MADHWA · purandara dasaru · ugabhoga

ugabhoga by Purandara dasaru(Part 1)

ಅಣಕದಿಂದಾಗಲಿ ಡಂಭದಿಂದಾಗಲಿ
ಇದ್ದಾಡಾಗಲಿ ಬಿದ್ದಾಡಾಗಲಿ
ತಾಗಿದಾಡಾಗಲಿ ತಾಕಿಲ್ಲದಾಡಾಗಲಿ
ಮರೆದು ಮತ್ತೊಮ್ಮೆಯಾಗಲಿ ಹರಿಹರಿಯೆಂದವನಿಗೆ
ನರಕದ ಭಯವೇಕೆ ಯಮಪಟ್ಟಣ ಕಟ್ಟಿದರೇನು
ಯಮಪಟ್ಟಣ ಬಟ್ಟಬಯಲಾದರೇನು
ಹರಿದಾಸರಿಗೆ ಪುರಂದರವಿಠಲ ||

Anakadindagali dambadindagali
Iddadagali biddadagali
Tagidadagali takilladadagali
Maredu mattommeyagali harihariyendavanige
Narakada bayaveke yamapattana kattidarenu
Yamapattana battabayaladarenu
Haridasarige purandara vittala||


ಶ್ರೀಪತಿಯ ಕಟಾಕ್ಷವೀಕ್ಷಣ ತಪ್ಪುವಾಗ
ಅನೇಕ ಬಂಧುಗಳು ಲಕ್ಷವೈದ್ಯರುಗಳು
ಇರಲಾಗಿ ಕಣ್ಣುಕಣ್ಣು ಬಿಡುವರು
ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು
ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು
ಆಪತ್ತುಗಳ ಪರಿಹರಿಸುವ ನಮ್ಮ ಪುರಂದರವಿಠಲ ||

Sripatiya katakshavikshana tappuvaga
Aneka bandhugalu lakshavaidyarugalu
Iralagi kannukannu biduvaru
Tapasiyaranyadolage obba ontiyagiralu
Anjabedemdu namma kanjanabane bandu
Apattugala pariharisuva namma purandara vittala||


ಆವಾವ ಯುಗದಲಿ ವಿಷ್ಣುವ್ಯಾಪಕನಾಗಿ
ವಿಷ್ಣು ಇದ್ದಲ್ಲಿ ವಿಷ್ಣು ಲೋಕಕಾಗಿಪ್ಪದಾಗಿ
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ
ಸಾದೃಶ್ಯಂಗಳು ಪಂಚವಿಧ ಮುಕುತಿದಾಯಕ
ಭರಿತ ನಮ್ಮ ಪುರಂದರವಿಠಲ ||

Avava yugadali vishnuvyapakanagi
Vishnu iddalli vishnu lokakagippadagi
Salokya sarupya samipya sayujya
Sadrusyangalu panchavidha mukutidayaka
Barita namma purandara vittala||


ಅಣುವಾಗಬಲ್ಲ ಮಹತ್ತಾಗಬಲ್ಲ
ಅಣು ಮಹತ್ತೆರಡೊಂದಾಗಬಲ್ಲ
ರೂಪನಾಗಬಲ್ಲ ಅರೂಪನಾಗಬಲ್ಲ
ರೂಪ ಅರೂಪ ಎರಡೊಂದಾಗಬಲ್ಲ
ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ
ಸುಗುಣ ನಿರ್ಗುಣ ಎರಡೊಂದಾಗಬಲ್ಲ
ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ
ವ್ಯಕ್ತ ಅವ್ಯಕ್ತ ಎರಡೊಂದಾಗಬಲ್ಲ
ಘಟಿತಾಘಟಿತಾಚಿಂತ್ಯಾದುಭುತ
ಸ್ವಗತ ಸ್ವರೂಪ ನಮ್ಮ ಪುರಂದರವಿಠಲ ||

Anuvagaballa mahattagaballa
Anu mahatteradondagaballa
Rupanagaballa arupanagaballa
Rupa arupa eradondagaballa
Sugunanagaballa nirgunanagaballa
Suguna nirguna eradondagaballa
Vyaktanagaballa avyaktanagaballa
Vyakta avyakta eradondagaballa
Gatitagatitacintyadubuta
Svagata svarupa namma purandara vittala||


ತಂದೆ ನಾ ತಂದೆ ನೀ ತಂದೆ ನಾ ಬಂದೆ
ಕಾಮದಲಿ ತಂದೆ ನೀ ಕ್ರೋಧದಲಿ ತಂದೆ
ತಾಮಸ ಕಡುಯೋನಿಯಲ್ಲಿ ನೀ ತಂದೆ ನಾ ಬಂದೆ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಭತ್ತನಾಲಕು ಲಕ್ಷ ಯೋನಿಯಲ್ಲಿ ನೀ ತಂದೆ ನಾ ಬಂದೆ
ಹಿಂದಿನ ಜನ್ಮ ಹೇಗಾದರಾಗಲಿ ಮುಂದೆನ್ನ ಸಲಹೊ ಪುರಂದರವಿಠಲ ||

Tande na tande ni tande na bande
Kamadali tande ni krodhadali tande
Tamasa kaduyoniyalli ni tamde na bande
Ondalla eradalla muralla nalkalla
Embattanalaku laksha yoniyalli ni tande na bande
Hindina janma hegadaragali mundenna salaho purandara vittala||


ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು
ಬಯಲೆಂದು ಬಗೆವನೆ ಬ್ರಹ್ಮಹತ್ಯಗಾರ
ಅಗಣಿತಗುಣ ನೀನು, ನಿನ್ನ ಗುಣಗಳಿಂತೆಂದು
ಬಗೆವನೆ ಜಗದೊಳಗೆ ಸ್ವರ್ಣಸ್ತೇಯಿ
ನೀ ಸೇವ್ಯ ಜಗದೊಡೆಯ ನೀನಿರಲು
ಅನ್ಯದೇವರೊಡೆಯನೆಂದು
ಬಗೆವನೆ ಜಗದೊಳಗೆ ಮದ್ಯಪಾನಿ
ಜಗದ ತಂದೆ ನೀನು , ನಿನ್ನ ದಾಸನೆನ್ನದೆ
ನೀನು ತಾನೆಂದು ಬಗೆವವ ಜಗದೊಳಗೆ ಗುರುತಲ್ಪಗ
ಇವರ ಸಂಸರ್ಗಿ ತತ್ಸಂಯೋಗಿಗಳು
ಇವರು ಪಂಚಮಹಾಪಾತಕಿಗಳು
ಇದರ ಕಾರಣದಿಂದ ನೀ ಸತ್ಯ ನೀ ಸತ್ಯ ನೀ ಸೇವ್ಯ
ಅಗಣಿತಗುಣಗಣನಿಲಯ ನೀನೆ
ತಂದೆ ಜಗದಂತರ್ಯಾಮಿ ನೀನು
ನಿನ್ನ ದಾಸರ ಸಂಗ ಸಕಲ ಸುಖಸಂಪದವು
ನಂಬಿದೆನೊ ಸಲಹೋ ಪುರಂದರವಿಠಲರೇಯ ಅಯ್ಯಯ್ಯ ಅಯ್ಯ ||

Jagadantaryami ninu, ninna bittu
Bayalendu bagevane brahmahatyagara
Aganitaguna ninu, ninna gunagalimtendu
Bagevane jagadolage svarnasteyi
Ni sevya jagadodeya niniralu
Anyadevarodeyanendu
Bagevane jagadolage madyapani
Jagada tande ninu , ninna dasanennade
Ninu tanendu bagevava jagadolage gurutalpaga
Ivara samsargi tatsamyogigalu
Ivaru pancamahapatakigalu
Idara karanadinda ni satya ni satya ni sevya
Aganitagunagananilaya nine
Tande jagadantaryami ninu
Ninna dasara sanga sakala sukasampadavu
Nambideno salaho purandaravithalareya ayyayya ayya ||


ಹರಿಸರ್ವೋತ್ತಮನೆಂಬೊ ಹಿರಿಪುತ್ರನಿರಲಾಗಿ
ಈ ನರಪುತ್ರರಿಂದ ಆಹೋದೇನಯ್ಯ
ಪದ್ಮನಾಭನೆಂಬೊ ದೊಡ್ಡ ಪುತ್ರನಿರಲಾಗಿ
ಈ ದಡ್ಡಪುತ್ರನಿಂದಲಿ ಆಗೊ ಗತಿಯೇನಯ್ಯ
ಶ್ರೀಕೇಶವನೆಂಬೊ ಜ್ಯೇಷ್ಠಪುತ್ರನಿರಲಾಗಿ
ಈ ನಷ್ಟಪುತ್ರರಿಂದಲಾಗೋ ಗತಿಯೇನಯ್ಯ
ಪುರಂದರವಿಠಲನೆಂಬೊ ಪುಣ್ಯಪುತ್ರನಿರಲಾಗಿ
ಅನ್ಯಪುತ್ರರಿಂದಲಿ ಆಗೊ ಗತಿಯೇನಯ್ಯ ||

Harisarvottamanembo hiriputraniralagi
I naraputrarinda ahodenayya
Padmanabanembo dodda putraniralagi
I daddaputranindali Ago gatiyenayya
Srikesavanembo jyeshthaputraniralagi
I nashtaputrarindalago gatiyenayya
Purandaravithalanembo punyaputraniralagi
Anyaputrarindali Ago gatiyenayya ||


