ata sakendu muridodidaru
Sante nereditu nana pari
Tirugi Ayitu tamma tamma dari
Vastikaranu vastige banda
Hottare eddu Urige hoda
I samsaramaya bidisi
Kayo purandara vittala||


ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ
ಎಂಟೆರಡು ಮೂರಾಚಮನಕೆ ಪರಿಹರವೊ
ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ
ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ್ಜಿಸಲುಬೇಕು
ಉಚ್ಚಿಷ್ಟ ಸೋಂಕಲು ಐದು ನಿರಾಹಾರವಣ್ಣ
ಇಷ್ಟು ಮಾಡಿದರೆ ಪಾಪ ಪರಿಹರವಯ್ಯ
ಶಿಷ್ಟರಲ್ಲದೆ ಮತ್ತು ಎಲ್ಲವರಿಗೆ ಅಸಾಧ್ಯವಿದು
ಗಟ್ಟ್ಯಾಗಿ ಜಗನ್ನಾಥ ಎಂದರೆ
ಮುಟ್ಟಲಂಜುವುದಘವು ಓಡಿಪೋಗುವುದಯ್ಯ
ಇಷ್ಟೆಲ್ಲ ಒಂದೆ ಮಾತ್ರದಿ ಪದ್ಮಪುರಾಣವ ವಿಚಾರಿಸು ಮನುಜ ಅಲ್ಲಿ
ಸ್ಪಷ್ಟವಾಗಿ ಪೇಳುವುದು ವಚನ
ಜಗನ್ನಾಥನ ನಂಬುವರೆ ಎಲ್ಲ ಕೇಳಿರಯ್ಯ
ಗುರು ಪುರಂದರವಿಠಲನ ಪದವಿಯ ಬೇಡುವರು ||

Muttu yuvatiya Sabda kelidare papa
Enteradu muracamanake pariharavo
Drushtisi nodidare thattane jaladalli ainuru snanadi Suddha
Mettidade kulita sthala murudina varjisalubeku
Uccishta sonkalu aidu niraharavanna
Ishtu madidare papa pariharavayya
Sishtarallade mattu ellavarige asadhyavidu
Gattyagi jagannatha endare
Muttalanjuvudagavu odipoguvudayya
Ishtella onde matradi padmapuranava vicarisu manuja alli
Spashtavagi peluvudu vacana
Jagannathana nambuvare ella kelirayya
Guru purandaravithalana padaviya beduvaru ||


ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು
ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ ಸರ್ವಾತ್ಮನಾಗಿ ಸ್ವೀಕರಿಸುವಾ
ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ
ಅನಾದಿಕಾಲದಿ ಇರುವ ಜೀವರಿಗೆ ನೀನೆ ಸುಖವನೀವೆ ರುದ್ಧಕರ್ಮಗಳಂತೆ
ಅನಾದಿಕಾಲದಿ ಜೀವಕರ್ಮ ಜ್ಞಾನ ಅನಾದಿಗಳು ನಿನ್ನಾಧೀನವಯ್ಯ
ಅನಾದಿ ಕರ್ಮ ನೀನೆ ಪುರಂದರವಿಠಲ
ನೀನೆ ಸಲಹೊ ನಿನ್ನ ಅಡಿ ಪೊಂದಿದವರ ||

Nine kartanu akarta siri ajabavadi indradyamararu
Nine svatantra asvatantraravaru nine sarvatmanagi svikarisuva
J~jana ninnadhina karma ninnadhina
Anadikaladi iruva jivarige nine sukavanive ruddhakarmagalante
Anadikaladi jivakarma j~jana anadigalu ninnadhinavayya
Anadi karma nine purandaravithala
Nine salaho ninna adi pondidavara ||


ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು
ಕೇಳಿ ಈ ಪರಿ ಇಪ್ಪತ್ತುನಾಲ್ಕು ಅಕ್ಷರದಿಂದ
ತೋರುತಲಿ ಗಾಯತ್ರಿ ರಚಿಸಿದ ಹರಿಯ ಮೆರೆವುದೈ
ಪುರುಷಸೂಕ್ತದಿ ಅನಂತವೇದರಾಶಿ ಧೊರೆಯೆಂದು ಪೊಗಳುವುವೊ
ಓಂಕಾರ ಶ್ರೀಕಾರ ಮೆರೆವುದೈವತ್ತೊಂದು ಲಕ್ಷಗಳು
ಈ ಕೃತಿ ಅಶೇಷ ಗುಣಾಧಾರ ಎಂದು ನಾರಾಯಣೋದ ಪೂರ್ಣಗುಣನುತ
ಭರದಿ ಜ್ಞಾನರೂಪಾಶನೊ ಮೆರೆವಾದೆಲೆ
ಶಾಶಟರ್ದವಧರಿಶಿಗೆ ಪುರಂದರವಿಠಲ ಓಂಕಾರ ||

Aru aksharadinda vyahrutiyinda omkaravaguvudu
Keli I pari ippattunalku aksharadinda
Torutali gayatri racisida hariya merevudai
Purushasuktadi anantavedarasi dhoreyendu pogaluvuvo
Omkara srikara merevudaivattondu lakshagalu
I kruti asesha gunadhara endu narayanoda purnagunanuta
Baradi j~janarupasano merevadele
Sasatardavadharisige purandara vittalaomkara ||


ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು
ಬದ್ಧ ಅಂಗುಟಾಗ್ರ ಎಣಿಸಬೇಕು
ಕಿರಿ ಅಂಗುಲಿ ಪಂಚ ಭೋಗಿಸಿ ಇರಬೇಕು
ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿ
ಬುದ್ಧಿಪೂರ್ವಕದಿಂದ ಗೆಯ್ಯುತಲಿರಬೇಕು
ಮುದ್ದುಮೂರುತಿ ನಮ್ಮ ಪುರಂದರವಿಠಲನ
ಯವದೆಂದು ನೋಡುವಾ ಬಗೆ ಕಾಣಬೇಕು ||

Madhyanguli mele manisaravittinnu
Baddha angutagra enisabeku
Kiri anguli panca bogisi irabeku
Badravagi nillisi niru sorade gayatri
Buddhipurvakadinda geyyutalirabeku
Muddumuruti namma purandaravithalana
Yavadendu noduva bage kanabeku ||


ಕಂಡಾನಿಶದಲ್ಲಿ ಅರ್ಘ್ಯವನು
ಪ್ರಾತರದಿ ಮಂಡಲಾಕಾರ
ಮಧ್ಯಾಹ್ನದಲ್ಲಿ ಪುಂಡಗಾರನಾಗಿ
ಚರಿಸದಲೆ ಇದ್ದರೆ ಅವಗೆ
ಪಂಡಿತ ಶ್ರೀಪುರಂದರವಿಠಲ ಒಲಿಯ ||

Kandanisadalli argyavanu
Prataradi mandalakara
Madhyahnadalli pundagaranagi
Charisadale iddare avage
Pandita sripurandara vittalaoliya ||


ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು
ಪರದೋಷಿಯಾಗೆ ಪಾಪಗೆಯ್ದು ಪರಪತ್ನಿಯನಯ್ದಿರೆ
ಶ್ರೀಪತಿ ಗೋಪಿಚಂದನಲಿಪ್ತಾಂಗಗೆ
ಭೂಪತಿ ಪುರಂದರವಿಠಲ ಪಾದವ ತೋರ್ಪ ||

Kulapatiyadaru sandhyavandane geyyada papiyadaru
Paradoshiyage papageydu parapatniyanaydire
Sripati gopicandanaliptangage
Bupati purandara vittalapadava torpa ||


ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ
ಶ್ರೀಕೃಷ್ಣ ಎಂದರೆ ದುರಿತ ನಿವಾರಣ
ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ
ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ
ನಾಮದಲಿ ಎಚ್ಚತ್ತಿರೆಲೆ ಮನವೆ
ಏಕೆ ಬಯಲ ನೆನೆವೆ ಅಚ್ಯುತನೆ ಆದಿಕೇಶವನೆ ಅನಾಥಬಂಧೋ ಸಲಹೆಂದು
ಅಚ್ಯುತನ ಪಾದವೆ ನಂಬು ಗತಿಯೆಂದು ಎಚ್ಚತ್ತಿರೆಲೆ ಮನವೆ
ಅನಂತಾನಂತ ದೇವರ ದೇವ ರಂಗೇಶ
ಅನಂತನೆಂದರೆ ಬಲುಭಯವಿನಾಶ
ಅನಂತನೆಂದರೆ ತಡೆವ ಯಮಪಾಶ ಎಚ್ಚತ್ತಿರೆಲೆ ಮನವೆ
ಗೋವಿಂದನೆಂದರೆ ಸಕಲತೀರ್ಥ ಸ್ನಾನ
ಗೋವಿಂದನೆಂದರೆ ಸಕಲಮೂರ್ತಿ ಧ್ಯಾನ
ಗೋವಿಂದನೆಂದರೆ ಪುರಂದರವಿಠಲ ಕೊಡುವ ಸಕಲಸುಜ್ಞಾನ ||

Srirama endare bagyakke karana
Srikrushna endare durita nivarana
Eccattiru ele mana manave eccattirele manave
Eke bailanu neneve acyutananta govindanemba
Namadali eccattirele manave
Eke bayala neneve acyutane adikesavane anathabandho salahendu
Acyutana padave nambu gatiyendu eccattirele manave
Anantananta devara deva ramgesa
Anantanendare balubayavinasa
Anantanendare tadeva yamapasa eccattirele manave
Govindanendare sakalatirtha snana
Govindanendare sakalamurti dhyana
Govindanendare purandara vittalakoduva sakalasuj~jana ||


ಹಸಿವಾಯಿತೇಳಿ ದೇವರ ತೊಳೆಯೆಂಬರು
ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡರು
ಹಸಿ ಹಾವಿನ ಬುಟ್ಟಿಯಂತೆ ಮುದ್ದಿಟ್ಟುಕೊಂಡು
ವಸುಧೆಯೊಳಗೆ ಉರಗಗಾರನಾಟ ಮಾಡುವರಯ್ಯ
ಪರಧನ ಪರಸತಿ ಪರದ್ರವ್ಯಕ್ಕೆರಗೋರು
ತ್ವರೆಗಳಾಗಿದ್ದರೆ ದುರಿತ ಪೋಗುವುದೆ
ಸರುವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿ
ವರವ ಕೊಡು ನಮ್ಮ ಪುರಂದರವಿಠಲ||

Hasivayiteli devara toleyembaru
Hasanagi manadalli mutti pujeya madaru
Hasi havina buttiyante muddittukondu
Vasudheyolage uragagaranata maduvarayya
Paradhana parasati paradravyakkeragoru
Tvaregalagiddare durita poguvude
Saruvavellava toredu hariya dhyanava madi
Varava kodu namma purandaravithala||


ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ-
ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಭೀತಿ ಬರಲಿ , ಮ-
ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಬಾಧೆ ಬರಲಿ , ಮ-
ತ್ತಿದರಿಂಬಿಟ್ಟೆನಿಲ್ಯೆಂಬ ಮಹಾ ಆಪತ್ತು ಬರಲಿ , ಮ-
ತ್ತಿದರಿಂಬಿಟ್ಟೆನಿಲ್ಯೆಂಬ ಅದಕೊಂದಿದಕೊಂದ್ಯೋಚಿಸಬೇಡಿ ಕಾಣಿರೊ, ಮ
ತ್ತದಕೊಂದಿದಕೊಂದ್ಯೋಚಿಸಬೇಡಿ ಕಾಣಿರೊ
ಪುರಂದರವಿಠಲ ತನ್ನ ನಂಬಿದವರ ಹಿಂದ್ಹಾಕಿಕೊಂಬ ಕಾಣಿರೊ ||

