dasara padagalu · Jithamithra theertharu · MADHWA

Dasara pada On Jithamithra Theertharu

ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ||pa|

ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ||a.pa||

ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ ||1||

ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು ||2||

ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು ||3||

ಮರುತ ಸುಮತ ಶರಧಿ | ಸುಧಾರಕ | ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ||4||

ಕಂದುಕೊರಳ ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ ||5||

Kayo Jithamithra Yamikula nayaka sucharithra||pa||

Kayo kayo jitakayajata Sita
Kayo ninna pada toyajakeraguve ||a.pa||

Abayadatanemdu tvatpada | kabinamisuve bandu
Kubava kudhara pavi suba gunanidhi guru |
Vibudendrakara abuja sambuta. ||1||

Mauni kuladhisa | prarthipe banaprakasa
Dinaja namakara dhenu puratana
Gonada taru nija tanagaida guru ||2||

Tungamahima Barata | kumata dvijangama dvijanatha
Mangala krushna tarangini bima
Sangamadali sale | kangolisuva guru ||3||

Maruta sumata Saradhi | sudharaka | durita kadalidviradi
Dharani divija parivara namita nija
Karuni nambidenu mariyade niruta ||4||

Kandukorala vinuta | samasundarangri duta
Pondida janaraga vrunda kaliva ragu
Nandana munimana mandiravasa ||5||


ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ||

ಬಂದ ದುರಿತಗಳ ಕಳೆದು ಆ-
ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ||

ರಘುಕುಲ ವರಪುತ್ರ ರಾಮನ ಚರಣ ಕರುಣಾಪಾತ್ರ
ನಿಗಮೋಕ್ತಿಯ ಸೂತ್ರಫಾರ ಪ್ರವಚನರತ
ಸುಗುಣಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣ
ಪೊಗಳುವ ಅಪಾರ ಅಗಣಿತ ಮಹಿಮರ ||೧||

ವರಮಹಾತ್ಮೆ ತಿಳಿಸಿ ಮೊದಲಿಂ ಧರೆ ಆನಂದದಿ ಚರಿಸಿ
ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿ
ಧರೆಜನರಿಗೆ ಅರಿಯದೆ ಮರೆಯಾಗುತ
ಹರುಷದಿ ಗೋನದತರುವಲ್ಲಿರುವವರ ||೨||

ಮುದದಿ ಕೃಷ್ಣಾತಟಿಯ ಮಧ್ಯದಿ ಸದನದ ಪರಿಯ
ಸದಮಲ ಯತಿವರ್ಯ ತಪಮೌನದಲಿದ್ದುದನರಿಯ
ಒದಗಿ ನದಿಯು ಸೂಸುತ ಬರಲೇಳುದಿನ
ಕುದಯಾದವರ ಸುಪದಕಮಲಂಗಳ ||೩||

ಮಾಸಮಾರ್ಗಶೀರ್ಷಾರಾಧನೆಗಶೇಷ ದಿನ ಅಮಾ-
ವಾಸ್ಯ ದಾಸರು ಪ್ರತಿವರುಷ ಮಾಳ್ಪರು
ಲೇಸೆನಲು ಶ್ರುತಿಘೋಷ ಕಾಶಿ ಕ್ಷೇತ್ರಕೆ ಈ ಸ್ಥಳ ಮಿಗಿಲೈ
ದಾಸಜನಕೆ ಭೂರುಹ ಯತಿಪದಗಳ ||೪||

ಮಧ್ವಮತ ಗ್ರಂಥಸಾರದ ಪದ್ಧತಿ ತಿಳಿದಂಥ
ಅದ್ವೈತಪಂಥ ಮುರಿದು ಮತ ಉದ್ಧರಿಸಿದಂಥ
ರುದ್ರವಂದ್ಯಮೂರುತಿ ರಂಗವಿಠಲನ ಪದ-
ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ ||೫||

vandane mADirai yatikulacandrana pADirai ||pa||

banda duritagaLa kaLedu A-
nandapaDuva viBudEndra karOdBavara ||a.pa||

raGukula varaputra rAmana caraNa karuNApAtra
nigamOktiya sUtraPAra pravacanarata
suguNajitAmitra nagadhara SrI pannagaSayanana guNa
pogaLuva apAra agaNita mahimara ||1||

varamahAtme tiLisi modaliM dhare Anandadi carisi
niruta manava nilisi SrIhari karivaradana olisi
dharejanarige ariyade mareyAguta
haruShadi gOnadataruvalliruvavara ||2||

mudadi kRuShNAtaTiya madhyadi sadanada pariya
sadamala yativarya tapamaunadaliddudanariya
odagi nadiyu sUsuta baralELudina
kudayAdavara supadakamalangaLa ||3||

mAsamArgaSIrShArAdhanegaSESha dina amA-
vAsya dAsaru prativaruSha mALparu
lEsenalu SrutiGOSha kASi kShEtrake I sthaLa migilai
dAsajanake BUruha yatipadagaLa ||4||

madhvamata granthasArada paddhati tiLidantha
advaitapaMtha muridu mata uddharisidantha
rudravaMdyamUruti rangaviThalana pada-
padmArAdhaka prasiddha munIMdrara ||5||

One thought on “Dasara pada On Jithamithra Theertharu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s