ತುಲಸಿಯಿರಲು ತುರುಚಿಯನು ತರುವಿರೊ
ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ
ರಾಜಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾಲೆರೆದೆ
ಬಾವನವಿರಲು ಬೇಲಿನ ನೆಳಲೊರಗಿದೆ
ತಾಯಿ ಮಾರಿ ತೊತ್ತ ತರುವ ಮಾನವನಂತೆ
ಪುರಂದರವಿಠಲ ನೀನಿರಲನ್ಯತ್ರ ದೈವಂಗಳ ಎಣಿಸಿದೆ ||

Tulasiyiralu turuciyanu taruviro
Gangeyiralu todida kupadi panava madide
Rajahamsaviralu koyendu kuguva kolige halerede
Bavanaviralu belina nelaloragide
Tayi mari totta taruva manavanante
Purandara vittalaniniralanyatra daivangala eniside ||


ಹುಟ್ಟುವ ಭೀತಿ ಹೊಂದುವ ಭೀತಿ
ವಿಟ್ಠಲನಂಘ್ರಿಯ ನೆನೆಯದವರಿಗೆ
ಕಾಲನ ಭೀತಿ ಕರ್ಮದ ಭೀತಿ ಗೋ-
ಪಾಲನ ದಾಸನಾಗದವನಿಗೆ |
ಅರಿಷಡ್ವರ್ಗದ ಮಹಾಭೀತಿ ಶ್ರೀ-
ಹರಿನಾಮನುಚ್ಛರಿಸದವಗೆ
ಹಲವು ಮಾತಿನ್ನೇನು ಹಲವು ಭೀತಿ
ಚೆಲುವ ಪುರಂದರವಿಟ್ಠಲನ್ನ ಪೂಜಿಸದವಗೆ ||

Huttuva biti honduva biti
Vitthalanangriya neneyadavarige
Kalana biti karmada biti go-
Palana dasanagadavanige |
Arishadvargada mahabiti sri-
Harinamanuccarisadavage
Halavu matinnenu halavu biti
Celuva purandaravitthalanna pujisadavage ||


ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು
ದಿನಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು
ಬೆನ್ನ್ಹತ್ತಿ ರೋಗಗಳು ಹತ್ತಿ ಇರಲುಬೇಕು
ತನ್ನವರ ಕೈಯಿಂದ ಛೀಯೆನಿಸಿಕೊಳಬೇಕು
ಪನ್ನಗಶಯನ ಪುರಂದರವಿಠಲ ||

Ninna Baktarendenisida janaru bangapadalubeku
Dinapratidina anna udaka vastragalu kanade irabeku
Bennhatti rogagalu hatti iralubeku
Tannavara kaiyinda ciyenisikolabeku
Pannagasayana purandara vittala||


ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ
ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ
ನಿನ್ನ ಛತ್ರಚಾಮರ ಪಿಡಿದೇಳುವೆ
ನೀರು ನಿವಾಳಿಸಿಕೊಂಡು ಕೊಬ್ಬುವೆನು
ಬಿಡೆನು ಬಿಡೆನು ನಿನ್ನ ಚರಣಕಮಲವ
ಪುರಂದರವಿಠಲ ನಿನ್ನ ಪಾದವ ಬಿಡೆನು ||

Ninna kalhejjeya pididu na nilluve
Ninna panju hididu oddi bobbiduve
Ninna catrachamara pidideluve
Niru nivalisikondu kobbuvenu
Bidenu bidenu ninna caranakamalava
Purandara vittalaninna padava bidenu ||


ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ ಕಂ-
ಗೆಟ್ಟು ತುತಿಸಬೇಡ ಹರಿಯಲ್ಲದನ್ಯತ್ರ
ಕಷ್ಟ ಬೇಡ ಭೂಸುರರಲ್ಲಿ ದುಷ್ಟಜನರ ಸಂಗ ಬೇಡ
ಶ್ರೀ ಪುರಂದರವಿಠಲನಂಘ್ರಿಯ ನೆನೆಯುತಲಿರು
ಕಷ್ಟ ಬೇಡ ಭೂಸುರರಲ್ಲಿ ||

Muttabeda acyutagarpitavalladanna kan-
Gettu tutisabeda hariyalladanyatra
Kashta beda busuraralli dushtajanara sanga beda
Sri purandaravithalanangriya neneyutaliru
Kashta beda busuraralli ||


ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ
ಕಾಲಾಜಯಾದಿಗಳು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ
ಅವರಂತರಂತರ ಅವರ ನೋಡಯ್ಯ , ಅವರವರೆ ಅಧಿಕರಧಿಕರಯ್ಯ
ಪುರಂದರವಿಠಲನ ಸಂತತಿ ನೋಡಯ್ಯ , ಅವರವರೆ ಅಧಿಕರಧಿಕರಯ್ಯ ||

Adisrushtiyalaru modale udisidarenu , avaravare adhikaradhikarayya
Kalajayadigalu modale udisidarenu , avaravare adhikaradhikarayya
Avarantarantara avara nodayya , avaravare adhikaradhikarayya
Purandaravithalana santati nodayya , avaravare adhikaradhikarayya ||


ಅಪಾಯ ಕೋಟಿಕೋಟಿಗಳಿಗೆ
ಉಪಾಯ ಒಂದೆ ಹರಿಭಕ್ತರ ತೋರಿಕೊಟ್ಟು
ಉಪಾಯ ಒಂದೆ ಪುರಂದರವಿಠಲನೆಂದು
ಬೋವಿಟ್ಟು ಕರೆವ ಉಪಾಯ ಒಂದೆ ||

Apaya kotikotigalige
Upaya onde haribaktara torikottu
Upaya onde purandaravithalanendu
Bovittu kareva upaya onde ||


ಹರಿಗುರುಗಳಿಗೆರಗದೆ ಹರಿಭಕ್ತಿ ಎರಗದೆ
ಕೆರವ ತಿಂಬೊ ನಾಯಿಗೆ ತುಪ್ಪವಾಗ ಸೊಗಸುವುದೆ
ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ
ನರಕಭಾಜನನಿಗು ಪಾಮರರು ಕರಗುವರೆ
ಚಂದ್ರಕಿರಣಕೆ ಚಂದ್ರಕಾಂತಿ ಒಸರುವುದಲ್ಲದೆ
ಗೋರಿಕಲ್ಲು ಒಸರುವುದೆ ಸಿರಿಪುರಂದರವಿಠಲ ||

Harigurugaligeragade haribakti eragade
Kerava timbo nayige tuppavaga sogasuvude
Harinamakke haridasaru karaguvarallade
Narakabajananigu pamararu karaguvare
Candrakiranake candrakanti osaruvudallade
Gorikallu osaruvude siripurandara vittala||


ಸೂಸಲಾಸೆಗೆ ಪೋಗಿ ಬಡಿಗಲ್ಲಿನೊಳು ಸಿಕ್ಕಿದ
ಮೂಷಕನ ತೆರನಾದೆನೊ ಎಲೊ ದೇವ
ಹೇಸಿಕೆ ವಿಷಯಂಗಳಿಗೆ ಎರಗುತಿದೆ ಎನ್ನ ಮನ
ಘಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ
ವಾಸವಾರ್ಚಿತ ಗುರು ಪುರಂದರವಿಠಲ ನಿನ್ನ
ದಾಸರ ಸಂಗದೊಳು ಇರಿಸೆನ್ನ ಅನವರತ ಕ್ಲೇಶ ಕಳೆಯಯ್ಯ ||

Susalasege pogi badigallinolu sikkida
Mushakana teranadeno elo deva
Hesike vishayangalige eragutide enna mana
Gasiyadeno hrushikesa ni salahayya
Vasavarcita guru purandara vittalaninna
Dasara sangadolu irisenna anavarata klesa kaleyayya ||


ಸಕಲ ಶ್ರುತಿಪುರಾಣಗಳೆಲ್ಲ ದಾವನ ಮಹಿಮೆ
ಸುಖಪೂರ್ಣ ಸುರವರಾರ್ಚಿತ ಪಾದ
ಶಕಟಮರ್ದನ ಶಾರದೇಂದುವಕ್ತ್ರ
ರುಚಿಕರ ವರಕಲ್ಯಾಣರಂಗ
ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||

Sakala srutipuranagalella davana mahime
Sukapurna suravararcita pada
Sakatamardana saradenduvaktra
Rucikara varakalyanaranga
Rukminiramana paripurna namma purandara vittala||


ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ
ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ
ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ
ಅಕ್ಕಟಕಟ ನಿನ್ನ ದಾಸನಲ್ಲವೆ ನಾನು
ಸಿಕ್ಕು ಬಿಡಿಸಿ ನಿನ್ನ ಭಕುತಿಯ ತೋರಿಸೋ
ಪಕ್ಕದೊಳಗಿಟ್ಟು ಸಲಹೊ ಶ್ರೀಪುರಂದರವಿಠಲ ||

Markatana kainulu gukkariya teranante
Sikkikondu kamakrodhadigalenna
Hikki hirutalive Eke nodutalidyo
Akkatakata ninna dasanallave nanu
Sikku bidisi ninna Bakutiya toriso
Pakkadolagittu salaho sripurandara vittala||


ಒಂದೇ ಒಂದು ಬೆರಳ ಜಪ
ಒಂದೇ ಅಯಿದು ಗೆರೆಯ ಜಪ
ಒಂದೇ ಹತ್ತು ಪುತ್ರ ಜೀವಿಮಣಿಯ ಜಪ
ಒಂದೇ ನೂರು ಶಂಖದ ಮಣಿಯ ಜಪ
ಒಂದೇ ಸಾವಿರ ಹವಳದ ಜಪ
ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ
ಒಂದೇ ಲಕ್ಷ ಸುವರ್ಣಮಣಿಯ ಜಪ
ಒಂದೇ ಕೋಟಿ ದರ್ಭೆಗಂಟಿನ ಜಪ
ಒಂದೇ ಅನಂತ ಶ್ರೀತುಳಸಿಮಣಿಯ ಜಪವೆಂದು
ಪುರಂದರವಿಠಲ ಪೇಳ್ವ ||