Idarimbittenilyemba mahavyadhi barali , ma-
Ttidarimbittenilyemba mahabiti barali , ma-
Ttidarimbittenilyemba mahabadhe barali , ma-
Ttidarimbittenilyemba maha Apattu barali , ma-
Ttidarimbittenilyemba adakondidakondyocisabedi kaniro, ma
Ttadakondidakondyocisabedi kaniro
Purandara vittalatanna nambidavara hind~hakikomba kaniro ||


ಜೀವ ಜೀವಕೆ ಭೇದ , ಜಡಜಡಕೆ ಭೇದ
ಜೀವಜಡ ಪರಮಾತ್ಮನಿಗೆ ಭೇದ
ಜೀವಾಜೀವ ಮುಕ್ತಾಮುಕ್ತರ ಭೇದ
ಸಂಸಾರದೊಳು ಭೇದ
ಮುಕ್ತರೊಡೆಯ ಹರಿ ಭಕ್ತರಾಧೀನ , ಜಗ-
ತ್ಕರ್ತು ನೀ ಸಲಹಯ್ಯ ಪುರಂದರವಿಠಲ ||

Jiva jivake beda , jadajadake beda
Jivajada paramatmanige beda
Jivajiva muktamuktara beda
Samsaradolu beda
Muktarodeya hari baktaradhina , jaga-
Tkartu ni salahayya purandara vittala||


ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ ಸಮರ್ಪಿಸಲು
ಅಂತ್ಯಫಲದಿ ಕೋಟಿ ಕೋಟಿ ಅಗಣಿತಫಲವು
ಅರ್ಧ ತುಳಸೀದಳದ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು
ಶ್ರೀಹೇಮಗತ ಪುರಂದರವಿಠಲ ವೈಕುಂಠಪದವಿಯನೀವನೊ ||

Santata hanneradu koti suvarnapushpa samarpisalu
Antyapaladi koti koti aganitapalavu
Ardha tulasidalada tantu matra Baktiyinda samarpisalu
Srihemagata purandara vittalavaikunthapadaviyanivano ||


ಆ ಹರಿಸಿರಿಚರಣವಿರಲು ಮಿಕ್ಕ
ಭೂರಿದೈವಗಳಿಗೇಕೆ ಭಜಿಸುವೆ ಮರುಳೆ
ನೀರಡಿಸಿ ಜಾಹ್ನವಿ ತೀರದಲ್ಲಿದ್ದು
ಭಾವಿ ನೀರು ಕುಡಿವ ಮಾನವರುಂಟೆ
ಕಾರುಣ್ಯ ವೈಕುಂಠ ವಿಠಲರೇಯ
ತಿರುವೇಂಗಳಪ್ಪ ಸಿರಿ ಪುರಂದರವಿಠಲ ||

A harisiricaranaviralu mikka
Buridaivagaligeke Bajisuve marule
Niradisi jahnavi tiradalliddu
Bavi niru kudiva manavarunte
Karunya vaikuntha vithalareya
Tiruvengalappa siri purandara vittala||


ಬೇಡುವ ಕಷ್ಟಕ್ಕಿಂತ ಸಾವುದೆ ವರಲೇಸು
ಬೇಡುವವರಿಗೆ ವೊಬ್ಬಿ ಉಳಿಯೊದುಂಟೇನೊ ದೇವ
ಧೊರೆಯುಂಟೆ ಗೂಡು ಕಿರಿದು ಮಾಡಿ
ಬಲಿಯ ದಾನವ ಬೇಡಿ ನಾಡು ಅರಿಯಲು
ಸ್ಥೂಲ ಸೂಕ್ಷ್ಮ ನಿನ್ನದೆ
ಬೇಡುವ ಕಷ್ಟವನು ನೀನೆ ಬಲ್ಲೆಯೊ
ಸ್ವಾಮಿ ಎನ್ನ ಬೇಡದಂತೆ ಮಾಡಯ್ಯ ಪುರಂದರವಿಠಲ ||