Onde ondu berala japa
Onde ayidu gereya japa
Onde hattu putra jivimaniya japa
Onde nuru sankada maniya japa
Onde savira havalada japa
Onde hattu savira muttina maniya japa
Onde laksha suvarnamaniya japa
Onde koti darbegantina japa
Onde ananta sritulasimaniya japavemdu
Purandara vittalapelva ||


ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ
ಕರವ ಮುಗಿದು ಮಾಡೊ ಸಂಕಲ್ಪ ವೇದ
ಪರಮಪುಣ್ಯಾತ್ಮ ಬ್ರಾಹ್ಮಣಧರ್ಮವೆಂದು
ಪುರಂದರವಿಠಲ ಮೆಚ್ಚಿ ಪಾಲಿಸುವ |

Eradu galige belagu iralu gruhasthage snana
Karava mugidu mado sankalpa veda
Paramapunyatma brahmanadharmavendu
Purandara vittalamecci palisuva ||

ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ
ಮಲಕೆ ಸಮಾನ ಅದು ಶುದ್ಧವಲ್ಲ
ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು
ಒಲಿವ ಪುರಂದರವಿಠಲ ||

Mala mutra maduvaga karadalli jalavire
Malake samana adu Suddhavalla
Vilasita karmavacarisi hariya neneyu
Oliva purandara vittala||


ಗುರುಕರುಣ ಹೊಂದುವುದು ಪರಮದುರ್ಲಭವಯ್ಯ
ಪರಿಪರಿ ವ್ರತಗಳ ಚರಿಸಲು ಫಲವೇನು
ಶರೀರಾದಿ ಪುತ್ರ ಮಿತ್ರ ಕಳತ್ರ ಬಾಂಧವರು
ಇರಿಸೋರೆ ಸದ್ಗತಿಗೆ ಸಾಧನದಿ
ನಿರತವು ಗುರುಪಾದ ನಿಜವಾಗಿ ಮನದಲ್ಲರಿತು ಭಜಿಸಲು
ಅಖಿಳಸಂಪದವಕ್ಕು ಪುರಂದರವಿಠಲ ||

Gurukaruna honduvudu paramadurlabavayya
Paripari vratagala carisalu palavenu
Sariradi putra mitra kalatra bandhavaru
Irisore sadgatige sadhanadi
Niratavu gurupada nijavagi manadallaritu Bajisalu
Akilasampadavakku purandara vittala||


ಬೆನಕನನೊಲ್ಲೆನವ್ವ , ತುಲಕಿ ಆಡುವನ
ಷಣ್ಮುಖನನೊಲ್ಲೆನವ್ವ, ಬಹುಬಾಯಿಯವನ
ಇಂದ್ರನನೊಲ್ಲೆನವ್ವ , ಮೈಯೆಲ್ಲ ಕಣ್ಣನವ್ವ
ಚಂದ್ರನನೊಲ್ಲೆನವ್ವ , ಕಳೆಗುಂದುವವನ
ರವಿಯನೊಲ್ಲೆನವ್ವ , ಉರಿದು ಮೂಡುವನ
ಹರನನೊಲ್ಲೆನವ್ವ , ಮರುಳುಗೊಂಬುವನ
ಚೆನ್ನರಾಯ ಚೆಲುವ ಜಗಕೆಲ್ಲ ಒಡೆಯನ ಕರೆದು
ತಾರೆ ಎನಗೆ ಪುರಂದರವಿಠಲ||

Benakananollenavva , tulaki aduvana
Shanmukananollenavva, bahubayiyavana
Indrananollenavva , maiyella kannanavva
Candrananollenavva , kalegunduvavana
Raviyanollenavva , uridu muduvana
Harananollenavva , marulugombuvana
Cennaraya celuva jagakella odeyana karedu
Tare enage purandaravithala||


ಎಲ್ಲಾ ಒಂದೇ ಎಂಬುವರ ಎರಡು ದಾಡಿ ಸೀಳಿ
ಹಲ್ಲುದುರಕುಟ್ಟಬೇಕು ಹರಿಭಕ್ತರಾದವರು
ಸಲ್ಲದು ಸಲ್ಲದು ಈ ಮಾತು , ಸಂಶಯ ಬೇಡಿರೋ
ಕಲ್ಲ ನಾರಿಯ ಮಾಡಿದ ಶ್ರೀಪುರಂದರವಿಠಲ ||

Ella onde embuvara eradu dadi sili
Halludurakuttabeku haribaktaradavaru
Salladu salladu I matu , samsaya bediro
Kalla nariya madida sripurandara vittala||


ಉದಯಕಾಲದ ಜಪ ನಾಭಿಗೆ ಸರಿಯಾಗಿ
ಹೃದಯಕ್ಕೆ ಸರಿಯಾಗಿ ಮಧ್ಯಾಹ್ನದಿ
ವದನಕ್ಕೆ ಸಮನಾಗಿ ಸಾಯಂಕಾಲಕೆ ನಿತ್ಯ
ಪದುಮನಾಭ ತಂದೆ ಪುರಂದರವಿಠಲಗೆ
ಇದೇ ಗಾಯತ್ರಿಯಿಂದ ಜಪಿಸಬೇಕೊ ||

Udayakalada japa nabige sariyagi
Hrudayakke sariyagi madhyahnadi
Vadanakke samanagi sayankalake nitya
Padumanaba tande purandaravithalage
Ide gayatriyinda japisabeko ||


ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ
ಕುನ್ನಿ ಮಾನವನು ನಾನೇನು ಬಲ್ಲೇನು
ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ
ಎನ್ನನುದ್ಧರಿಸಯ್ಯ ಪುರಂದರವಿಠಲ ||

Ennamma siridevi innu ariyalu mahime
Kunni manavanu nanenu ballenu
Pannagadrinilayane pavanamurti krushna
Ennanuddharisayya purandara vittala||


ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸನ್ನ ಯಾಮ್ಯರು ಎಳೆವರೆಂಬ ಅಪಕೀರ್ತಿಯನ್ನು
ಪರಿಹರಿಸಿಕೊಳ್ಳೊ ಶ್ರೀಪುರಂದರವಿಠಲ ||

Enage ninnalli Bakti irali illadirali
Haridasanendenna karevaru sajjanaru
Haridasanna yamyaru elevaremba apakirtiyannu
Pariharisikollo sripurandara vittala||


ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ
ಪುರುಷರಿಗೆ ಪುರುಷರು ಮೋಹಿಸುವರುಂಟೆ
ಹರಿ ಪರಮಪುರುಷ ಪುರುಷೋತ್ತಮ
ಪುರುಷ ಬ್ರಹ್ಮಾದಿಗಳು ನಿನಗೆ ಮೋಹಿಸುವರು
ತಿರುವೇಂಗಳಪ್ಪ ಸಿರಿಪುರಂದರವಿಠಲ
ಧರೆಯೊಳು ನೀನು ಮೋಹನರೂಪ ಕಾಣೊ ||

Striyarige purusharu mohisuvarallade
Purusharige purusharu mohisuvarunte
Hari paramapurusha purushottama
Purusha brahmadigalu ninage mohisuvaru
Tiruvengalappa siripurandaravithala
Dhareyolu ninu mohanarupa kano ||


ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು
ಭಕುತಿಸಾಧನವಲ್ಲದನ್ಯ ಸಾಧನವುಂಟೆ
ಭಕುತಿಗಭಿಮಾನಿ ಭಾರತಿಯ ಕರುಣದಿಂ
ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ
ಅಖಿಳೇಶ ಪುರಂದರವಿಠಲ ತಾನೊಲಿವ ||

Sakala sadhanakella siddhigolisuvudu
Bakutisadhanavalladanya sadhanavunte
Bakutigabimani baratiya karunadim
Mukutige pathavendu manavittu Bajisiro
Akilesa purandara vittalatanoliva ||


ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ
ಅಚ್ಯುತನೆ ಕಾಯೊ , ಅನಂತನೆ ತೆಗೆಯೊ
ಗೋವಿಂದ ಹರಿ ಪೊರೆಯೊ ಪುರಂದರವಿಠಲ
ನೀ ಕರುಣವುಳ್ಳವನು ಕಾಣೊ ||

Kiccinolage bidda kitakanu nanayya
Acyutane kayo , anantane tegeyo
Govinda hari poreyo purandaravithala
Ni karunavullavanu kano ||


ಎಲ್ಲಿ ಹರಿಕಥೆಯ ಪ್ರಸಂಗ
ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು
ವಲ್ಲಭ ಪುರಂದರವಿಠಲನೊಪ್ಪಿದನು ||

Elli harikatheya prasanga
Alli gange yamune godavari sindhu
Ella tirthavu bandu eneyagi nindiralu
Vallaba purandaravithalanoppidanu ||


ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ
ಮನೆವಾರತೆಯು ಎನ್ನ ಭಂಗಪಡಿಸುತಿದೆ
ಸುತರಾಸೆಯು ಎನ್ನ ದೈನ್ಯಬಡಿಸುತಿದೆ
ಇನಿತಾಸೆಯುಳಿದು ಬುದ್ಧಿ ನಿನ್ನಲ್ಲಿ
ನಿಲುವಂತೆ ಮಾಡೊ ಸಿರಿಪುರಂದರವಿಠಲ ||

Maneyemba Aseyu enna mundugedisutide
Manevarateyu enna bangapadisutide
Sutaraseyu enna dainyabadisutide
Initaseyulidu buddhi ninnalli
Niluvante mado siripurandara vittala||


ಅನುಕೂಲವಿಲ್ಲದ ಸತಿಯ ವರ್ಜಿಸಬೇಕು
ವಿನಯದಿ ಗುರುಹಿರಿಯರ ಪೂಜಿಸಬೇಕು
ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು
ವನಜನಾಭನ ದಾಸರ ಸಂಗವಿರಬೇಕು
ನೆನೆಯುತಲಿರಬೇಕು ಪುರಂದರವಿಠಲನ ||

Anukulavillada satiya varjisabeku
Vinayadi guruhiriyara pujisabeku
Manake barada thavu bittu tolagabeku
Vanajanabana dasara sangavirabeku
Neneyutalirabeku purandaravithalana ||


ಏನು ಓದಿದರೇನು ಏನು ಕೇಳಿದರೇನು
ಹೀನ ಗುಣಗಳ ಹಿಂಗದ ಜನರು
ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ
ನೀನೆ ಸಲಹಬೇಕೊ ಪುರಂದರವಿಟ್ಠಲ ||

Enu odidarenu Enu kelidarenu
Hina gunagala hingada janaru
Manabimanava ninagoppisida mele
Nine salahabeko purandaravitthala ||


ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ
ನಿರ್ಬಂಧವಿಲ್ಲದ ತನ್ನಿಚ್ಛೆಯೊಳಿದ್ದು
ಲಭ್ಯವಾದೊಂದು ತಾರಕ ಸಾಕುಸಾಕು ಎನಗೆ
ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟ ಗರ್ಭಿ
ಕರುಣಾಕರ ಪುರಂದರವಿಠಲ ಲಭ್ಯ
ಒಂದು ತಾರಕ ಸಾಕು ಸಾಕು ||

Obbara bantanagi kala kalevudakkinta
Nirbandhavillada tannicceyoliddu
Labyavadondu taraka sakusaku enage
Abbara ollenayya ashtaralle santushta garbi
Karunakara purandara vittalalabya
Ondu taraka saku saku ||


ಕಾಲ ಮೇಲೆ ಮಲಗಿ ಸಿಂಪಿಲಿ ಹಾಲ ಕುಡಿದು ಬೆಳೆದೆ
ಮೂರು ಲೋಕವು ನಿನ್ನುದರದಲ್ಲಿರಲು
ಇರೇಳು ಲೋಕವನೀರಡಿ ಮಾಡಲು
ಮೂರುಲೋಕದೊಡೆಯ ಶ್ರೀಪುರಂದರವಿಟ್ಠಲ ನಿನ
ಬಾಲಕತನದ ಲೀಲೆಗೆ ನಮೋ ನಮೋ ||

Kala mele malagi simpili hala kudidu belede
Muru lokavu ninnudaradalliralu
Irelu lokavaniradi madalu
Murulokadodeya sripurandaravitthala nina
Balakatanada lilege namo namo ||


ಶ್ರವಣದಿಂದ್ಹೋಯಿತು ಬ್ರಹ್ಮಹತ್ಯಾ ಪಾಪವು
ಸ್ಮರಣೆಯಿಂದ್ಹೋಯಿತು ಸೇರಿದ್ದ ಪಾಪವು
ಎಲ್ಲಿದ್ದ ಅಜಮಿಳ ಎಲ್ಲಿತ್ತು ವೈಕುಂಠ
ಕೊಟ್ಟಾತನೆ ಬಲ್ಲ ಪುರಂದರವಿಠಲ ||

Sravanadind~hoyitu brahmahatya papavu
Smaraneyind~hoyitu seridda papavu
Ellidda ajamila ellittu vaikuntha
Kottatane balla purandara vittala||


ಮಾರಿಯ ಕೈಯಿಂದ ನೀರ ತರಿಸುವರು
ಮಸಣಿಯ ಕೈಯಿಂದ ಕಸವ ಬಳಿಸುವರು
ಮೃತ್ಯುವಿನ ಕೈಯಿಂದ ಭತ್ತವ ಕುಟ್ಟಿಸುವರು
ಜವನವರ ಕೈಯಿಂದ ಜಂಗುಲಿಯ ಕಾಯಿಸುವರು
ಪುರಂದರವಿಠಲನ ದಾಸರು ಸರಿಬಂದ ಹಾಗಿಹರು ಭೂಮಿಯ ಮೇಲೆ ||

Mariya kaiyinda nira tarisuvaru
Masaniya kaiyinda kasava balisuvaru
Mrutyuvina kaiyinda Battava kuttisuvaru
Javanavara kaiyinda janguliya kayisuvaru
Purandaravithalana dasaru saribanda hagiharu bumiya mele ||


ತಾಯಿ ಗೋಪಿಯಂತೆ ನಿನ್ನ ಒರಳನೆಳೆಸಲಿಲ್ಲ
ವಾಲಿಯಂತೆ ಎದುರು ವಾದಿಸುತಿರಲಿಲ್ಲ
ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ
ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ
ಕೊಂಕಣಿಗರ ಎಮ್ಮೆಗೆ ಕೊಡತಿಯೆ ಮದ್ದೆಂದು
ಅವರೆ ಮದ್ದು ನಿನಗೆ ಪುರಂದರವಿಠಲ ||

Tayi gopiyamte ninna oralanelesalilla
Valiyante eduru vadisutiralilla
Brugumuniyante ninna edeya tuliyalilla
Bishmanante ninna hane odeyalilla
Konkanigara emmege kodatiye maddendu
Avare maddu ninage purandara vittala||


ಏಳುತ್ತ ಗೋವಿಂದಗೆ ಕೈಯ ಮುಗಿವೆ
ಕಣ್ಣಲಿ ತೆಗೆದು ನೋಡುವೆ ಶ್ರೀಹರಿಯ
ನಾಲಿಗೆ ತೆಗೆದು ನಾರಾಯಣ ನರಹರಿ
ಸೋಳಸಾಸಿರ ಗೋಪಿಯರರಸ
ಎನ್ನಾಳುವ ಧೊರೆಯೆ ಪುರಂದರವಿಠಲ ||

Elutta govindage kaiya mugive
Kannali tegedu noduve srihariya
Nalige tegedu narayana narahari
Solasasira gopiyararasa
Ennaluva dhoreye purandara vittala||


ಕೋಳಿಗೆ ಏತಕ್ಕೆ ಹೊನ್ನುಪಂಜರವು
ಬೋಳಿಗೆ ಏತಕ್ಕೆ ಜಾಜಿಮಲ್ಲಿಗೆ ದಂಡೆ
ಆಳಿಲ್ಲದವಗೆ ಅರಸುತನವೇಕೆ
ಮಾಳಿಗೆ ಮನೆಯು ಬಡವಗಿನ್ನೇಕೆ
ನಿನ್ನ ಊಳಿಗ ಮಾಡದವನ ಬಾಳು ಇನ್ನೇತಕೆ
ಕೇಳಯ್ಯ ದೇವ ಪುರಂದರವಿಠಲ ||

Kolige Etakke honnupanjaravu
Bolige Etakke jajimallige dande
Alilladavage arasutanaveke
Malige maneyu badavaginneke
Ninna uliga madadavana balu innetake
Kelayya deva purandara vittala||


ಮಾತಾಪಿತರು ನಿನಗಂದೆ ಮಾರಿದರೆನ್ನ
ನಾಥನೆ ನೀನೆನ್ನ ಸಲಹದಿದ್ದರೆ ದೇವ
ಏತಕೆ ಭಕ್ತವತ್ಸಲನೆನಿಸಿಕೊಂಡೆ
ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ
ಸಾತ್ವಿಕ ದೈವವೆ ಸಲಹೊ ಎನ್ನ
ಪ್ರಖ್ಯಾತಪುರುಷ ಶ್ರೀಪುರಂದರವಿಠಲ ||

Matapitaru ninagande maridarenna
Nathane ninenna salahadiddare deva
Etake baktavatsalanenisikomde
Na tadeyeno ninna birudiganjuvanalla
Satvika daivave salaho enna
Prakyatapurusha sripurandara vittala||


ಕಾಳೀಯನಂತೆ ಕಟ್ಟಿ ಬಿಗಿಯಬೇಕು
ಬಲಿಯಂತೆ ನಿನ್ನ ಬಾಗಿಲ ಕಯಿಸಲಿಬೇಕು
ಕುಬ್ಜೆಯಂತೆ ನಿನ್ನ ರಟ್ಟುಬುತ್ತು ಮಾಡಿ
ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು
ಪುರಂದರವಿಠಲ ನಿನ್ನ ಅಟಿಮುಟ್ಟಿ ಹಾಕೆಂದರೆ
ಪುಟ್ಟದು ರವಿ ತಿರಿತಿಂಬಂತೆ ಮಾಡುವೆ ||

Kaliyanante katti bigiyabeku
Baliyante ninna bagila kayisalibeku
Kubjeyante ninna rattubuttu madi
Munjeraga pididu gumbe hakisabeku
Purandara vittalaninna atimutti hakendare
Puttadu ravi tiritimbante maduve ||


ಬಲಿಯಂತೆ ಮುಕುಟವ ಕದ್ದುಕೊಂಡೋಡಬೇಕು
ವಾಲಿಯಂತೆ ನಿನ್ನ ಮೂದಲಿಸಬೇಕು
ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು
ಪುರಂದರವಿಠಲ ನಿನ್ನ ನಂಬಿರಬೇಕು

Baliyante mukutava kaddukondodabeku
Valiyante ninna mudalisabeku
Sugrivanante ninna lekkisadirabeku
Purandara vittalaninna nambirabeku