Beduva kashtakkinta savude varalesu
Beduvavarige vobbi uliyodunteno deva
Dhoreyunte gudu kiridu madi
Baliya danava bedi nadu ariyalu
Sthula sukshma ninnade
Beduva kashtavanu nine balleyo
Svami enna bedadante madayya purandara vittala||


ಧ್ವಜ ವಜ್ರಾಂಕುಶ ರೇಖಾಂಕಿತವಾದ
ಹರಿಪಾದಾಂಬುಜ ಸೇವಿಪ ಭಾಗವತರ ಭಾಗ್ಯ ನೋಡೊ
ತ್ರಿಜಗವಂದ್ಯನ ಪಾಡುಭಕ್ತಿಯನು ಬೇಡು
ಕುಜನರ ಮಾತುಗಳ ಸುಡು , ದುರ್ಜನರ ಸಂಗವ ಬಿಡು
ಗಜೇಂದ್ರನ ಕಾಯಿದ ಶ್ರೀಕೃಷ್ಣನ ಸ್ಮರಣೆ ಮಾಡು
ಪುರಂದರವಿಠಲನ ಬಿಡದೆ ಕೊಂಡಾಡು ||

Dhvaja vajrankusa rekankitavada
Haripadambuja sevipa bagavatara bagya nodo
Trijagavandyana padubaktiyanu bedu
Kujanara matugala sudu , durjanara sangava bidu
Gajendrana kayida srikrushnana smarane madu
Purandaravithalana bidade kondadu ||


ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ
ಕೊಡುವರೊಳಗೆ ನಿನ್ನಿಂದ್ಯಾರು ಕೊಡುವರಿಲ್ಲ
ದೃಢಭಕ್ತಿ ನಿನ್ನಲ್ಲಿ ಎನಗೆ ಕಲ್ಪಿಸಿ
ಬಿಡದೆ ಸಲಹೊ ಶ್ರೀ ಪುರಂದರ ವಿಠಲ||z

Badavarolage ennindyaru badavarilla
Koduvarolage ninnindyaru koduvarilla
Drudhabakti ninnalli enage kalpisi
Bidade salaho sri purandara vithala||


ಹರಿ ನೀನೊಲಿವಂತೆ ಮಾಡು
ಒಲಿದರೆ ತಿರಿವಂತೆ ಮಾಡು
ತಿರಿದರೆ ದಾರು ನೀಡದಂತೆ ಮಾಡು
ದಾರು ನೀಡಿದರೆ ಪೊಟ್ಟೆ ತುಂಬದಂತೆ ಮಾಡು
ಪೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು
ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು
ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ
ಇಂಬಿಟ್ಟು ಸಲಹೊ ಪುರಂದರ ವಿಠಲ

Hari ninolivante madu
Olidare tirivante madu
Tiridare daru nidadante madu
Daru nididare potte tumbadante madu
Potte tumbidare batte doreyadante madu
Batte doretare imbu doreyadante madu
Imbu doreyadiddare ranga ninna padaravindadalli
Imbittu salaho purandara vithala


ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ ಸ್ಮರಿಸಿ
ನಾಥ ಗೋವಿಂದಗೆ ಪ್ರದಕ್ಷಿಣೆ ಮಾಡಿ
ಪ್ರೀತಿಯೊಳತಿಥಿಪೂಜೆಗೆಯ್ದು ಪುರಾಣ ಶಾಸ್ತ್ರವ ಕೇಳಿ
ನಾಥ ಶ್ರೀಪುರಂದರವಿಠಲಗೆ ನಮೋ ಎನ್ನು