ಮನೋವಚನಗಳಲ್ಲಿ
ಕಾಯಕರ್ಮಗಳಲ್ಲಿ
ನೀನೇ ನೀನೇ ನೀನೇ
ಪುರಂದರವಿಠಲ

Manovacanagalalli
Kayakarmagalalli
Nine nine nine
Purandaravithala


ಕಾವ ದೈವವು ನೀನೆ ಕೈಮುಗಿವೆನು ನಾನು
ಕೈವಲ್ಯ ಫಲದಾತ ಕೇಶವನೆ ರಘುನಾಥ
ಯಾವ ದೈವಕಿನ್ನು ಈ ವೈಭವಗಳ ಕಾಣೆ
ರಾವಣಾಂತಕ ಶ್ರೀಪುರಂದರವಿಠಲ ||

Kava daivavu nine kaimugivenu nanu
Kaivalya paladata kesavane ragunatha
Yava daivakinnu I vaibavagala kane
Ravanantaka sripurandara vittala||


ಸಿರಿ ಚತುರ್ಮುಖ ಸುರರು
ಮನು ಮುನಿಗಳು
ಮನುಜೋತ್ತಮರು
ತಾರತಮ್ಯಯುಕ್ತರು
ಪುರಂದರವಿಠಲನ ಸದಾಶರಣರು ||

Siri caturmuka suraru
Manu munigalu
Manujottamaru
Taratamyayuktaru
Purandaravithalana sadasaranaru ||


ನಿನ್ನ ನಾಮಭಾಂಡಾರ ಕದ್ದ ಕಳ್ಳನು ನಾನು
ನಿನ್ನ ಭಕುತಿಯೆಂಬ ಸಂಕೋಲೆಯನಿಕ್ಕಿ
ನಿನ್ನ ದಾಸರ ಕೈಯಲ್ಲಿ ಒಪ್ಪಿಸಿಕೊಟ್ಟು
ನಿನ್ನ ಮುದ್ರಿಕೆಯಿಂದ ಕಾಸಿ ಬಡೆಸು ದೇವ
ನಿನ್ನ ವೈಕುಂಠದುರ್ಗದೊಳಗೆನ್ನ ಸೆರೆಯನಿಟ್ಟು
ಸಲಹೊ ಶ್ರೀ ಪುರಂದರವಿಠಲ ||

Ninna namabandara kadda kallanu nanu
Ninna bakutiyemba sankoleyanikki
Ninna dasara kaiyalli oppisikottu
Ninna mudrikeyinda kasi badesu deva
Ninna vaikunthadurgadolagenna sereyanittu
Salaho sri purandara vittala||


ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು
ನಾನು ಒದರಲು ಈಗ ಕೇಳದಿದ್ದದ್ದೇನು
ದಾನವಾಂತಕ ದೀನರಕ್ಷಕ
ಮಾನವುಳಿಸಿಕೊಳ್ಳೊ ಶ್ರೀಪುರಂದರವಿಠಲ ||

Aneyanu kayidaga j~janaviddaddenu
Nanu odaralu Iga keladiddaddenu
Danavantaka dinarakshaka
Manavulisikollo sripurandara vittala||


ಹರಿ ನಿನ್ನ ಸ್ಮರಣೆಯ ಸ್ಮರಿಸಲು
ದುರಿತ ಪೀಡಿಪುದುಂಟೆ
ಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆ
ಕರುಣವರಿತು ತನ್ನ ಮಗನ ಕೂಗಿದವಗೆ
ಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ

Hari ninna smaraneya smarisalu
Durita pidipudunte
Aritu Bajiparigella kaivalyajoke
Karunavaritu tanna magana kugidavage
Maranakaladi odagide sripurandaravithala||


ಹೀನಮಾನವಯೋನಿಯಲಿ ಜನಿಸಿದೆನೊ ನಾನು
ಏನಾದರೇನು ದೀನದಯಾಸಾಗರನೆ
ಯೋನಿ ಎನ್ನ ದೇಹ ಅನ್ನದಂತೆ ಮಾಡೊ
ನ್ಯಾಸವನು ಬೋಧಿಸಿ ಸಾನುರಾಗದಿ ಕಾಯೊ
ವೇಣುಧರ ವೇದಾಂತವೇದ್ಯ ನರಹರಿಯೆ
ಕಾನನದೊಳು ಕಣ್ಗೆ ಕಾಣದವ ಬಿದ್ದಂತೆ ನಾ ಬಿದ್ದೆ
ನೀ ಕಾಯೊ ಪುರಂದರವಿಠಲ ||

Hinamanavayoniyali janisideno nanu
Enadarenu dinadayasagarane
Yoni enna deha annadamte mado
Nyasavanu bodhisi sanuragadi kayo
Venudhara vedantavedya narahariye
Kananadolu kange kanadava biddante na bidde
Ni kayo purandara vittala||


ಅರ್ಭಕನ ತೊದಲುನುಡಿ ಅವರೆ ತಾಯಿತಂದೆ
ಉಬ್ಬಿ ಕೇಳುವರ್ಯಾರೊ ಉರಗೇಂದ್ರಶಯನ
ಕಬ್ಬು ನಾನಾಡಿದರು ತಾಳಿ ರಕ್ಷಿಸು ಎನ್ನ
ಕಬ್ಬುಬಿಲ್ಲನ ಪಿತ ಪುರಂದರವಿಠಲ ||

Arbakana todalunudi avare tayitande
Ubbi keluvaryaro uragendrasayana
Kabbu nanadidaru tali rakshisu enna
Kabbubillana pita purandara vittala||


ಅಣುರೇಣು ತೃಣದಲ್ಲಿ
ಪರಿಪೂರ್ಣನಾಗಿರುವ
ಗುಣವಂತನೆ ನಿನ್ನ ಮಹಿಮೆ
ಗಣನೆ ಮಾಡುವರಾರು
ಎಣಿಸಿ ನೋಡುವಳಿನ್ನು
ಏಣಾಕ್ಷಿ ಸಿರಿದೇವಿ ಜ್ಞಾನಸುಗುಣತತ್ವ
ವೇಣುಗೋಪಾಲ ಹರೇ
ಕಾಣಿಸೊ ನಿನ್ನ ಮಹಿಮೆ , ಪುರಂದರವಿಠಲ ||

Anurenu trunadalli
Paripurnanagiruva
Gunavantane ninna mahime
Ganane maduvararu
Enisi noduvalinnu
Enakshi siridevi j~janasugunatatva
Venugopala hare
Kaniso ninna mahime , purandara vittala||


ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ
ಘಣಘಣ ಘಂಟೆ ಬಾರಿಸುತ
ತನುವಿನ ಕೋಪ ಹೊಲೆಯಲ್ಲವೇನಯ್ಯ
ಮನಸಿನ ವಂಚನೆ ಹೊಲೆಯಲ್ಲವೇನಯ್ಯ
ಇಂಥಾ ಹೊರಗಿದ್ದ ಹೊಲೆಯನ್ನ ಒಳಗೆ ತುಂಬಿಟ್ಟುಕೊಂಡು
ಇದಕ್ಕೇನು ಮದ್ದು ಶ್ರೀಪುರಂದರವಿಠಲ ||

Holeya bandanendu olage devara madi
Ganagana gante barisuta
Tanuvina kopa holeyallavenayya
Manasina vanchane holeyallavenayya
Intha horagidda holeyanna olage tumbittukondu
Idakkenu maddu sripurandara vittala||


ಉರಿಗಂಜೆ , ಸಿರಿಗಂಜೆ , ಶರೀರದ ಭಯಗಂಜೆ
ಪರಧನ ಪರಸತಿ ಎರದಕ್ಕಂಜುವೆನಯ್ಯ
ಹಿಂದೆ ಮಾಡಿದ ರಾವಣನೇನಾಗಿ ಪೋದನು
ಮುಂದೆನ್ನ ಸಲಹಯ್ಯ ಪುರಂದರವಿಠಲ

Uriganje , siriganje , sarirada Bayaganje
Paradhana parasati eradakkanjuvenayya
Hinde madida ravananenagi podanu
Mundenna salahayya purandaravithala


ಇಕ್ಕೋ ನಮ್ಮ ಸ್ವಾಮಿ , ಸರ್ವಾಂತರ್ಯಾಮಿ
ಪ್ರಕಟ ಸಹಸ್ರ ನೇಮಿ , ಭಕ್ತಜನಪ್ರೇಮಿ
ವಳನೋಡಿ ನಮ್ಮ
ಹೊಳೆವ ಪರಬ್ರಹ್ಮ-ನರಿಯಬೇಕು ವರ್ಮ
ವಸ್ತುವಿನ ನೋಡಿ , ಸಮಸ್ತಮನ ಮಾಡಿ
ಅಸ್ತವಸ್ತು ಬೇಡಿ , ಸಮಸ್ತ ನಿಚಗೂಡಿ
ಮಾಡು ಗುರುಧ್ಯಾನ
ಮುದ್ದು ಪುರಂದರವಿಠಲನ ಚರಣವ ||

Ikko namma svami , sarvantaryami
Prakata sahasra nemi , baktajanapremi
Valanodi namma
Holeva parabrahma-nariyabeku varma
Vastuvina nodi , samastamana madi
Astavastu bedi , samasta nicagudi
Madu gurudhyana
Muddu purandaravithalana caranava ||


ಹಗಲು ನಾಲ್ಕು ಝಾವ ಹಸಿವನು ಕಳೆದೆನೊ
ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ
ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ
ಕೇಲಯ್ಯ ತಂದೆ ಶ್ರೀಪುರಂದರವಿಠಲ ||

Hagalu nalku java hasivanu kaledeno
Irulu nalku java vishayakke kudideno
Vyarthavayitalla I samsarasukavella
Kelayya tande sripurandara vittala||


ತಿಂಬರೆ ಅನ್ನ ಹುಟ್ಟಲುಬೇಡ
ಅನ್ನ ಹುಟ್ಟಿದರೆ ಬಟ್ಟೆ ದೊರಕಲುಬೇಡ
ಬಟ್ಟೆ ದೊರಕಿದರೆ ಇಂಪು ತೋರಲುಬೇಡ
ಇಂಪು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ
ಇಂದಿರಾರಾಧ್ಯ ಶ್ರೀ ಪುರಂದರವಿಠಲ ||

Timbare anna huttalubeda
Anna huttidare batte dorakalubeda
Batte dorakidare impu toralubeda
Impu ninna padaravindadali santosha torisayya
Indiraradhya sri purandara vittala||


ಎರಗಿ ಭಜಿಪೆನೊ ನಿನ್ನ
ಚರಣಸನ್ನಿಧಿಗೆ
ಕರುಣದಿಂದಲಿ ನಿನ್ನ
ಸ್ಮರಣೆಯನು ಎನಗಿತ್ತು
ಮರೆಯದೆ ಸಲಹೊ ಶ್ರೀ-
ಪುರಂದರವಿಠಲ ||

Eragi Bajipeno ninna
Caranasannidhige
Karunadindali ninna
Smaraneyanu enagittu
Mareyade salaho sri-
Purandara vittala||


ಎನ್ನ ಕಡೆಹಾಯಿಸುವುದು ನಿನ್ನ ಭಾರ , ನಿನ್ನ ನೆನೆಯುತ್ತಲಿಹುದು ಎನ್ನ ವ್ಯಾಪಾರ
ಎನ್ನ ಸತಿಸುತರಿಗೆ ನೀನೇ ಗತಿ , ನಿನ್ನನೊಪ್ಪಿಸುವುದು ಎನ್ನ ನೀತಿ
ಎನ್ನ ಪಡಿಯಕ್ಕಿ ಸಲಹುವುದು ನಿನ್ನ ಧರ್ಮ , ನಿನ್ನ ಅಡಿಗೆರಗುವುದು ಎನ್ನ ಕರ್ಮ
ಎನ್ನ ತಪ್ಪುಗಳನೆಣಿಸುವುದು ನಿನ್ನದಲ್ಲ , ನಿನ್ನ ಮರೆತು ಬದುಕುವುದು ಎನ್ನದಲ್ಲ
ನೀನಲ್ಲ ಇನ್ನಾರಿಗೆ ಮೊರೆಯಿಡುವೆ ಪುರಂದರವಿಠಲ ||

Enna kadehayisuvudu ninna bara , ninna neneyuttalihudu enna vyapara
Enna satisutarige nine gati , ninnanoppisuvudu enna niti
Enna padiyakki salahuvudu ninna dharma , ninna adigeraguvudu enna karma
Enna tappugalanenisuvudu ninnadalla , ninna maretu badukuvudu ennadalla
Ninalla innarige moreyiduve purandara vittala||


ದೇವದೇವರ ದೇವ
ಜಗತ್ರಯಂಗಳ ಕಾವ
ಭಾವಜಪಿತ ನಮ್ಮ
ಪುರಂದರವಿಠಲ

Devadevara deva
Jagatrayamgala kava
Bavajapita namma
Purandaravithala


ಸಿರಿವಿರಿಂಚಾದಿಗಳು ಅರಿಯದಂಥ ಮಹಿಮೆ
ಎಣಿಸಿ ಪಾಡುವುದಕ್ಕೆ ಅರ್ಹರ್ಯಾರೊ
ಅರವಿಂದದಳನಯನ ಶರಣೆಂದವರ ಕಾಯ್ವ
ಕರುಣಾಸಾಗರ ನಮ್ಮ ಪುರಂದರವಿಠಲ ||

Sirivirinchadigalu ariyadantha mahime
Enisi paduvudakke arharyaro
Aravindadalanayana saranendavara kayva
Karunasagara namma purandara vittala||


ಪ್ರಸನ್ನರಕ್ಷಕ ನೀನು ಪಾಲಿಸೊ, ನಿನ್ನವನು ನಾನು
ಉಪಸಾಧನವರಿಯೆನೊ ಒಮ್ಮೆ ನಿನ್ನ ನೆನೆವೆನು
ಅಪರಾಧಿಗಾದಡೇನು , ಅಭಯಪ್ರದನು ನೀನು
ವಿಪರೀತ ಮಾಡದೆನ್ನನು ಪುರಂದರವಿಠಲ ನಂಬಿದೆನೊ ||

Prasannarakshaka ninu paliso, ninnavanu nanu
Upasadhanavariyeno omme ninna nenevenu
Aparadhigadadenu , abayapradanu ninu
Viparita madadennanu purandara vittalanambideno ||


ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ
ಏನು ನೋಡಿದರೇನು , ಏನು ಕೇಳಿದರೇನು
ಮನದೊಳಗಿನ ತಾಮಸ ಮಾಣದನ್ನಕ
ಕೊಳಲ ಧ್ವನಿಗೆ ಸರ್ಪ ತಲೆದೂಗುವಂದದಿ
ಇದಕೇನು ಮದ್ದು ಶ್ರೀಪುರಂದರವಿಠಲ ||

Bellada katteya katti bevina bijava bitti
Jenu malegaredare visha hoguvudenayya
Enu nodidarenu , Enu kelidarenu
Manadolagina tamasa manadannaka
Kolala dhvanige sarpa taleduguvandadi
Idakenu maddu sripurandara vittala||


ಪರಮಾನಂದವು ಹರಿಗೆ
ಪರಮಾನಂದವು ಸಿರಿಗೆ
ಪರಮಾನಂದವು ನಮ್ಮ
ಪುರಂದರವಿಠಲರಾಯನಿಗೆ ||

Paramanandavu harige
Paramanandavu sirige
Paramanandavu namma
Purandaravithalarayanige ||


ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ
ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ
ಈ ಎರಡರ ಬಾಧೆಗೆ ನಾನೊಳಗಾದೆನೊ
ಸಲಹೊ ಪುರಂದರವಿಠಲ ಪುರಂದರವಿಠಲ ||

Hagalu ninna neneyalilla hasivu trusheyinda
Irulu ninna neneyalilla nidrebaradinda
I eradara badhege nanolagadeno
Salaho purandara vittalapurandara vittala||


ಮರವಿದ್ದರೇನಯ್ಯ ನೆರಳಿಲ್ಲದನಕ
ನೆರಳಿದ್ದರೇನಯ್ಯ ನೀರಿಲ್ಲದನಕ
ನೀರಿದ್ದು ಫಲವೇನು ಕೊಡುವ ಮನವಿಲ್ಲದನಕ
ಮನವಿದ್ದರೆ ಫಲವೇನು ಜ್ಞಾನವಿಲ್ಲದನಕ
ದೇವ ಪುರಂದರವಿಠಲರಾಯನ
ಊಳಿಗ ಮಾಡದವನ ಬಾಳುವೆಯೇತಕೆ

Maraviddarenayya neralilladanaka
Neraliddarenayya nirilladanaka
Niriddu palavenu koduva manavilladanaka
Manaviddare palavenu j~janavilladanaka
Deva purandaravithalarayana
Uliga madadavana baluveyetake


ಮುಗುಳುನಗೆ ಕಲ್ಲಮೇಲಿದ್ದರೇನು
ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು
ಕಡೆಗೆ ಹಾಕುವರ್ಯಾರಯ್ಯ
ಬಿಡಿಸೊ ಬಿಡಿಸೊ ನಿನ್ನ ಚರಣಕಮಲವನ್ನು
ಎನ್ನೊಡೆಯ ಪುರಂದರವಿಠಲರೇಯ ||

Mugulunage kallameliddarenu
Jagadolage varidhi mere tappidarenu
Kadege hakuvaryarayya
Bidiso bidiso ninna caranakamalavannu
Ennodeya purandaravithalareya ||


ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ , ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯ
ಜಗಕೆ ಬಲ್ಲಿದ ನೀನು , ನಿನಗೆ ಬಲ್ಲಿದ ನಾನು
ಮೂರು ಜಗವು ನಿನ್ನೊಳಗೆ , ನೀನು ನನ್ನೊಳಗೆ
ಕರಿಯು ಕನ್ನಡಿಯಲ್ಲಿ ಅಡಗಿಪ್ಪ ತೆರನಂತೆ
ಎನ್ನೊಳು ಅಡಗಿದೆಯೊ ಪುರಂದರವಿಠಲ ||

Jagava suttihudella ninna mayavayya , ninna suttihudella enna manavayya
Jagake ballida ninu , ninage ballida nanu
Muru jagavu ninnolage , ninu nannolage
Kariyu kannadiyalli adagippa teranante
Ennolu adagideyo purandara vittala||


ದಾಸನಾದವಗೆ ವೈಕುಂಠದಲ್ಲಿ ವಾಸ
ದಾಸನಾಗದವನೆಲ್ಲಿ ಪೋದರೆ ಭಾಗ
ದಾಸನೆಂದೆನಿಸಿದ ಭಾರತಿಯ ಗಂಡ
ಸತ್ಯಲೋಕವನಾಳ್ವ ಶೌಂಡ
ದಾಸರ ಹೃದಯದಿ ಮಿನುಗುವ
ಶ್ರೀಶ ವಾಸವಾದಿವಂದ್ಯ ದ್ವಿ-
ಸಾಸಿರಾಂಬಕ ಶರಣ್ಯ
ದಾಸರಿಗೊಲಿವ ಪುರಂದರವಿಠಲ ||