Pratahkalada nidre pariharisi hariya smarisi
Natha govindage pradakshine madi
Pritiyolatithipujegeydu purana sastrava keli
Natha sripurandaravithalage namo ennu


ಮನ ಚಂಚಲದಿ ತಪವ ಮಾಡಲು ಅಶಕ್ಯವು
ಘನ ಅಜ್ಞಾನದಿ ಹಲವು ಕರ್ಮವು ಹತ್ತವು
ಧನಶುದ್ಧಿಯಿಲ್ಲದೆ ದಾನವು ವೃಥಾ ಇವು
ಇನಿತಾದ್ದರಿಂದ ಪುರಂದರವಿಠಲ ಈ ಯುಗದಿ
ತನ್ನ ನಾಮಸ್ಮರಣೆ ಲೇಸೆಂದನು

Mana camcaladi tapava madalu asakyavu
Gana aj~janadi halavu karmavu hattavu
Dhanasuddhiyillade danavu vrutha ivu
Initaddarinda purandara vittalai yugadi
Tanna namasmarane lesendanu


ದರಿದ್ರರೆನ್ನಬಹುದೆ ಹರಿದಾಸರ
ಸಿರಿವಂತರೆನಬಹುದೆ ಹರಿದ್ರೋಹಿಗಳ
ಹರಿದಾಸರ ಮೇಲಿದ್ದ ಕರುಣವು ಸಿರಿದೇವಿ ಮೇಲಿಲ್ಲವೋ
ಪುರಂದರ ವಿಠಲನ ಆಳುಗಳಿಗೆ ಎಲ್ಲಿಹುದೈ ಮಾನಾಭಿಮಾನ ಜಗದಿ

Daridrarennabahude haridasara
Sirivantarenabahude haridrohigala
Haridasara melidda karunavu siridevi melillavo
Purandara vithalana alugalige ellihudai manabimana jagadi


ಮಲಗಿ ಪಾಡಿದರೆ ಕುಳಿತು ಕೇಳುವನು
ಕುಳಿತು ಪಾಡಿದರೆ ನಿಂತು ಕೇಳುವನು
ನಿಂತು ಪಾಡಿದರೆ ನಲಿದು ಕೇಳುವನು
ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ

Malagi padidare kulitu keluvanu
Kulitu padidare nintu keluvanu
Nintu padidare nalidu keluvanu
Nalidu padidare svarga surebittenemba purandaravithala


ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನು ಶುದ್ಧಿಯಿಲ್ಲದವಗೆ ತೀರ್ಥ ಫಲವೇನು
ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರ ವಿಠಲ

Mana Suddhiyilladavage mantrada palavenu
Tanu Suddhiyilladavage tirtha palavenu
Mindalli palavenu minu mosaleyante
Nindalli palavenu srisailada kageyante
Horage mindu olage miyadavara kandu
Beragagi nagutidda purandara vithala


ತಪ್ಪು ಸಾಸಿರಗಳ ಒಪ್ಪಿ ಕಾಯೋ ಕೃಪಾಳು |
ಮುಪ್ಪುರವನಳಿದಂಥ ಮುನೀಂದ್ರ ವಂದ್ಯ |
ಅಪ್ರಮೇಯನೆ ನಿನ್ನ ಅದ್ಭುತ ಮಹಿಮೆಗಳ |
ಅಪ್ಪು ನಿಧಿಯಲಿ ಪುಟ್ಟಿದವಳರಿಯಳು |
ಕಪ್ಪು ಮೇಘ ಕಾಂತಿಯೊಪ್ಪುವ ತಿಮ್ಮಪ್ಪ |
ಅಪ್ರಾಕೃತರೂಪ ಪುರಂದರವಿಠಲ ||