Dasanadavage vaikunthadalli vasa
Dasanagadavanelli podare baga
Dasanendenisida baratiya ganda
Satyalokavanalva saumda
Dasara hrudayadi minuguva
Srisa vasavadivandya dvi-
Sasirambaka saranya
Dasarigoliva purandara vittala||


ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು
ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು
ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧ ಬಿಡಿಸಿದರು
ಹಿಂದೆ ನಿಂದಿಸಿದರೆ ಎನ್ನ ಬಂಧುಬಳಗ
ಬಾಯಿಬಡುಕರಿಂದ ನಾನು ಬದುಕಿದೆನೋ ಹರಿಯೆ |
ಕಾಡಿ ಕಾಡಿ ಕೈವಲ್ಯಪದವಿತ್ತರು
ಕಾಸು ಹುಟ್ಟದಂತೆ ಪ್ರಾಯಶ್ಚಿತ್ತ ಮಾಡಿದರು
ಮೀಸಲು ಮಾಡಿಸಿದರು ಹರಿಯ ಒಡವೆಯೆಂದು
ಲೇಸು ಕೊಡೊ ನಮ್ಮ ಪುರಂದರವಿಠಲನ್ನ
ದಾಸರ ದಾಸನೆಂದೆನಿಸಯ್ಯ ಹರಿಯೆ ||

Hangisi hangisi enage harinama nilisidaru
Bangisi Bangisi enage bayalase kedisidaru
Kangedisi kangedisi kamakrodha bidisidaru
Hinde nindisidare enna bandhubalaga
Bayibadukarinda nanu badukideno hariye |
Kadi kadi kaivalyapadavittaru
Kasu huttadante prayascitta madidaru
Misalu madisidaru hariya odaveyendu
Lesu kodo namma purandaravithalanna
Dasara dasanemdenisayya hariye ||


ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ, ಗೇಣು
ಹೊಟ್ಟೆಗಾಗಿ ಪರರ ಕಷ್ಟಪಡಿಸಲೇಕೊ
ಹುಟ್ಟಿಸಿದ ದೇವನು ಹುಲ್ಲು ಮೇಯಿಸುವನಲ್ಲ |
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ
ಘಟ್ಟ್ಯಾಗಿ ಸಲಹುವ ಪುರಂದರವಿಠಲ ||

Kettenendenaleko klesapaduvudeko, genu
Hottegagi parara kashtapadisaleko
Huttisida devanu hullu meyisuvanalla |
Bettada meliddarenu vanadoliddarenu
Srushti madida deva sthiti madalariyane
Gattyagi salahuva purandara vittala||


ನರವೃಂದ ಎಂಬೊ ಕಾನನದಲ್ಲಿ ಶ್ರೀ-
ಹರಿನಾಮವೆಂಬಂಥ ಕಲ್ಪವೃಕ್ಷ ಹುಟ್ಟಿತಯ್ಯ
ನೆರಳು ಸೇರಲುಂಟು ಫಲವು ಮೆಲ್ಲಲುಂಟು
ನಾಲಿಗೆಯಲಿ ನಾಮತ್ರಯಂಗಳುಂಟು
ಇದೇ ಮನುಜರ ಮನದ ಕೊನೆಯ ಠಾವು
ಇದು ಬ್ರಹ್ಮಾದಿಗಳ ಸದಮಲ ಹೃದಯ ಪೀಠ
ಇದೇ ದ್ವಾರಕೆ ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ಮಂದಿರ ||

Naravrunda embo kananadalli sri-
Harinamavembantha kalpavruksha huttitayya
Neralu seraluntu Palavu mellaluntu
Naligeyali namatrayangaluntu
Ide manujara manada koneya thavu
Idu brahmadigala sadamala hrudaya pitha
Ide dvarake ide kshirambudhi
Ide purandaravithalana mandira ||


ಅತ್ತೆ ಅತ್ತೆ ಅತ್ತೆಯೆಂದತ್ತೆ
ಅತ್ತೆ ಸತ್ತರೆ ಸೊಸೆ ಅಳುವಂತೆ ಆಯಿತು , ಅತ್ತೆ
ಅತ್ತೆ ಸತ್ತರೆ ಸೊಸೆಗೆ ಬುದ್ಧಿಯಾಯಿತು
ಅತ್ತೆ ಸತ್ತರೆ ಸೊಸೆಯರಿಗೆದೆಗಿಚ್ಚು ಹೋಯಿತೆಂದು , ಅತ್ತೆ
ಪುರಂದರವಿಠಲನ್ನ ಪಾದದಲ್ಲಿ ಭಕ್ತಿಯಿಲ್ಲದವರ ಮುಂದೆ ಪಾಡಿ ನಾನತ್ತೆ ||

Atte atte atteyendatte
Atte sattare sose aluvante Ayitu , atte
Atte sattare sosege buddhiyayitu
Atte sattare soseyarigedegiccu hoyitendu , atte
Purandaravithalanna padadalli Baktiyilladavara mumde padi nanatte ||


ದಾಸನಾಗುವುದಕ್ಕೆ ಏಸುಜನ್ಮದ ಸುಕೃತ
ಭಾಸುರ ರವಿಕೋಟಿ ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯ
ಲೇಸಾಗಿ ಕೊಡು ಕಂಡ್ಯ ಪುರಂದರವಿಠಲ ||

Dasanaguvudakke Esujanmada sukruta
Basura ravikoti srisa sugunavanta
Nasarahita ninna dasara dasya
Lesagi kodu kandya purandara vittala||


ನಿನ್ನ ಧ್ಯಾನವ ಕೊಡೊ , ಎನ್ನ ಧನ್ಯನ ಮಾಡೊ
ಪನ್ನಂಗಶಯನ ಶ್ರೀಪುರಂದರವಿಠಲ
ಅಂಬುಜನಯನನೆ ಅಂಬುಜಜನಕನೆ
ಅಂಬುಜನಾಭ ಶ್ರೀಪುರಂದರವಿಠಲ
ಪಂಕಜನಯನನೆ ಪಂಕಜಜನಕನೆ
ಪಂಕಜನಾಭ ಶ್ರೀಪುರಂದರವಿಠಲ
ಭಾಗೀರಥಿಪಿತ ಭಾಗವತರ ಪ್ರಿಯ
ಯೋಗಿಗಳರಸ ಶ್ರೀಪುರಂದರವಿಠಲ ||

Ninna dhyanava kodo , enna dhanyana mado
Pannangasayana sripurandara vittala
Ambujanayanane ambujajanakane
Ambujanaba sripurandara vittala
Pankajanayanane pankajajanakane
Pankajanaba sripurandara vittala
Bagirathipita bagavatara priya
Yogigalarasa sripurandara vittala||


ಎಂದಿಗಾದರು ನಿನ್ನ ಪಾದಾರ-
ವಿಂದವೆ ಗತಿಯೆಂದು ನಂಬಿದೆನೊ
ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು ,
ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು |
ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು
ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ
ಬಾರಿಬಾರಿಗೆ ನಿನ್ನ ಚರಣಕ್ಕೆ ಶರಣೆಂದೆ ಭಾರತಿರಮಣನೆ ಬಾರೊ ಮನೆಗಿಂದು
ತಂದೆ ಶ್ರೀಪುರಂದರವಿಠಲರಾಯನೆ ಎಂದೆಂದಿಗು ನೀನೆ ಜಗಕೆ ಬಂಧು

Endigadaru ninna padara-
Vindave gatiyendu nambideno
Bandhubalagava bittu bande ninna manegindu ,
Mandaradhara govinda purandaravithalane ni bandhu |
Anyarobbara kane mannisuvarenna apannarakshakane paripalisu
Innu pannamgasayana sri purandaravithalane
Baribarige ninna caranakke saranemde baratiramanane baro manegindu
Tande sripurandaravithalarayane endendigu nine jagake bandhu ||


ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಎಲ್ಲರೊಳಗೆ ವಿರೋಧಿಸಿದವ ಕೆಟ್ಟ
ಬಲ್ಲಿದರೊಡನೆ ಸೆಣಸಾಡುವವ ಕೆಟ್ಟ
ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ
ಪುಲ್ಲನಾಭ ನಮ್ಮ ಪುರಂದರವಿಠಲನ
ಮೆಲ್ಲಡಿ ನಂಬದವ ಕೆಟ್ಟ ನರಗೇಡಿ ||

Allada karmava Acarisidava ketta
Ellarolage virodhisidava ketta
Ballidarodane senasaduvava ketta
Lallematina satiya nambidava ketta
Pullanaba namma purandaravithalana
Melladi nambadava ketta naragedi ||


ಗುರಿಯ ನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲರಿಯದವನೆ ಮಾಸಾಳು
ಹರಿಯೆಂದು ಓದದೆಲ್ಲವು ಹಾಳು
ಪುರಂದರವಿಠಲ ಪಾರ್ಥನ ಮನೆಯಾಳು ||

Guriya neccavane billalu
Hariya Bajisalariyadavane masalu
Hariyendu Odadellavu halu
Purandara vittalaparthana maneyalu ||


ಇಂದಿನ ದಿನ ಶುಭದಿನ
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಕರಣ ಶುಭಕರಣ
ಇಂದಿನ ಯೋಗ ಶುಭಯೋಗ
ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ
ಪಾಡಿದ ದಿನವೆ ಶುಭದಿನವು

Indina dina subadina
Indina vara subavara
Indina tare subatare
Indina karana subakarana
Indina yoga subayoga
Indina lagna subalagna
Indu purandaravithalarayana
Padida dinave subadinavu


ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು |
ಆಯಸ್ಸು ಎಂಬೊ ರಾಸಿ ಅಳೆದು ಹೋಗದ ಮುನ್ನ |
ಹರಿಯ ಭಜಿಸಬೇಕು, ಮನಮುಟ್ಟಿ ಭಜಿಸಿದರೆ |
ತನಕಾರ್ಯವು ಘಟ್ಟಿ ||
ಹಾಗಲ್ಲದಿದ್ದರೆ ತಾಪತ್ರಯ ಬೆನ್ನಟ್ಟಿ
ವಿಧಿಯೊಳು ಗೆಯ್ವಾಗ ಹೋಗದಯ್ಯ ಕಟ್ಟಿ
ಪುರಂದರವಿಠಲನ ಕರುಣಾ ದೃಷ್ಟಿ
ಅವನ ಮೇಲಿದ್ದರೆ ಅವ ಜಗಜಟ್ಟಿ ||

Udaya astamanavembo eradu kolagavittu |
Ayassu embo rasi aledu hogada munna |
Hariya bajisabeku, manamutti Bajisidare |
Tanakaryavu gatti ||
Hagalladiddare tapatraya bennatti
Vidhiyolu geyvaga hogadayya katti
Purandaravithalana karuna drushti
Avana meliddare ava jagajatti ||


ಆನೆಯು ಕರೆದರೆ ಆದಿಮೂಲ ಬಂದಂತೆ |
ಅಜಾಮಿಳನು ಕರೆದರೆ ನಾರಾಯಣನು ಬಂದಂತೆ |
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ |
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |
ನಿನ್ನ ದಾಸರ ದಾಸನು ನಾ ಕರೆದರೆ |
ಎನ್ನ ಪಾಲಿಸಬೇಕು ಪುರಂದರ ವಿಠಲ |

Aneyu karedare adimula bandante |
Ajamilanu karedare narayananu bandante |
Adaviyalli dhruvaraya karedare vasudeva bandante |
Sabeyalli draupadi karedare srikrushna bandante |
Ninna dasara dasanu na karedare |
Enna palisabeku purandara vithala |


ಜಯ ಹರಿಯೊಂಬುದೆ ಸುದಿನವು
ಜಯ ಹರಿಯೆಂಬುದೆ ತಾರಾಬಲವು
ಜಯ ಹರಿಯೆಂಬುದೆ ಚಂದ್ರಬಲವು
ಜಯ ಹರಿಯೆಂಬುದೆ ವಿದ್ಯಾಬಲವು
ಜಯ ಹರಿಯೆಂಬುದೆ ದೈವಬಲವು
ಜಯ ಹರಿ ಪುರಂದರವಿಠಲನ
ಬಲವಯ್ಯಾ ಸುಜನರಿಗೆ ||

Jaya hariyombude sudinavu
Jaya hariyembude tarabalavu
Jaya hariyembude candrabalavu
Jaya hariyembude vidyabalavu
Jaya hariyembude daivabalavu
Jaya hari purandaravithalana
Balavayya sujanarige ||


ಗಜ ತುರಗ ಸಹಸ್ರದಾನ
ಗೋಕುಲ ಕೋಟಿ ದಾನ
ಭೂದಾನ, ಸಮುದ್ರಪರ್ಯಂತರ ದಾನ
ಪುರಂದರವಿಠಲನ ಧ್ಯಾನಕ್ಕೆ ಸಮವಿಲ್ಲ

Gaja turaga sahasradana
Gokula koti dana
Budana, samudraparyantara dana
Purandaravithalana dhyanakke samavilla


ಶ್ರವಣದಿಂದ ಹೋಯಿತು ಬ್ರಹ್ಮಹತ್ಯಾ ಪಾಪ
ಸ್ಮರಣೆಯಿಂದ ಹೋಯಿತು ಸೇರಿದ್ದ ಪಾಪವು
ಎಲ್ಲಿದ್ದ ಅಜಮಿಳ, ಎಲ್ಲಿತ್ತು ವೈಕುಂಠ
ಕೊಟ್ಟಾತನೇ ಬಲ್ಲ ಪುರಂದರವಿಠಲ

Sravanadinda hoyitu brahmahatya papa
Smaraneyinda hoyitu seridda papavu
Ellidda ajamila, ellittu vaikumtha
Kottatane balla purandaravithala


ತನುವೆಂಬ ದೊಡ್ಡ ದೋಣಿಯಲಿ
ಹರಿಯ ನಾಮವೆಂಬ ಭಾಂಡವ ತುಂಬಿ
ವ್ಯವಹಾರವನು ಮಾಡುವೆನಯ್ಯಾ
ಇಂದ್ರಿಯಗಳೆಂಬ ಸುಂಕಿಗರು ಅಡ್ದಾದರೆ
ಮುಕುಂದನ ಮುದ್ರೆಯ ತೋರಿ
ಹೊಳೆಯ ದಾಟುವೆನಯ್ಯಾ
ಪುರಂದರವಿಠಲನಲ್ಲಿಗೆ ಪೋಗಿ
ಮುಕುತಿ ಸುಖದ ಲಾಭವ ಪಡೆವೆ ನಾ ||

Tanuvemba dodda doniyali
Hariya namavemba bandava tumbi
Vyavaharavanu maduvenayya
Indriyagalemba sunkigaru addadare
Mukundana mudreya tori
Holeya datuvenayya
Purandaravithalanallige pogi
Mukuti sukada labava padeve na ||


ಧನದಾಸೆ ದೈನ್ಯ ಪಡಿಸುತಿದೆ
ವನಿತೆಯರಾಸೆ ಓಡಾಡಿಸುತಿದೆ
ಮನದಾಸೆ ಮಂತ್ರವ ಕೆಡಿಸುತಿದೆ
ಮನೆವಾರ್ತೆಯಾಸೆ ಮನವ ಬಾಧಿಸುತಿದೆ
ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ
ನೆನೆವಂತೆ ಮಾಡೊ ಪುರಂದರವಿಠಲ

Dhanadase dainya padisutide
Vaniteyarase odadisutide
Manadase mantrava kedisutide
Manevarteyase manava badhisutide
Initaraseya bidisi ninna caranangala
Nenevante mado purandaravithala


ಗುರಿಯನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲು ಅರಿಯದವ ಮಾಸಾಳು
ಹರಿಯೆಂದು ಓದದ ಓದೆಲ್ಲಾ ಹಾಳು
ಪುರಂದರವಿಠಲ ಪಾರ್ಥನ ಮನೆಯಾಳು

Guriyaneccavane billalu
Hariya Bajisalu ariyadava masalu
Hariyendu Odada odella halu
Purandara vittalaparthana maneyalu


ಒಬ್ಬರ ಭಂಟನಾಗಿ ಕಾಲ ಕಳೆವುದಕ್ಕಿಂತ
ನಿರ್ಬಂಧವಿಲ್ಲದೆ ತನ್ನಿಚ್ಚೆಯೊಳಿದ್ದು
ಲಭ್ಯವಾದೊಂದು ತಾರಕ ಸಾಕು ಸಾಕು
ಅಬ್ಬರವೊಲ್ಲೆನಯ್ಯ ಅಷ್ಟರಲ್ಲೆ
ಸಂತುಷ್ಟನಿಹೆನು ಕರುಣಾಕರ ಪುರಂದರವಿಠಲ

Obbara bantanagi kala kalevudakkinta
Nirbandhavillade tannicceyoliddu
Labyavadondu taraka saku saku
Abbaravollenayya ashtaralle
Samtushtanihenu karunakara purandaravithala


ಸಾಗರಗಡೆಯ ಮಾಡಿ ಧರೆಯ ಕೂರಿಗೆ ಮಾಡಿ |
ಹರಬ್ರಹ್ಮರೆಂಬೊ ಎರಡೆತ್ತು ಹೂಡಿ |
ನರರೆಂಬೊ ಬೀಜವ ಬಿತ್ತಿ ಧರೆಯೊಳಗೆ |
ಇಂದ್ರ ಬೆಳೆಸುವಾತ ಚಂದ್ರ ಕಳೆ ಕೀಳಿಸುವಾತ |
ಯಮರಾಯನಯ್ಯ ಬಿತ್ತಿದ ಬೆಳಸೆಲ್ಲ |
ಎತ್ತಿಕೊಂಡು ಹೋದಾಗ | ದುಃಖ
ಪಡಬೇಡೆಂದನು ಪುರಂದರ ವಿಠಲ ||

Sagaragadeya madi dhareya kurige madi |
Harabrahmarembo eradettu hudi |
Nararembo bijava bitti dhareyolage |
Indra belesuvata candra kale kilisuvata |
Yamarayanayya bittida belasella |
Ettikomdu hodaga | duhka
Padabedendanu purandara vithala ||


ಚೋರಗೆ ಚಂದ್ರೋದಯ ಸೊಗಸುವುದೇ
ಜಾರಗೆ ಸೂರ್ಯೋದಯ ಸೊಗಸುವುದೇ
ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ|

ನಾರಿಗೆ ನಯವಿಲ್ಲದ ಚೆಲುವಿಕೆಯು
ಹರಿಸ್ಮರಣವಿಲ್ಲದ ಹಾಡಿಕೆಯು
ಅರಣ್ಯರೋದನ ಪುರಂದರ ವಿಠಲ|

Chorage candrodaya sogasuvude
Jarage suryodaya sogasuvude
Sri ramanana katheyu kallage meccuvude|
Narige nayavillada celuvikeyu
Harismaranavillada hadikeyu
Aranyarodana purandara vithala|

 

4 thoughts on “ugabhoga by Purandara dasaru(Part 1)

Leave a comment