Tappu sasiragala oppi kayo krupalu |
Muppuravanalidantha munindra vandya |
Aprameyane ninna adbuta mahimegala |
Appu nidhiyali puttidavalariyalu |
Kappu mega kantiyoppuva timmappa |
Aprakrutarupa purandara vittala||


ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ |
ನಿನ್ನನೆ ಬೇಡಿ ಬೇಸರಿಸುವೆ |
ನಿನ್ನ ಕಾಲನು ಪಿಡಿವೆ ನಿನ್ನ ಹಾರೈಸುವೆ |
ನಿನ್ನ ತೊಂಡರಿಗೆ ಕೈ ಕೊಡುವೆ ||
ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ |
ಘನ್ನ ಪುರಂದರವಿಠಲ ದೇವರ ದೇವ ||

Ninnane paduve ninnane pogaluve |
Ninnane bedi besarisuve |
Ninna kalanu pidive ninna haraisuve |
Ninna tomdarige kai koduve ||
Ninnante sakaballa devarinnunte |
Ganna purandara vittaladevara deva ||


ಸಂತತಿ ಆಹೋದು ರಾಮಾಯಣವ ಕೇಳಲು |
ಸಕಲ ಪಾಪಹರವು ಭಾರತ ಕೇಳಲು |
ತಂತುಮಾತ್ರ ವಿಷ್ಣುಪುರಾಣವ ಕೇಳಲು |
ತತ್ವ ವಿವೇಕವು ಬಾಹೋದು ||
ಅಂತರವರಿತು ಭಾಗವತ ಕೇಳಲು |
ಆಹೋದಗ್ರ್ಯನಾ ಭಕ್ತಿ ವೈರಾಗ್ಯವು |
ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು |
ಸಕಲವು ಬಾಹೋದು ಸಾಯುಜ್ಯವು ||

Santati ahodu ramayanava kelalu |
Sakala papaharavu barata kelalu |
Tantumatra vishnupuranava kelalu |
Tatva vivekavu bahodu ||
Antaravaritu bagavata kelalu |
Ahodagryana Bakti vairagyavu |
Santata purandaravithalana sankirtane padalu |
Sakalavu bahodu sayujyavu ||


ಹಾರುವನ್ನ ಹೆಟ್ಟಬೇಕು |
ಹಾರುವನ್ನ ಕುಟ್ಟಬೇಕು |
ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು ||
ಹಾರುವನು ಪರಧನ ಪರಸತಿ ವಶನಾಗಿ
ಊರವೊಳಗೆ ಆರು ಮಂದಿ ಹಾರುವಾರು |
ಮೈದಾರಹಾರ ತಂದೆ  ಮಾಡು ಎನ್ನ ಪುರಂದರವಿಠಲ||

Haruvanna hettabeku |
Haruvanna kuttabeku |
Haruvanna kandare campe mele hodeyabeku ||
Haruvanu paradhana parasati vasanagi
Uravolage Aru mamdi haruvaru |
Maidarahara tande madu enna purandaravithala||


ಹಾಡಿದರೆ ಎನ್ನೊಡೆಯನ ಹಾಡುವೆ |
ಬೇಡಿದರೆನ್ನೊಡೆಯನ ಬೇಡುವೆ |
ಒಡೆಯಗೆ ಒಡಲನು ತೋರುತ | ಎನ್ನ |
ಬಡತನ ಬಿನ್ನಹ ಮಾಡುವೆ|
ಒಡೆಯ ಶ್ರೀ ಪುರಂದರವಿಠಲರಾಯನ |
ಅಡಿಗಳನು ಬದುಕುವೆ, ಸೇರಿ ಬದುಕುವೆ |

Hadidare ennodeyana haduve |
Bedidarennodeyana beduve |
Odeyage odalanu toruta | enna |
Badatana binnaha maduve|
Odeya sri purandaravithalarayana |
Adigalanu badukuve, seri badukuve ||

4 thoughts on “ugabhoga by Purandara dasaru(Part 2)

Leave a comment